ನೈನಿತಾಲ್(ಉತ್ತರಾಖಂಡ): ಉತ್ತರಾಖಂಡ ವಿಧಾನಸಭೆಗೆ ಫೆ.14 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಹರೀಶ್ ಸಿಂಗ್ ರಾವತ್ ಅವರು ಮತದಾರರ ಸೆಳೆಯಲು ಜನರ ಜೊತೆ ಹೆಚ್ಚು ಸಂಪರ್ಕ ಬೆಳೆಸಿಕೊಳ್ಳುತ್ತಿದ್ದಾರೆ.
ಇಂದು ನೈನಿತಾಲ್ನ ವರ್ಮಾ ಕಾಲೊನಿಯಲ್ಲಿ ಮತಯಾಚನೆ ಮಾಡುತ್ತಿದ್ದಾಗ ಪುಟ್ಟ ಮಗುವೊಂದನ್ನು ಎತ್ತಿಕೊಂಡು ಮುದ್ದಾಡಿ ಜನರ ಪ್ರೀತಿಗೆ ಕಾರಣರಾದರು. ಮಾಜಿ ಮುಖ್ಯಮಂತ್ರಿಯೊಬ್ಬರು ಇಷ್ಟು ಸರಳವಾಗಿದ್ದಾರಲ್ಲ ಎಂಬ ಭಾವವನ್ನು ಜನರಲ್ಲಿ ಮೂಡಿಸಿದ್ದಾರೆ.
ಇದಲ್ಲದೇ, ಸಿಹಿ ಅಂಗಡಿಯಲ್ಲಿ ಜಿಲೇಬಿ ಮಾಡುವುದು, ಖಾದಿ ಚಾವಲ್ ತಿನಿಸುಗಳನ್ನು ತೆಗೆದುಕೊಳ್ಳುವುದು, ಬಾಯಲ್ಲಿ ನೀರೂರಿಸುವ ಟಿಕ್ಕಿ ಚಾಟ್‌ನಂತಹ ಖಾದ್ಯಗಳನ್ನು ಜನಸಾಮಾನ್ಯರ ಜೊತೆ ಸೇರಿ ಸೇವಿಸಿ ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ನೈನಿತಾಲ್ ಜಿಲ್ಲೆಯ ಲಾಲ್ಕುವಾನ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಓದಿ: ವರ್ಷದ ಮೊದಲ ರಾಕೆಟ್ ಉಡ್ಡಯನಕ್ಕೆ ಇನ್ನು 6 ದಿನ ಬಾಕಿ.. ಫೆ.14ರಂದು ನಭಕ್ಕೆ ಚಿಮ್ಮಲಿದೆ ಪಿಎಸ್ಎಲ್ವಿ ಸಿ-52