ಬಿಕಾನೇರ್(ರಾಜಸ್ಥಾನ): 2 ದಿನಗಳ ಹಿಂದಷ್ಟೇ ಉತ್ತರಪ್ರದೇಶದಲ್ಲಿ ಭೂಮಿ ಕಂಪಿಸಿದ ಬಳಿಕ ಇದೀಗ ರಾಜಸ್ಥಾನದ ಬಿಕನೇರ್ನಲ್ಲಿ ನಡುಕ ಕಂಡುಬಂದಿದೆ. ಭಾನುವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 4.1 ರಷ್ಟು ತೀವ್ರತೆ ದಾಖಲಾಗಿದೆ. ಈವರೆಗೂ ಯಾವುದೇ ಪ್ರಾಣ, ಆಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ.
ಬಿಕನೇರ್ ಸುತ್ತಮತ್ತಲಿನ 236 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಭೂಮಿ ಕಂಪಿಸಿದ್ದು, 10 ಕಿಮೀ ಆಳದಿಂದ ಕಂಪನಗಳು ಉಂಟಾಗಿವೆ. ರಾತ್ರಿ 2 ಗಂಟೆ ಸುಮಾರಿನಲ್ಲಿ ಜನರು ನಿದ್ರೆಯಲ್ಲಿದ್ದಾಗ ಭೂಮಿ ನಡುಗಿದೆ.
ಶನಿವಾರದಂದು ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಭೂಮಿ ಕಂಪಿಸಿತ್ತು. ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿತ್ತು. ಭೂಮಿಯಿಂದ 82 ಕಿಮೀ ಆಳದಲ್ಲಿ ಕಂಪನಗಳು ಎದ್ದಿದ್ದವು.
ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: 22 ಶಾಲೆಗಳಿಗೆ ಜಿಲ್ಲಾಡಳಿತದಿಂದ ರಜೆ ಘೋಷಣೆ