ETV Bharat / bharat

ಬಾಲ ಕುರುಡುತನ: ರೋಗದ ಪತ್ತೆ ಮತ್ತು ಚಿಕಿತ್ಸೆಯ ಅವಶ್ಯಕತೆ ಬಗ್ಗೆ ನಿಮಗೆಷ್ಟು ಗೊತ್ತು? - ರೆಟಿನೋಪತಿ ಆಫ್ ಪ್ರಿಮೆಚುರಿಟಿ

ಕಣ್ಣಿನ ದೋಷಗಳನ್ನು ಮೊದಲೇ ಸರಿಪಡಿಸುವುದೇಕೆ ಮುಖ್ಯ? ಬಾಲಕುರುಡುತನ ಕಾಡಲು ಕಾರಣವೇನು? ಕುರುಡುತನಕ್ಕೆ ನೀವು ಹೇಗೆ ಚಿಕಿತ್ಸೆ ನೀಡುತ್ತೀರಿ? ಇಂತಹ ಅನೇಕ ಪ್ರಶ್ನೆಗಳಿಗೆ ದಿಯಾ ಪೀಡಿಯಾಟ್ರಿಕ್ ಐ ಕೇರ್​​ ಹೈದರಾಬಾದ್​​ನ ಡಾ.ಸುಷ್ಮಾ ರೆಡ್ಡಿ ಕಟಕುರಿ ಉತ್ತರಿಸಿದ್ದಾರೆ.

blindness
ಬಾಲಕುರುಡುತನ
author img

By

Published : Jul 18, 2021, 6:18 PM IST

ಆರ್‌ಒಪಿ (ರೆಟಿನೋಪತಿ ಆಫ್ ಪ್ರಿಮೆಚುರಿಟಿ) ತರಹದ ಕಾಯಿಲೆಗಳು ಕಣ್ಣಿನ ದೃಷ್ಠಿಗೆ ಸಾಕಷ್ಟು ಹಾನಿ ಉಂಟುಮಾಡುತ್ತವೆ. ವಯಸ್ಕರಲ್ಲಿ ಸಾಮಾನ್ಯ ದೃಷ್ಟಿ ಪಕ್ವತೆಯ ವೈಫಲ್ಯವನ್ನು ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ, ಬಾಲ ಕುರುಡುತನಕ್ಕೆ ಬಾಲ್ಯಾವಸ್ಥೆಯಲ್ಲೇ ಚಿಕಿತ್ಸೆ ನೀಡುವ ತುರ್ತು ಇದೆ.

ಇದು ವಯಸ್ಕರಿಗೆ ಅಗತ್ಯವಾಗಿ ಅನ್ವಯಿಸುವುದಿಲ್ಲ. ರೆಟಿನೋಬ್ಲಾಸ್ಟೊಮಾ (ಕಣ್ಣಿನ ಕ್ಯಾನ್ಸರ್) ಅನ್ನು ಸಹ ಆರಂಭದಲ್ಲೇ ಕಂಡುಹಿಡಿಯಬೇಕು ಮತ್ತು ಮೊದಲೇ ಚಿಕಿತ್ಸೆ ನೀಡಬೇಕಾಗುತ್ತದೆ. ರೆಟಿನೋಬ್ಲಾಸ್ಟೊಮಾದ ಆರಂಭಿಕ ಲಕ್ಷಣಗಳೆಂದರೆ ಕಣ್ಣೀರು, ಕಣ್ಣು ಕೆಂಪಾಗುವುದು, ಮುಂತಾದ ರೋಗ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳಬಹುದು. ನೇತ್ರಶಾಸ್ತ್ರಜ್ಞರಿಂದ ಸಂಪೂರ್ಣ ಕಣ್ಣಿನ ಪರೀಕ್ಷೆಯಿಂದ ಮಾತ್ರ ಇದನ್ನು ಕಂಡುಹಿಡಿಯಬಹುದು.

ಆದ್ದರಿಂದ, ಯಾವುದೇ ಸೌಮ್ಯ ಲಕ್ಷಣಗಳಿದ್ದರೂ ಸಹ ಪ್ರಮಾಣೀಕೃತ ವೈದ್ಯರಿಂದ ತಪಾಸಣೆ ಮಾಡುವುದು ಯಾವಾಗಲೂ ಉತ್ತಮ. ಆಗ ಸರಳ ವಕ್ರೀಕಾರಕ ದೋಷಗಳಂತಹ ಇತರ ಸಮಸ್ಯೆಗಳನ್ನು ಸಹ ಆರಂಭದಲ್ಲಿಯೇ ಪತ್ತೆ ಹಚ್ಚಬಹುದು ಮತ್ತು ಸಮಯಕ್ಕೆ ಸರಿಯಾಗಿ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ಜೀವನಪೂರ್ತಿ ದೃಷ್ಠಿದೋಷ ಎದುರಿಸಬೇಕಾಗುತ್ತೆ.

ದುರದೃಷ್ಟವಶಾತ್, ಈ ಸಮಸ್ಯೆಗಳು ಯಾವುದೇ ಪ್ರಮುಖ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ ಮತ್ತು ಚಿಕ್ಕ ಮಕ್ಕಳು ದೃಷ್ಟಿ ಮಂದವಾಗುವುದರ ಬಗ್ಗೆ ಹೇಳಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಸರಿಯಾದ ವಯಸ್ಸಿನಲ್ಲಿ ತಪಾಸಣೆ ಮಾಡುವುದು ಮತ್ತು ಅವರ ದೃಷ್ಟಿ ಸರಿಯಿದೆಯೇ ಖಚಿತಪಡಿಸಿಕೊಳ್ಳುವುದು ಪೋಷಕರ ಜವಾಬ್ದಾರಿ. ಆದ್ದರಿಂದ, ಪ್ರತಿ ಮಗುವಿಗೆ 1 ವರ್ಷಕ್ಕಿಂತ ಮೊದಲು ಕನಿಷ್ಠ ಒಂದು ಬಾರಿ ಕಣ್ಣಿನ ತಪಾಸಣೆ ನಡೆಸಬೇಕು ಮತ್ತು ನಂತರ 3-4 ವರ್ಷ ವಯಸ್ಸಿನಲ್ಲಿ ಮತ್ತು ವರ್ಷಕ್ಕೊಮ್ಮೆ 15 ವರ್ಷದವರೆಗೆ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಬೇಕು.

ಕುರುಡುತನವನ್ನು ಹೇಗೆ ತಡೆಯಬಹುದು..

ಕುರುಡುತನಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ..

  • ಸಾಂಪ್ರಾದಾಯಿಕ ಔಷಧಿ ಬಳಕೆ- ದಡಾರ ಮತ್ತು ವಿಟಮಿನ್ ಎ ಕೊರತೆಯಿಂದಾಗಿ ಕಾರ್ನಿಯಲ್ ಸೋಂಕು ಉಂಟಾಗುತ್ತದೆ.
  • ಗುಣಪಡಿಸಬಹುದಾದ ಸಮಸ್ಯೆಗಳು
  • ರೆಟಿನೋಪತಿ ಆಫ್ ಪ್ರಿಮೆಚುರಿಟಿ
  • ರೆಟಿನೋಬ್ಲಾಸ್ಟೊಮಾ
  • ಅನುವಂಶಿಕವಾದ ರೆಟಿನಾ ಸಮಸ್ಯೆಗಳು
  • ವಕ್ರೀಕಾರಕ ದೋಷಗಳು

ಆದ್ದರಿಂದ, ಇವುಗಳನ್ನು ನಿಭಾಯಿಸಲು ಪ್ರತಿ ಮಗುವಿಗೆ ಸಂಪೂರ್ಣ ರೋಗನಿರೋಧಕ ಶಕ್ತಿಗಾಗಿ ವಿಟಮಿನ್ ಎ ಪೂರೈಕೆಯು ಮೊದಲ ಹಂತವಾಗಿದೆ.

ಗುಣಪಡಿಸಬಹುದಾದ ಕಾಯಿಲೆಗಳ ಬಗ್ಗೆ ಹೇಳುವುದಾದರೆ..

ಪ್ರತಿ ಮಗುವಿಗೆ ಹುಟ್ಟಿನಿಂದಲೇ ಕಣ್ಣಿನ ತಪಾಸಣೆ ಸಿಕ್ಕರೆ, ಯಾವುದೇ ಪದವೀಧರ ವೈದ್ಯರು/ಶಿಶುವೈದ್ಯರು ಮಾಡಬಹುದಾದ ರೆಡ್ ರಿಫ್ಲೆಕ್ಸ್ ಟೆಸ್ಟ್ ಎಂಬ ಸರಳ ಪರೀಕ್ಷೆಯು ಹುಟ್ಟಿನಿಂದಲೇ ತೀವ್ರವಾದ ಪರಿಸ್ಥಿತಿಗಳನ್ನು ಪತ್ತೆ ಮಾಡುತ್ತದೆ. ಆದರೂ ತಜ್ಞರಿಂದ ಹೆಚ್ಚಿನ ಮೌಲ್ಯಮಾಪನದ ಅಗತ್ಯವಿರುತ್ತದೆ. ಮತ್ತು ಪ್ರತಿ ಮಗುವಿಗೆ ಒಂದು ವರ್ಷದ ಮೊದಲು ಕಣ್ಣಿನ ತಪಾಸಣೆ ಮತ್ತು 3-4 ವರ್ಷ ವಯಸ್ಸಿನಲ್ಲಿನ ತಪಾಸಣೆ ಬಾಲ್ಯದ ಕುರುಡುತನವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ವೃತ್ತಿಪರ ವೈದ್ಯರ ಅಗತ್ಯವಿದೆ..

ಸಾಮಾನ್ಯ ವೈದ್ಯರು ಅಥವಾ ಮಕ್ಕಳ ವೈದ್ಯರಿಂದ ಆರಂಭಿಕ ಮೌಲ್ಯಮಾಪನದಲ್ಲಿ ಕುರುಡುತನದ ಅನೇಕ ಪರಿಸ್ಥಿತಿಗಳನ್ನು ಕಂಡು ಹಿಡಿಯಬಹುದಾದರೂ ಹೆಚ್ಚಿನ ಮೌಲ್ಯಮಾಪನ ಮತ್ತು ಚಿಕಿತ್ಸೆಗಾಗಿ ತಜ್ಞವೈದ್ಯರ ಅಗತ್ಯವಿದೆ.

ರೆಟಿನಲ್ ಲೇಸರ್‌ಗಳು ಮತ್ತು ಶಸ್ತ್ರಚಿಕಿತ್ಸೆಗಳು, ರೆಟಿನೋಬ್ಲಾಸ್ಟೊಮಾ ಚಿಕಿತ್ಸೆ, ಕಾರ್ನಿಯಲ್ ಶಸ್ತ್ರಚಿಕಿತ್ಸೆಗಳು, ಆಂಬ್ಲಿಯೋಪಿಯಾ ನಿರ್ವಹಣೆ, ಅವುಗಳನ್ನು ನಿಭಾಯಿಸಬಲ್ಲ ತಜ್ಞ, ನುರಿತ ಮತ್ತು ತರಬೇತಿ ಪಡೆದ ವೃತ್ತಿಪರರ ಅಗತ್ಯವಿದೆ. ಶಿಶುಗಳು ಮತ್ತು ಮಕ್ಕಳಲ್ಲಿ ಕಣ್ಣಿನ ಸಮಸ್ಯೆಗಳನ್ನು ನಿಭಾಯಿಸಲು ಸ್ನಾತಕೋತ್ತರ ಪದವಿಯ ನಂತರ ವಿಶೇಷ ತರಬೇತಿ ಪಡೆದ ತಜ್ಞರ ಅವಶ್ಯಕತೆ ಹೆಚ್ಚಿರುತ್ತದೆ.

ಈ ಕುರಿತ ನಿಮ್ಮ ಸಂದೇಹಗಳನ್ನು sushamakatukuri@yahoo.in ಸಂಪರ್ಕಿಸಿ, ಹೆಚ್ಚಿನ ಮಾಹಿತಿ ಪಡೆಯಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.