ETV Bharat / bharat

ಮದ್ಯಪಾನ ಮಾಡಲು ಹಣ ನೀಡಲಿಲ್ಲವೆಂದು ಹೆತ್ತ ತಂದೆ ಕೊಲೆ ಮಾಡಿದ ಪಾಪಿ ಮಗ

MBA ಪದವೀಧರನಾಗಿದ್ದ ಯುವಕನೊಬ್ಬ ಮದ್ಯ ಖರೀದಿ ಮಾಡಲು ತಂದೆ ಹಣ ನೀಡಲಿಲ್ಲವೆಂಬ ಕಾರಣಕ್ಕಾಗಿ ಅಪ್ಪನನ್ನೇ ಕೊಲೆ ಮಾಡಿದ್ದಾನೆ.

Drunkard murdered his father
Drunkard murdered his father
author img

By

Published : Oct 19, 2021, 9:53 PM IST

ಕಡಲೂರು(ತಮಿಳುನಾಡು): ಮದ್ಯ ಖರೀದಿ ಮಾಡಲು ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಪಾಪಿ ಮಗನೊಬ್ಬ ತಂದೆಯನ್ನೇ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ.

32 ವರ್ಷದ ಕಾರ್ತಿಕ್​ ಈ ಕೃತ್ಯವೆಸಗಿದ್ದು, ನಿವೃತ್ತ ಸಬ್​ ಕಲೆಕ್ಟರ್​​​ ಆಗಿದ್ದ ಸುಬ್ರಮಣಿಯನ್​​​ ಕೊಲೆಯಾಗಿರುವ ದುರ್ದೈವಿ. ಕಡಲೂರಿನ ಆನೈಕುಪಂನಿಂದ ಎಂಬಿಎ ಪದವೀಧರನಾಗಿದ್ದ ಕಾರ್ತಿಕ್​ ತನ್ನ ತಂದೆ ಜೊತೆ ವಾಸವಾಗಿದ್ದನು. ಸೋಮವಾರ ಮದ್ಯಪಾನ ಖರೀದಿ ಮಾಡಲು ಹಣ ನೀಡುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ತಂದೆ ನಿರಾಕರಣೆ ಮಾಡಿದ್ದು, ತಕ್ಷಣವೇ ಕಬ್ಬಿಣದ ರಾಡ್​​ನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ಬಳಿಕ ಮೃತ ತಂದೆಯ ದೇಹ ಇರಿಸಲು ಫ್ರೀಜರ್​​ ಬಾಕ್ಸ್​​​ ಪೂರೈಕೆ ಮಾಡುವ ಏಜೆನ್ಸಿಗೆ ಕರೆ ಮಾಡಿದ್ದಾನೆ. ಆತ ಸ್ಥಳಕ್ಕೆ ಬರುತ್ತಿದ್ದಂತೆ ಕೊಲೆಯಾಗಿರುವುದು ಗೊತ್ತಾಗಿದೆ. ಈ ವೇಳೆ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾನೆ.

ಕಾರ್ತಿಕ್​ನನ್ನ ಬಂಧನ ಮಾಡಿರುವ ಪೊಲೀಸರು ಸುಬ್ರಮಣಿಯನ್​ ಶವ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಆತನ ಕೋಣೆಯಲ್ಲಿ ಸಾವಿರಾರು ಖಾಲಿ ಮದ್ಯದ ಬಾಟಲಿಗಳು, ಸಿಗರೇಟ್ ಪ್ಯಾಕೆಟ್​ಗಳು ಹಾಗೂ ಉಳಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಕಳೆದ ಅನೇಕ ವಾರಗಳಿಂದ ಕೊಠಡಿ ಸ್ವಚ್ಛಗೊಳಿಸಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿರಿ: ಆಂಧ್ರದಲ್ಲಿ ದ್ವೇಷದ ರಾಜಕಾರಣ: ಟಿಡಿಪಿ ಕಚೇರಿಗಳು ಧ್ವಂಸ, ನಾಳೆ ಬಂದ್​ಗೆ ಕರೆ ನೀಡಿದ ಚಂದ್ರಬಾಬು ನಾಯ್ಡು

ನ್ಯಾಯಾಂಗ ಬಂಧನದಲ್ಲಿರುವ ಕಾರ್ತಿಕ್​​​ ಮಾನಸಿಕ ತೊಂದರೆಗೊಳಗಾಗಿರುವ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.