ETV Bharat / bharat

ಅಂಡಮಾನ್​ ನಿಕೋಬಾರ್​ನಲ್ಲಿ 5.8 ತೀವ್ರತೆಯ ಭೂಕಂಪ - ಈಟಿವಿ ಭಾರತ ಕನ್ನಡ

ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪಗಳಲ್ಲಿ ನಿನ್ನೆ 5.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ.

ಅಂಡಮಾನ್​ ನಿಕೋಬಾರ್​ನಲ್ಲಿ ಭೂಕಂಪ
ಅಂಡಮಾನ್​ ನಿಕೋಬಾರ್​ನಲ್ಲಿ ಭೂಕಂಪ
author img

By

Published : Jul 29, 2023, 10:25 AM IST

ಪೋರ್ಟ್​ಬ್ಲೇರ್​ (ಅಂಡಮಾನ್ ಮತ್ತು ನಿಕೋಬಾರ್) : ಶನಿವಾರ ರಾತ್ರಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು 69 ಕಿ.ಮೀ ಆಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿದೆ. ಇದಕ್ಕೂ ಮುನ್ನ ಜುಲೈ 9 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕ್ಯಾಂಪ್‌ಬೆಲ್ ಕೊಲ್ಲಿಯ ಆಗ್ನೇಯಕ್ಕೆ ರಾತ್ರಿ 7:39ಕ್ಕೆ 5.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರ ಕೇಂದ್ರ ಬಿಂದು 70 ಕಿ.ಮೀ ಆಳದಲ್ಲಿತ್ತು ಎಂದು ತಿಳಿದುಬಂದಿದೆ.

ಏಪ್ರಿಲ್​ ತಿಂಗಳಲ್ಲಿ ಒಂದೇ ದಿನ 6 ಬಾರಿ ಕಂಪನ: ಕಳೆದ ಏಪ್ರಿಲ್​ 10 ರಂದು ಮಧ್ಯಾಹ್ನದಿಂದ, ನಸುಕಿನ ಜಾವದವರೆಗೆ ಅಂಡಮಾನ್​ ಮತ್ತು ನಿಕೋಬಾರ್ ದ್ವೀಪದಲ್ಲಿ 6 ಬಾರಿ ಭೂಮಿ ಕಂಪಿಸಿತ್ತು, ಭೂಕಂಪನದಿಂದ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದರು.

ಇಲ್ಲಿನ ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ ನಸುಕಿನ ಜಾವ 2.26 ಗಂಟೆಯ ಸುಮಾರಿಗೆ ಭೂಮಿ ಕಂಪಿಸಿತ್ತು. ಕ್ಯಾಂಪ್​ಬೆಲ್​ ಕೊಲ್ಲಿಯ ಉತ್ತರದಿಂದ 220 ಕಿಲೋ ಮೀಟರ್​ ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿತ್ತು. 32 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ. 4.6ರಷ್ಟು ತೀವ್ರತೆಯ ಕಂಪನ ಉಂಟಾಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಅಧ್ಯಯನ ಕೇಂದ್ರ ತಿಳಿಸಿತ್ತು.

ಕ್ಯಾಂಪ್​ಬೆಲ್​ ಕೊಲ್ಲಿಯಲ್ಲಿ ಭೂಕಂಪ ಸಂಭವಿಸುವ ಒಂದು ಗಂಟೆ ಮುನ್ನ ಅಂಡಮಾನ್​ನ ಡಿಗ್ಲಿಪುರ್​ ಎಂಬಲ್ಲಿ ಭೂಮಿ ಕಂಪಿಸಿತ್ತು. ನಸುಕಿನ ಜಾವ 1.07 ಗಂಟೆಯ ಸುಮಾರಿಗೆ ಭೂಮಿ ಕಂಪಿಸಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿತ್ತು. ಡಿಗ್ಲಿಪುರ್​ ಪೂರ್ವದಿಂದ ಸುಮಾರು 34 ಕಿ.ಮೀ ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿತ್ತು, 15 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.3.9ರಷ್ಟು ತೀವ್ರತೆಯ ಭೂಮಿ ಕಂಪಿಸಿತ್ತು ಎಂದು ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್​ ಮೂಲಕ ಹೇಳಿತ್ತು. ಇದಕ್ಕೂ ಮುನ್ನು ಐದು ಗಂಟೆಗಳ ಅವಧಿಯಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದ್ದರ ಬಗ್ಗೆ ವರದಿಯಾಗಿತ್ತು.

ವರ್ಷದ ಮೂರನೇ ಭೂಕಂಪ: ಈ ವರ್ಷದಲ್ಲಿ ಇಲ್ಲಿಯವರೆಗೆ ಈ ದ್ವೀಪಗಳಲ್ಲಿ ಮೂರು ಭೂಕಂಪಗಳು ಸಂಭವಿಸಿವೆ. ಮಾರ್ಚ್‌ನಲ್ಲಿ ನಿಕೋಬಾರ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿತ್ತು. ಇದರ ತೀವ್ರತೆ 5 ಆಗಿತ್ತು. ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪವು 10 ಕಿ.ಮೀ ಆಳದಲ್ಲಿ ಸಂಭವಿಸಿತ್ತು. ಕಳೆದ ವರ್ಷ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 24 ಗಂಟೆಗಳ ಅವಧಿಯಲ್ಲಿ 3.8 ರಿಂದ 5 ರವರೆಗೆ 22 ಭೂಕಂಪಗಳು ಸಂಭವಿಸಿದ್ದವು.

ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ನಡುಗಿದ ಭೂಮಿ: 3.4 ತೀವ್ರತೆಯ ಕಂಪನ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.