ETV Bharat / bharat

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ.. ಪೊಲೀಸ್​​ ಠಾಣೆ ಮೇಲೆಯೂ ದಾಳಿ: ಪುಂಡಾಟಿಕೆಗೆ ಕಡಿವಾಣ ಹಾಕಲು ಪೊಲೀಸರಿಂದ ಹರಸಾಹಸ - ಹಣ ವಸೂಲಿ

ಕುಡಿದ ಅಮಲಿನಲ್ಲಿ ಬಸ್​ ನಿಲ್ದಾಣದಲ್ಲಿದ್ದವರ ಮೇಲೆ ಹಲ್ಲೆ ಮಾಡಿರುವುದು ಮತ್ತು ಅಲ್ಲೇ ಇದ್ದ ಪೊಲೀಸ್​ ಠಾಣೆಯ ಮೇಲೆ ದಾಳಿ ಮಾಡಿರುವ ಪುಂಡರ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ

author img

By

Published : Jul 3, 2023, 5:44 PM IST

ಅಹಮದಾಬಾದ್ (ಗುಜರಾತ್​): ಇಲ್ಲಿನ ಎಸ್​ಟಿ ಬಸ್ ನಿಲ್ದಾಣದಲ್ಲಿ ಮದ್ಯದ ಅಮಲಿನಲ್ಲಿದ್ದ ಯುವಕ ಮತ್ತು ಆತನ ಸಹಚರರು ಪುಂಡಾಟಿಕೆ ಮೆರೆದಿದ್ದಾರೆ. ಕಾಗದಪೀಠ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಮಿಕ ಗ್ರಾಮದಲ್ಲಿ ವಾಸಿಸುತ್ತಿರುವ ಭವೇಶ್ ಎಂಬಾತ ಜನರನ್ನು ಹೆದರಿಸಲು ಸಿಕ್ಕ ಸಿಕ್ಕವರನ್ನು ಥಳಿಸಿದ್ದಾನೆ. ಭವೇಶ್ ಮತ್ತು ಆತನ ಸಹಚರರು ಗೀತಾಮಂದಿರ ಬಸ್ ನಿಲ್ದಾಣಕ್ಕೆ ಬಂದು ವ್ಯಾಪಾರಿಗಳು ಮತ್ತು ಪ್ರಯಾಣಿಕರನ್ನು ಥಳಿಸಿದ್ದಾರೆ. ಎಸ್‌ಟಿ ನಿಲ್ದಾಣದಲ್ಲಿರುವ ಪೊಲೀಸ್‌ ಠಾಣೆಯ ಬಾಗಿಲಿನ ಗಾಜು ಒಡೆದಿದ್ದಾರೆ. ಇದೆಲ್ಲವೂ ಬಸ್​ ನಿಲ್ದಾಣದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಎರಡು ತಿಂಗಳ ಹಿಂದೆ, ಗೀತಾ ಮಂದಿರ ಎಸ್‌ಟಿ ಠಾಣೆಯಲ್ಲಿ ವಿಧ್ವಂಸಕ ಕೃತ್ಯ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಕುಖ್ಯಾತ ಭವೇಶ್ ನನ್ನು ಬಂಧಿಸಲಾಗಿತ್ತು. ಹಲವು ಅಪರಾಧಗಳನ್ನು ಮಾಡಿರುವ ಭವೇಶ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗಡೆ ಬಂದಿದ್ದ. ಹೊರಗಡೆ ಬಂದು ಮತ್ತೆ ಪುಂಡಾಟಿಕೆ ಮೆರೆದಿದ್ದು, ಈಗ ಪುನಃ ಜೈಲೂಟ ತಿನ್ನುವಂತಾಗಿದೆ. ಈ ಬಾರಿ ಆತ ಪೊಲೀಸ್​ ಠಾಣೆಯ ಮೇಲೆಯೇ ದಾಳಿ ಮಾಡಿದ್ದಾನೆ. ಸಿಸಿಟಿವಿ ದೃಶ್ಯದ ಆಧಾರದಲ್ಲಿ ಆತನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಎರಡು ತಿಂಗಳ ಹಿಂದೆ ಬಸ್ ನಿಲ್ದಾಣದಲ್ಲಿ ಎಲ್ಲರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ಭವೇಶ್ ವಿರುದ್ಧ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಬಿಡುಗಡೆ ಆದ ನಂತರ ಎರಡು ದಿನಗಳ ಹಿಂದೆ ಮಜೂರು ಗ್ರಾಮ ವ್ಯಾಪ್ತಿಯಲ್ಲಿ ಸ್ಥಳೀಯ ಜನರೊಂದಿಗೆ ವಾಗ್ವಾದ ನಡೆದಿದ್ದು, ಇದರ ವಿರುದ್ಧ ಪೊಲೀಸ್ ದೂರು ದಾಖಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಆತನನ್ನು ಬಂಧಿಸಲು ಆತನ ಮನೆಗೆ ಹೋಗುತ್ತಿದ್ದರು. ಹೀಗಿದ್ದರೂ ಮುಂಜಾನೆ ಪೊಲೀಸ್ ಠಾಣೆಗೆ ನುಗ್ಗಿ ಸರ್ಕಾರಿ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾನೆ. ಈ ಸಂಬಂಧ ಕಾಗದಪೀಠ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಭವೇಶ್ ವಿರುದ್ಧ ಈಗ ಒಟ್ಟು 11 ಪ್ರಕರಣಗಳು ದಾಖಲಾಗಿವೆ.

Drunk yongster did vandalized police station at Geeta Mandir Central Bus Stop
ಭವೇಶ್ ಬಂಧಿಸಿದ ಪೊಲೀಸರು

"ಎರಡು ದಿನಗಳ ಹಿಂದೆ ಆರೋಪಿಯ ವಿರುದ್ಧ ಪೊಲೀಸರು ಯಾರ ಮನೆಗೆ ಹೋಗುತ್ತಿದ್ದರೋ ಅವರನ್ನು ಬಂಧಿಸುವಂತೆ ದೂರು ನೀಡಲಾಗಿತ್ತು ಮತ್ತು ಅದರ ನಡುವೆಯೂ ಆರೋಪಿಯು ಮುಂಜಾನೆ ಗೀತಾ ಮಂದಿರ ಎಸ್‌ಟಿ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದ್ದಾನೆ. ಪ್ರಸ್ತುತ, ವಿಚಾರಣೆ ನಡೆಸಲಾಗುತ್ತಿದೆ. ಅವನನ್ನು ಮತ್ತು ಅವನ ಸಹಚರ ಇಬ್ಬರನ್ನೂ ಬಂಧಿಸಲು ಬಂದಿದ್ದೇವೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರಿಗೆ ಈ ಗ್ಯಾಂಗ್​ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಸಣ್ಣ ಪುಟ್ಟ ಪ್ರಕರಣಗಳಿಂದ ಬೇಗ ಬೇಲ್​ ಪಡೆದು ಹೊರ ಬರುವ ಇವರುಗಳು ಮತ್ತೆ ಅದೇ ಕಾರ್ಯದಲ್ಲಿ ತೊಡಗುತ್ತಾರೆ. ಇವರು ಜೈಲಿನಲ್ಲಿ ಇರುವವರೆಗೆ ಜನರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಹೊರಗೆ ಬರುತ್ತಿದ್ದಂತೆ ಮತ್ತೆ ಸುಲಿಗೆ ಆರಂಭಿಸುತ್ತಾರೆ ಎಂದು ಈ ಬಗ್ಗೆ ಆತಂಕ ಹೊರಹಾಕಿದ್ದಾರೆ.

ಇದನ್ನೂ ಓದಿ: ಯುವಕರು ಕಾರಿನ ಲೈಟ್ ಒಡೆದು ಹಾಕಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಳೆಂದು ಪೊಲೀಸರಿಗೆ ದೂರು ನೀಡಿದ ತಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.