ETV Bharat / bharat

ಜೋಶಿಮಠದಲ್ಲಿ ಭೂಕಂಪ ಸಾಧ್ಯತೆ: ವಿಜ್ಞಾನಿ ಪೂರ್ಣಚಂದರ್ ರಾವ್ - ಟರ್ಕಿಯಲ್ಲಿ ಭೂಕಂಪದಿಂದ ತೀವ್ರ ಹಾನಿ

ಕಟ್ಟಡ ಕಾಮಗಾರಿಗಳು ಗುಣಮಟ್ಟವಾಗಿಲ್ಲದ ಕಾರಣ ಭೂಕಂಪದಿಂದ ಟರ್ಕಿಯಲ್ಲಿ ಹೆಚ್ಚು ಹಾನಿಯಾಗಿದೆ. ಭಾರತದ ಜೋಶಿಮಠದಲ್ಲೂ ಭೂಕಂಪ ಸಂಭವಿಸಬಹುದು ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ.

Chance of an earthquake in Joshimath
Chance of an earthquake in Joshimath
author img

By

Published : Feb 8, 2023, 4:16 PM IST

ಹೈದರಾಬಾದ್: ಭೂಕಂಪವನ್ನು ತಡೆದುಕೊಳ್ಳದ, ಗುಣಮಟ್ಟವಿಲ್ಲದ ಕಟ್ಟಡಗಳನ್ನು ಕಟ್ಟಿರುವುದರಿಂದ ಟರ್ಕಿಯಲ್ಲಿ ಭೂಕಂಪದಿಂದ ತೀವ್ರ ಹಾನಿ ಉಂಟಾಗುತ್ತಿದೆ ಎಂದು ಎನ್‌ಜಿಆರ್‌ಐನ ಭೂಕಂಪ ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿ ಪೂರ್ಣಚಂದರ್ ರಾವ್ ಹೇಳಿದರು. ಅವರು ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ಭೂಕಂಪನದ ತೀವ್ರತೆ 7.8 ಆಗಿದ್ದು ರಾತ್ರಿ ಸಂಭವಿಸಿದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿದೆ. ಭೂಕಂಪದ ಕೇಂದ್ರಬಿಂದು 18 ಕಿ.ಮೀ ಆಳದಲ್ಲಿದ್ದು, ತೀವ್ರತೆ ಹೆಚ್ಚಿತ್ತು. 30 ಕಿಲೋಮೀಟರ್ ಆಳವಿದ್ದಿದ್ದರೆ ತೀವ್ರತೆ ಇಷ್ಟು ಹೆಚ್ಚಿರುತ್ತಿರಲಿಲ್ಲ. ಸದ್ಯಕ್ಕೆ ಲಭ್ಯವಿರುವ ತಂತ್ರಜ್ಞಾನವೆಂದರೆ ಭೂಕಂಪದ ಮುನ್ನೆಚ್ಚರಿಕೆ ಮಾತ್ರ. ಭೂಕಂಪ ಯಾವಾಗ ಸಂಭವಿಸುತ್ತದೆ, ಎಷ್ಟು ಬಾರಿ ಬರುತ್ತದೆ ಎಂಬ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಜೋಶಿಮಠದಲ್ಲೂ ಭೂಕಂಪ ಸಂಭವಿಸುವ ಸಾಧ್ಯತೆ ಇದೆ. ಹಿಮಾಲಯದ ಸುತ್ತಲಿನ ಪಾರ್ಶ್ವಗಳಲ್ಲಿ ಹೆಚ್ಚಿನ ಭೂಕಂಪಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಪೂರ್ಣಚಂದರ್ ರಾವ್ ಹೇಳಿದ್ದಾರೆ.

1897, 1905, 1934 ಮತ್ತು 1950 ರಲ್ಲಿ ಅಲ್ಲಿ ತೀವ್ರ ಭೂಕಂಪಗಳು ಸಂಭವಿಸಿದ್ದವು. 1934 ರ ನಂತರ ನೇಪಾಳ ಮತ್ತು ಉತ್ತರಾಖಂಡದಲ್ಲಿ ಯಾವುದೇ ದೊಡ್ಡ ಭೂಕಂಪ ಸಂಭವಿಸಲಿಲ್ಲ. ಭವಿಷ್ಯದಲ್ಲಿ ಆ ಪ್ರದೇಶಗಳಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ಇದೆ. ಭೂಕಂಪಗಳ ತೀವ್ರತೆಯನ್ನು ತಡೆದುಕೊಳ್ಳುವ ಹಾಗೆ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರವು ವಿಶೇಷ ಮಾನದಂಡಗಳನ್ನು ನಿಗದಿಪಡಿಸಿದೆ. ಕೆಲವರು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಭೂಕಂಪವನ್ನು ತಡೆದುಕೊಳ್ಳಲು ಹಳೆಯ ಕಟ್ಟಡಗಳನ್ನು ಮರುಹೊಂದಿಸುವ ಮೂಲಕ ಅವುಗಳನ್ನು ಬಲಪಡಿಸುವ ಅವಕಾಶವಿದೆ ಎಂದು ಪೂರ್ಣಚಂದರ್ ರಾವ್ ವಿವರಿಸಿದರು.

ಸುಪ್ರೀಂ ಕೋರ್ಟ್‌ ಆದೇಶದ ತರುವಾಯ ಜೋಶಿಮಠ ಮುಳುಗಡೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉತ್ತರಾಖಂಡದ ಹೈಕೋರ್ಟ್ ಪರಿಶೀಲಿಸುತ್ತಿದೆ ಎಂದು ದೆಹಲಿ ಹೈಕೋರ್ಟ್‌ಗೆ ಮಂಗಳವಾರ ಮಾಹಿತಿ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ಪೀಠವು ಈ ವಿಷಯವನ್ನು ಪರಿಶೀಲಿಸಲು ಮತ್ತು ಸಂತ್ರಸ್ತ ಕುಟುಂಬಗಳಿಗೆ ಶೀಘ್ರವೇ ಪುನರ್ವಸತಿ ಕಲ್ಪಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲ ರೋಹಿತ್ ದಾಂಡ್ರಿಯಾಲ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ.

ಅರ್ಜಿದಾರರ ಮನವಿಗಳನ್ನು ಈಗಾಗಲೇ ಪೂರೈಸಲಾಗಿದೆ ಎಂದು ಉತ್ತರಾಖಂಡ ಸರ್ಕಾರದ ವಕೀಲರು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು. ಎರಡು ವಿಷಯಗಳಿವೆ. ಅವರು (ಅರ್ಜಿದಾರರು) ಉನ್ನತಾಧಿಕಾರ ಸಮಿತಿ ಮತ್ತು ಪುನರ್ವಸತಿಗಾಗಿ ಕೇಳುತ್ತಿದ್ದಾರೆ. ಎರಡೂ ಸಮಸ್ಯೆಗಳನ್ನು ಸುಪ್ರೀಂ ಕೋರ್ಟ್ ಉತ್ತರಾಖಂಡಕ್ಕೆ ಕಳುಹಿಸಿದೆ. ಈ ವಿಷಯಗಳು ಈಗ ಉತ್ತರಾಖಂಡ ಹೈಕೋರ್ಟ್ ಮುಂದೆ ಇವೆ ಅವರು ಹೇಳಿದರು. ನಂತರ ಅರ್ಜಿದಾರರು ಹೈಕೋರ್ಟ್‌ನಿಂದ ಅರ್ಜಿಯನ್ನು ಹಿಂತೆಗೆದುಕೊಂಡರು.

ಜೋಶಿಮಠದ ಸಂತ್ರಸ್ತ ಕುಟುಂಬಗಳಿಗೆ ಅಧಿಕಾರಿಗಳು ಪುನರ್ವಸತಿ ನೀಡುತ್ತಿದ್ದಾರೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಎಸ್‌ಡಿಆರ್‌ಎಫ್ ಅನ್ನು ಸಹ ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಕಳೆದ ತಿಂಗಳು ಉತ್ತರಾಖಂಡ ಸರ್ಕಾರ ಪೀಠಕ್ಕೆ ತಿಳಿಸಿತ್ತು. ಪುನರ್ವಸತಿ ಪ್ಯಾಕೇಜ್ ಸಿದ್ಧಪಡಿಸಲಾಗುತ್ತಿದೆ ಮತ್ತು ಸಾಕಷ್ಟು ಪರಿಹಾರ ಕಾರ್ಯಗಳು ನಡೆಯುತ್ತಿವೆ ಎಂದು ಅದು ಹೇಳಿಕೊಂಡಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ: 15 ಮನೆಗಳಲ್ಲಿ ಬಿರುಕು, ಸುರಕ್ಷತಾ ಸ್ಥಳಗಳಿಗೆ ತೆರಳಿದ ನಿವಾಸಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.