ETV Bharat / bharat

ಜಾರ್ಖಂಡ್​ನ ಪಶ್ಚಿಮ ಸಿಂಗ್ಭೂಮ್‌ನಲ್ಲಿ ಭೂಕಂಪನ

ಭೂಕಂಪದ ಸಂದರ್ಭದಲ್ಲಿ ಜನರು ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವಂತೆ ಹವಾಮಾನ ತಜ್ಞ ಆನಂದ್ ಅನೇಕ ಸಲಹೆಗಳನ್ನು ನೀಡಿದ್ದಾರೆ. ಕೆಲ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಂತಹ ಸನ್ನಿವೇಶಗಳಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಬಹುದು ಎಂದು ಹೇಳಿದ್ದಾರೆ..

ಜಾರ್ಖಂಡ್​ನ ಪಶ್ಚಿಮ ಸಿಂಗ್ಭೂಮ್ ನಲ್ಲಿ ಭೂಕಂಪನ

author img

By

Published : Oct 3, 2021, 7:47 PM IST

ರಾಂಚಿ : ಜಾರ್ಖಂಡ್‌ನಲ್ಲಿ ಇಂದು ಮಧ್ಯಾಹ್ನ ಭೂಕಂಪನದ ಅನುಭವವಾಗಿದೆ. ಇದರ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.1 ಎಂದು ವರದಿಯಾಗಿದೆ. ಮಧ್ಯಾಹ್ನ 2:22ಕ್ಕೆ ಸಂಭವಿಸಿದ ಭೂಕಂಪದ ನಡುಕದಿಂದಾಗಿ ಜನ ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದಾರೆ.

ರಾಂಚಿಯ ಹವಾಮಾನ ಕೇಂದ್ರದ ವಿಜ್ಞಾನಿ ಅಭಿಷೇಕ್ ಆನಂದ್, ಭೂಕಂಪದ ಕೇಂದ್ರ ಬಿಂದುವು ಭೂಮಿಯ ಮೇಲ್ಮೈಗಿಂತ 10 ಕಿ.ಮೀ ಕೆಳಗೆ ಇದೆ ಎಂದು ಹೇಳಿದ್ದಾರೆ. ಭೂಕಂಪದ ಕಂಪನವು ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಕಂಡು ಬಂದಿದೆ. ಆದರೆ, ಭೂಕಂಪದ ತೀವ್ರತೆಯಿಂದಾಗಿ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿಲ್ಲ.

ಭೂಕಂಪದ ಸಂದರ್ಭದಲ್ಲಿ ಜನರು ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವಂತೆ ಹವಾಮಾನ ತಜ್ಞ ಆನಂದ್ ಅನೇಕ ಸಲಹೆಗಳನ್ನು ನೀಡಿದ್ದಾರೆ. ಕೆಲ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಂತಹ ಸನ್ನಿವೇಶಗಳಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

  • ಭೂಕಂಪದ ಸಂದರ್ಭದಲ್ಲಿ ಗಟ್ಟಿಮುಟ್ಟಾದ ಪೀಠೋಪಕರಣ ಇತ್ಯಾದಿಗಳ ಅಡಿಯಲ್ಲಿ ಅಡಗಿಕೊಳ್ಳಿ
  • ಮನೆಯಲ್ಲಿ ಯಾವುದೇ ಪೀಠೋಪಕರಣಗಳು ಇಲ್ಲದಿದ್ದರೆ, ನಿಮ್ಮ ತಲೆ ಮತ್ತು ಮುಖವನ್ನು ನಿಮ್ಮ ಕೈಗಳಿಂದ ಮುಚ್ಚಿ ಮತ್ತು ಕೋಣೆಯ ಯಾವುದಾದರೂ ಮೂಲೆಯಲ್ಲಿ ಕುಳಿತುಕೊಳ್ಳಿ.
  • ಸಾಧ್ಯವಾದರೆ, ಮನೆಯ ಹೊರಗೆ ಸುರಕ್ಷಿತ ಸ್ಥಳಕ್ಕೆ ತೆರಳಿ
  • ಭೂಕಂಪದ ಸಮಯದಲ್ಲಿ ಕಟ್ಟಡಗಳು, ಮರಗಳು, ವಿದ್ಯುತ್ ಕಂಬಗಳಿಂದ ದೂರವಿರಿ
  • ಭೂಕಂಪದಿಂದಾಗಿ ಭಗ್ನಾವಶೇಷಗಳ ಅಡಿಯಲ್ಲಿ ಹೂತುಹೋದರೆ, ಚಲಿಸುವ ಬದಲು ಗೋಡೆಯನ್ನು ಲಘುವಾಗಿ ತಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.