ETV Bharat / bharat

ಮುಂಬೈ ತಾಜ್​ ಹೋಟೆಲ್ 10ನೇ ಮಹಡಿಯಿಂದ ಹಾರಿ ಉದ್ಯಮಿ ಆತ್ಮಹತ್ಯೆ

ಮುಂಬೈ ತಾಜ್​ ಹೋಟೆಲ್​ನ ಹತ್ತನೇ ಮಹಡಿಯಿಂದ ಹಾರಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

dubai-based-businessman-jumped-from-10th-floor-of-taj-hotel
ಮುಂಬೈ ತಾಜ್​ಹೋಟೆಲ್ 10ನೇ ಮಹಡಿಯಿಂದ ಹಾರಿ ಉದ್ಯಮಿ ಆತ್ಮಹತ್ಯೆ
author img

By

Published : Dec 4, 2022, 12:49 PM IST

ಮುಂಬೈ: ಕೊಲಾಬಾದ ಪ್ರಸಿದ್ದ ತಾಜ್ ಹೋಟೆಲ್​ನ 10 ನೇ ಮಹಡಿಯಿಂದ ಹಾರಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶಾರುಖ್ ಇಂಜಿನಿಯರ್ (60) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಕೊಲಾಬಾ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ವಿಜಯ್ ಹತಿಸ್ಕರ್ ಈ ಬಗ್ಗೆ ಮಾಹಿತಿ ನೀಡಿ, ಮಧ್ಯಾಹ್ನ ಸುಮಾರು 2.30 ರ ಹೊತ್ತಿಗೆ ಶಾರುಖ್ ಹೋಟೆಲ್​ನ ಹತ್ತನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದು, ಐದನೇ ಮಹಡಿಯಲ್ಲಿ ಬಿದ್ದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟರು. ಈ ಬಗ್ಗೆ ಮೃತರ ಪೋಷಕರಿಂದ ಯಾವುದೇ ದೂರು ದಾಖಲಾಗಿಲ್ಲ ಎಂದರು.

ಶಾರುಖ್ ಇಂಜಿನಿಯರ್ ದುಬೈನಲ್ಲಿ ಉದ್ಯಮಿಯಾಗಿದ್ದು, ಮುಂಬೈನಲ್ಲಿ ನೆಲೆಸಿರುವ ತಮ್ಮ ಪೋಷಕರನ್ನು ಭೇಟಿಯಾಗಲು ಬಂದಿದ್ದರು. ನಿನ್ನೆ ಮಧ್ಯಾಹ್ನ ಪೋಷಕರನ್ನು ಭೇಟಿಯಾಗಿದ್ದಾರೆ. ಬಳಿಕ ಹತ್ತನೇ ಮಹಡಿಯ ಕಿಟಕಿಯಿಂದ ಕೆಳಕ್ಕೆ ಜಿಗಿದಿದ್ದಾರೆ. ಈ ಬಗ್ಗೆ ಯಾವುದೇ ದೂರು ನೀಡುವುದಿಲ್ಲ ಎಂದು ಪೋಷಕರು ಕೊಲಾಬಾ ಪೊಲೀಸರಿಗೆ ತಿಳಿಸಿದ್ದಾರೆ.

ಅದರಂತೆ, ಕೊಲಾಬಾ ಪೊಲೀಸರು ಸಾವಿನ ಪ್ರಕರಣ ದಾಖಲಿಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ: ಕಾಲೇಜಿನಲ್ಲೇ ನೇಣು ಬಿಗಿದುಕೊಂಡು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.