ಏಲೂರು (ಆಂಧ್ರಪ್ರದೇಶ): ಇಂದು ಬೆಳಗಿನ ಜಾವ ಸುಮಾರು 3 ಗಂಟೆಗೆ ಸಿಕಂದರಾಬಾದ್ ನಿಲ್ದಾಣದಿಂದ ವಿಶಾಖಪಟ್ಟಣಕ್ಕೆ ಡ್ಯುರೆಂಟೋ ಎಕ್ಸ್‌ಪ್ರೆಸ್ ರೈಲು ನಿರ್ಗಮಿಸಿತ್ತು. ರೈಲು ವೇಗವಾಗಿ ಚಲಿಸುತ್ತಿತ್ತು. ಎಲ್ಲ ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದರು. ಏಲೂರು ಜಿಲ್ಲೆಯ ಭೀಮಡೋಲು ತಲುಪುವಷ್ಟರಲ್ಲಿ ಜೋರು ಸದ್ದು ಕೇಳಿಸಿದೆ. ಪ್ರಯಾಣಿಕರು ಗಾಬರಿಯಿಂದ ಎಚ್ಚರಗೊಂಡಾಗ ಬೊಲೆರೋ ವಾಹನಕ್ಕೆ ರೈಲು ಡಿಕ್ಕಿ ಹೊಡೆದಿರುವುದು ಗೊತ್ತಾಗಿದೆ. ಘಟನೆಯಿಂದಾಗಿ ರೈಲು ಸಂಚಾರ 5 ಗಂಟೆಗಳ ಕಾಲ ಸ್ಥಗಿತಗೊಂಡಿದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದರು.
ಅಪರಿಚಿತರು ಎಮ್ಮೆಗಳನ್ನು ಕದಿಯಲು ತಂತ್ರ ರೂಪಿಸಿದ್ದರಂತೆ. ಆ ತಂತ್ರವನ್ನು ಜಾರಿಗೆ ತರಲು ರಾತ್ರಿ ಸಮಯವನ್ನೇ ಬಳಸಿಕೊಂಡಿದ್ದಾರೆ. ರಾತ್ರಿಯಾದ್ರೆ ಯಾರ ಕೈಗೂ ಸಿಗದೆ ಪಾರಾಗಬಹುದು ಎಂಂಬುದು ಅವರ ಲೆಕ್ಕಾಚಾರ. ಅಂದುಕೊಂಡಂತೆ ಬೊಲೆರೋ ವಾಹನದಲ್ಲಿ ಎಮ್ಮೆಗಳನ್ನು ಕದಿಯಲು ಹೊರಟಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ಬೆಂಗಳೂರು-ಮುಂಬೈ, ಬೆಂಗಳೂರು-ಹೈದರಾಬಾದ್ ನಡುವೆ ವಂದೇ ಭಾರತ್ ರೈಲು: ಸಚಿವ ಸೋಮಣ್ಣ
ಎಮ್ಮೆಗಳನ್ನು ಕದಿಯುವ ಮೊದಲು ಪೊಲೀಸರು ಕಳ್ಳರ ಉದ್ದೇಶವನ್ನು ಗ್ರಹಿಸಿದ್ದಾರೆಂದು ತೋರುತ್ತದೆ. ಕಳ್ಳರು ಪೊಲೀಸರನ್ನು ನೋಡಿ ಅವರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಬೊಲೆರೋ ಚಾಲಕ ಸುಮಾರು 100 ಕಿ.ಮೀ ವೇಗದಲ್ಲಿ ಚಲಾಯಿಸುತ್ತಿದ್ದನು ಎನ್ನಲಾಗ್ತಿದೆ. ಭೀಮಡೋಲು ಬಳಿ ರೈಲ್ವೆ ಗೇಟ್ ಇದೆ. ಡ್ಯುರೆಂಟೋ ಎಕ್ಸ್‌ಪ್ರೆಸ್ ರೈಲು ಬರುತ್ತಿದ್ದಂತೆ ಭೀಮಡೋಲು ಜಂಕ್ಷನ್ನಲ್ಲಿ ರೈಲ್ವೆ ಗೇಟ್ ಅನ್ನು ಸಿಬ್ಬಂದಿ ಹಾಕಿದ್ದರು. ಪೊಲೀಸರಿಂದ ಹೇಗಾದರೂ ಪಾರಾಗಲೇಬೇಕು ಎಂಬುದು ಕಳ್ಳರ ಯೋಚನೆ. ಹೀಗಾಗಿ ಆರೋಪಿಗಳು ಗೇಟ್ ಹೊಡೆದು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ರೈಲು ಹಳಿ ಮೇಲೆ ವಾಹನ ಬಂದು ನಿಂತಿದೆ. ಡ್ಯುರೆಂಟೋ ಎಕ್ಸ್‌ಪ್ರೆಸ್ ಹತ್ತಿರ ಬಂದಾಗ ಕಾರಿನಲ್ಲಿದ್ದ ಪ್ರಯಾಣಿಕರು ವಾಹನ ಬಿಟ್ಟು ಓಡಿಹೋಗಿದ್ದಾರೆ. ರೈಲಿಗೆ ಸಿಲುಕಿ ವಾಹನ ಧ್ವಂಸಗೊಂಡಿದೆ.
ಇದನ್ನೂ ಓದಿ: ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ
ರೈಲು ವಾಹನಕ್ಕೆ ಡಿಕ್ಕಿ ಹೊಡೆದು ಕೆಟ್ಟು ನಿಂತಿದೆ. ಇಂಜಿನ್ ಹಾಳಾಗಿದ್ದರಿಂದ ರೈಲ್ವೆ ಸಿಬ್ಬಂದಿ ಮತ್ತೊಂದು ಇಂಜಿನ್ ಅಳವಡಿಸಬೇಕಾಯಿತು. ಇದಕ್ಕಾಗಿ ಸುಮಾರು ಐದು ಗಂಟೆ ತಗುಲಿದೆ. ಬಳಿಕ ಮತ್ತೊಂದು ಇಂಜಿನ್ ವ್ಯವಸ್ಥೆ ಮಾಡಲಾಗಿದೆ. ಕೊನೆಗೂ ರೈಲು ಭೀಮಡೋಲು ರೈಲ್ವೇ ನಿಲ್ದಾಣದಿಂದ ನಿರ್ಗಮಿಸಿದೆ. ಇದಕ್ಕೂ ಮುನ್ನ ಡ್ಯುರೆಂಟೋ ಎಕ್ಸ್‌ಪ್ರೆಸ್‌ನ ಕೆಲವು ಪ್ರಯಾಣಿಕರು ಪರ್ಯಾಯ ಮಾರ್ಗ ತೆಗೆದುಕೊಂಡರು. ಘಟನೆ ಕುರಿತು ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬೊಲೆರೋ ವಾಹನದಲ್ಲಿ ಬಂದವರು ಕಳ್ಳರೇ? ಪರಾರಿಯಾಗುವ ಭರದಲ್ಲಿ ಗೇಟ್ಗೆ ಡಿಕ್ಕಿ ಹೊಡೆದಿದ್ದಾರಾ? ಅಥವಾ ಬೇರೆ ಕಾರಣವೇ? ಈ ನಿಟ್ಟಿನಲ್ಲಿ ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದಾಳಿಕೋರರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.
ಇದನ್ನೂ ಓದಿ: ರೈಲಿನಡಿಗೆ ಬೀಳುತ್ತಿದ್ದ ಪ್ರಯಾಣಿಕನ ಪ್ರಾಣ ಉಳಿಸಿದ ರೈಲ್ವೆ ಪೊಲೀಸ್: ವಿಡಿಯೋ