ನವದೆಹಲಿ: ಗೌಪ್ಯತೆ ನಿಯಮ ಉಲ್ಲಂಘನೆಯ ಮೂಲಕ ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಪಬ್ಜಿ ಮೊಬೈಲ್ ಗೇಮಿಂಗ್ ಇದೀಗ ಮತ್ತೆ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಸೌತ್ ಕೊರಿಯಾ ಮೂಲದ ಗೇಮಿಂಗ್ ಡೆವಲಪರ್ ಕಂಪನಿ ಕ್ರಾಫ್ಟಾನ್ ‘ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ’ ಹೆಸರಲ್ಲಿ ಹೊಸದಾಗಿ ಲಾಂಚ್ ಆಗುತ್ತಿದೆ.
ಈ ಹಿನ್ನೆಲೆ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಎಂಬಂತೆ ಗೂಗಲ್ ಪ್ಲೆ ಸ್ಟೋರ್ನಲ್ಲಿ ಆಯ್ದ ಗೇಮರ್ಗಳಿಗೆ ಆರಂಭಿಕ ಬಳಕೆಗೆ ಅವಕಾಶ ನೀಡಿದೆ.ಈಗಾಗಲೇ ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದ್ದು, ಜೂನ್ನಲ್ಲಿಯೇ ಲಾಂಚ್ ಮಾಡುವುದಾಗಿ ಕ್ರಾಫ್ಟಾನ್ ತಿಳಿಸಿದೆ. ಅಲ್ಲದೇ ಆರಂಭಿಕ ಬಳಕೆಯಲ್ಲಿ ಗೇಮಿಂಗ್ ಪರ್ಚೇಸ್ಗೆ ಅವಕಾಶ ನೀಡಲಾಗಿದ್ದು, ಗೇಮರ್ಗಳು ತಮ್ಮ ನೆಚ್ಚಿನ ಪ್ಯಾಕ್ ಕೊಳ್ಳಲು ಅವಕಾಶ ನೀಡಲಾಗಿದೆ.
ಈ ಮೊದಲು ಗೂಗಲ್ ಪ್ಲೆ ಸ್ಟೋರ್ನಲ್ಲಿ ಪೂರ್ವ ನೋಂದಣಿಗೆ ಕಂಪನಿ ಅವಕಾಶ ನೀಡಿತ್ತು. ಈ ವೇಳೆ, 1 ವಾರದೊಳಗೆ ಸುಮಾರು 20 ಮಿಲಿಯನ್ ಮಂದಿ ರಿಜಿಸ್ಟ್ರೇಷನ್ ಮಾಡಿದ್ದರು. ಇನ್ನು ಭಾರತದಲ್ಲಿ ಮಾತ್ರ ಲಾಂಚ್ ಆಗುತ್ತಿರುವ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಹಳೆಯ ಪಬ್ಜಿ ಗೇಮಿಂಗ್ನಂತೆಯೇ ಕಾರ್ಯ ನಿರ್ವಹಿಸಲಿದೆ. ಆದರೆ, ಸಂಪೂರ್ಣ ಹಿಡಿತ ಕ್ರಾಫ್ಟಾನ್ ಸಂಸ್ಥೆಗೆ ಸೇರಿರಲಿದೆ.
ಇದರಲ್ಲಿ ಹೊಸದಾಗಿ 3ಡಿ ಸೌಂಡ್, ಹೊಸ ಮ್ಯಾಪಿಂಗ್, ಸೇರಿಸಲಾಗಿದ್ದು, ಇಂಡಿಯನ್ ಮ್ಯಾಪಿಂಗ್ ಒಳಗೊಂಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಜೊತೆಗೆ ಈ ಗೇಮ್ ಅನ್ನು ಆ್ಯಂಡ್ರಾಯ್ಡ್ 5.1.1 ವರ್ಷನ್ ಮೊಬೈಲ್ನಿಂದ ಹಿಡಿದು ಲೇಟೆಸ್ಟ್ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಸದ್ಯ ಪಬ್ಜಿ ರೀಲಾಂಚಿಂಗ್ ಖಚಿತವಾಗಿದ್ದು, ದಿನಾಂಕ ನಿಗದಿ ಬಾಕಿ ಉಳಿದಿದೆ.