ETV Bharat / bharat

ಇದು ಬದಲಾದ ಭಾರತ, ತಿರುಗೇಟು ನಿಶ್ಚಿತ: ಚೀನಾ, ಪಾಕ್​ಗೆ ಜೈಶಂಕರ್ ಎಚ್ಚರಿಕೆ - ವಿದೇಶಾಂಗ ಸಚಿವ ಎಸ್ ಜೈಶಂಕರ್

ಇಂದಿನ ಭಾರತ ಮೊದಲಿನ ಭಾರತವಲ್ಲ. ಇದು ಬದಲಾಗಿರುವ ಭಾರತ ಎಂದು ಸಚಿವ ಎಸ್.ಜೈಶಂಕರ್ ಎಚ್ಚರಿಕೆ ನೀಡಿದ್ದಾರೆ.

ಇದು ಬದಲಾದ ಭಾರತ, ತಿರುಗೇಟು ನೀಡುತ್ತದೆ: ಚೀನಾ, ಪಾಕ್​ಗೆ ಜೈಶಂಕರ್ ಎಚ್ಚರಿಕೆ
http://10.10.50.85:6060/reg-lowres/13-April-2023/eam-90_1304newsroom_1681385585_171.png
author img

By

Published : Apr 13, 2023, 5:08 PM IST

ಕಂಪಾಲಾ (ಉಗಾಂಡಾ) : ಇಂದಿನ ಭಾರತ ಮೊದಲಿನಂತಲ್ಲ, ಇದು ಬದಲಾದ ಭಾರತ ಎಂಬುದು ಗಡಿಯಾಚೆಯಿಂದ ಭಯೋತ್ಪಾದನೆಯನ್ನು ಭಾರತದೊಳಕ್ಕೆ ನುಗ್ಗಿಸುತ್ತಿರುವವರಿಗೆ ಈಗ ಅರಿವಾಗಿದೆ. ಅಷ್ಟೇ ಅಲ್ಲ ಇಂಥ ಪ್ರಯತ್ನಗಳಿಗೆ ಭಾರತ ತಿರುಗೇಟು ನೀಡುತ್ತದೆ ಎಂಬುದು ಕೂಡ ಅವರಿಗೆ ಗೊತ್ತಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದರು. ಪಾಕಿಸ್ತಾನ ಮತ್ತು ಚೀನಾಗಳಿಂದ ಎದುರಾಗುವ ಭದ್ರತಾ ಅಪಾಯಗಳನ್ನು ಹಿಮ್ಮೆಟ್ಟಿಸಲು ಭಾರತ ಸಮರ್ಥವಾಗಿದೆ ಎಂದು ಅವರು ಪ್ರತಿಪಾದಿಸಿದರು. ಬುಧವಾರ ಉಗಾಂಡಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, ದೇಶವನ್ನು ನವ ಭಾರತವಾಗಿ ಪರಿವರ್ತಿಸುವ ಕುರಿತು ಮಾತನಾಡಿದರು.

ಭಾರತವು ತನ್ನ ಗಡಿಯಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ ಜೈಶಂಕರ್, ಇಂದು ಜನರು ಎದ್ದು ನಿಲ್ಲಲು ಸಿದ್ಧವಿರುವ ವಿಭಿನ್ನ ಭಾರತವನ್ನು ನೋಡುತ್ತಾರೆ. ಭಾರತವು ತನ್ನ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತದೆ ಎಂದರು. 2016 ರಲ್ಲಿ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಭಾರತೀಯ ಸೇನಾ ದಳದ ಮುಖ್ಯ ಕಚೇರಿ ಮೇಲೆ ನಡೆಸಿದ ಉರಿ ದಾಳಿ ಮತ್ತು ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಭಾರತೀಯ ಯುದ್ಧ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ನಡೆಸಿದ 2019 ಬಾಲಾಕೋಟ್ ವೈಮಾನಿಕ ದಾಳಿಯನ್ನು ಉಲ್ಲೇಖಿಸಿ ಅವರು ಮಾತನಾಡಿದರು.

ಭಾರತದ ವಿರುದ್ಧ ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ತೊಡಗಿರುವ ಮತ್ತು ಭಾರತ ಸಹಿಸಿಕೊಂಡಿರುವ ಶಕ್ತಿಗಳಿಗೆ ಇಂದು ಇದು ವಿಭಿನ್ನ ಭಾರತವೆಂದು ತಿಳಿದಿದೆ ಮತ್ತು ಈ ಭಾರತವು ಅವರಿಗೆ ಪ್ರತ್ಯುತ್ತರ ನೀಡುತ್ತದೆ ಎಂದು ಅವರು ಹೇಳಿದರು. ಚೀನಾ ಗಡಿಯಲ್ಲಿನ ಸವಾಲುಗಳ ಬಗ್ಗೆಯೂ ಅವರು ಮಾತನಾಡಿದರು. ಕಳೆದ ಮೂರು ವರ್ಷಗಳಿಂದ, ಒಪ್ಪಂದಗಳನ್ನು ಉಲ್ಲಂಘಿಸಿ ಚೀನೀಯರು ದೊಡ್ಡ ಸಂಖ್ಯೆಯ ಸೈನಿಕರನ್ನು ನಿಯೋಜಿಸುತ್ತಿದ್ದಾರೆ. ಇಂದು ಭಾರತೀಯ ಮಿಲಿಟರಿಯನ್ನು ಅತ್ಯಂತ ಎತ್ತರದ ಪ್ರದೇಶದಲ್ಲಿ ಮತ್ತು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಇಂದಿನ ಪರಿಸ್ಥಿತಿಯು ಹಿಂದಿನ ಪರಿಸ್ಥಿತಿಗಿಂತ ಭಿನ್ನವಾಗಿದೆ. ಏಕೆಂದರೆ ಭಾರತೀಯ ಸೈನಿಕರು ಈಗ ಪೂರ್ಣ ಬೆಂಬಲವನ್ನು ಹೊಂದಿದ್ದಾರೆ. ಅವರ ಬಳಿ ಈಗ ಯುದ್ಧಕ್ಕೆ ಬೇಕಾದ ಸಕಲ ಉಪಕರಣಗಳು ಮತ್ತು ಮೂಲಸೌಕರ್ಯಗಳಿವೆ ಎಂದು ಅವರು ಹೇಳಿದರು. ಈ ಹಿಂದೆ ನಿರ್ಲಕ್ಷಿಸಿರುವ ಚೀನಾದ ಗಡಿಯಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿದೆ ಎಂಬುದನ್ನು ಅವರು ಒಪ್ಪಿಕೊಂಡರು. ಇಂದು ನಾವು ನಮಗೆ ಬೇಕಾದ ಕಚ್ಚಾ ತೈಲವನ್ನು ಯಾರಿಂದ ಖರೀದಿಸಬೇಕು ಎಂಬ ಬಗ್ಗೆ ನಮಗೆ ಬೇರೆ ದೇಶಗಳು ಒತ್ತಡ ಹಾಕುವ ಹಾಗಿಲ್ಲ. ಈಗ ತನ್ನ ಪ್ರಜೆಗಳಿಗೆ ಯಾವುದು ಒಳ್ಳೆಯದೋ ಅದನ್ನು ಮಾಡುವ ಭಾರತ ನಮ್ಮದು ಎಂದು ಸಚಿವರು ಹೇಳಿದರು. ರಷ್ಯಾ ಭಾರತದ ಅತಿದೊಡ್ಡ ಕಚ್ಚಾತೈಲ ಪೂರೈಕೆದಾರನಾಗಿ ಮುಂದುವರೆದಿದೆ. ಭಾರತಕ್ಕೆ ಅಗತ್ಯವಿರುವ ಮೂರನೇ ಒಂದು ಭಾಗದಷ್ಟು ತೈಲ ಪೂರೈಸುತ್ತಿರುವ ರಷ್ಯಾ ಕಳೆದ 6 ತಿಂಗಳಿಂದ ಭಾರತದ ಅತಿದೊಡ್ಡ ತೈಲ ಪೂರೈಕೆದಾರನಾಗಿದೆ.

ಇದನ್ನೂ ಓದಿ : ಪೆಟ್ರೋಲ್, ಡೀಸೆಲ್ ಯುಗಾಂತ್ಯದ ಆರಂಭದಲ್ಲಿ ಜಗತ್ತು: ಅಧ್ಯಯನ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.