ETV Bharat / bharat

ಯಮಸ್ವರೂಪಿ ಡಂಪರ್ ವಾಹನ​: ಫುಟ್​ಪಾತ್​ ಮೇಲೆ ಮಲಗಿದ್ದ ಮೂವರು ಮಕ್ಕಳು ಸೇರಿ ಐವರು ದುರ್ಮರಣ - ರಾಜಸ್ಥಾನದಲ್ಲಿ ಐವರ ದುರ್ಮರಣ

ರಾಜಸ್ಥಾನದ ಜಲವಾಡದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಲಗಿದ್ದವರ ಮೇಲೆ ವಾಹನ ಹರಿದು ಐವರು ಮೃತಪಟ್ಟಿದ್ದಾರೆ.

ಐವರ ದುರ್ಮರಣ
ಐವರ ದುರ್ಮರಣ
author img

By

Published : Jul 8, 2021, 10:02 AM IST

Updated : Jul 8, 2021, 10:18 AM IST

ಜಲವಾಡ(ರಾಜಸ್ಥಾನ): ಚಾಲಕನ ನಿಯಂತ್ರಣ ತಪ್ಪಿ, ಫುಟ್​ಪಾತ್​ನಲ್ಲಿ ಮಲಗಿದ್ದವರ ಮೇಲೆ ವಾಹನ ಹರಿದು ಮೂವರು ಮಕ್ಕಳು ಸೇರಿ ಐವರು ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ತಿಂಧರ್​​ ಮಂದಾವರ ರಸ್ತೆಯ ಬಡ್ಬೆಲಾ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಸುರೇಶ್, ಪತ್ನಿ ಸೀತಾಬಾಯಿ, ನಿರ್ಮಲಾ, ಕಮಲೇಶ್, ಪವನ್​ ಎಂದು ಗುರುತಿಸಲಾಗಿದೆ. ಅಪಘಾತದ ನಂತರ ವಾಹನ ಬಿಟ್ಟು ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಮಂದಾವರ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು, ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಚಾಲಕ ಮದ್ಯ ಸೇವಿಸಿದ ಶಂಕೆ ವ್ಯಕ್ತವಾಗುತ್ತಿದ್ದು, ನಿಯಂತ್ರಣ ತಪ್ಪಿ ಡಂಪರ್ ವಾಹನ ರಸ್ತೆ ಬದಿ ಮಲಗಿದ್ದವರ ಮೇಲೆ ಹರಿದಿದೆ ಎಂದು ತಿಳಿಸಿದ್ದಾರೆ.

ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Last Updated : Jul 8, 2021, 10:18 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.