ETV Bharat / bharat

ಕುಡಿದ ಅಮಲಿನಲ್ಲಿ ಕಾರಿನ ಬಾನೆಟ್​ ಮೇಲೆ ಯುವಕನನ್ನು 3 ಕಿಮೀ ಹೊತ್ತೊಯ್ದ ಚಾಲಕ - ಕಾರಿನ ಬಾನೆಟ್​ ಮೇಲೆ ಯುವಕನನ್ನು 3 ಕಿಮೀ ಹೊತ್ತೊಯ್ದ ಚಾಲಕ

ಯುವಕ ನಿಲ್ಲಿಸುವಂತೆ ಕೂಗಾಡಿದರೂ ಕಾರು ನಿಲ್ಲಿಸದೆ ವೇಗವಾಗಿ ಚಲಾಯಿಸಿದ್ದ ಚಾಲಕ ದೇವ್​ ಧೇರ್​

Car and Driver
ಕಾರು ಹಾಗೂ ಚಾಲಕ
author img

By

Published : Aug 9, 2023, 5:17 PM IST

ಸೂರತ್ (ಗುಜರಾತ್​)​: ಪಾನಮತ್ತ ಕಾರು ಚಾಲಕನೊಬ್ಬ ತನ್ನ ಕಾರಿನ ಬಾನೆಟ್​ ಮೇಲೆ ಯುವಕನೊಬ್ಬನನ್ನು 2 ರಿಂದ 3 ಕಿಲೋ ಮೀಟರ್​ವರೆಗೆ ಎಳೆದೊಯ್ದ ಘಟನೆ ಸೂರತ್​ ನಗರದ ಪಾಲ್​ ಪ್ರದೇಶದಲ್ಲಿ ನಡೆದಿದೆ. ನಗರದ ಗೌರವ್​ ಪಥ್​ ರಸ್ತೆಯಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಕುಡಿದು ಕಾರು ಚಲಾಯಿಸುತ್ತಿದ್ದವನನ್ನು ದೇವ್​ ಧೇರ್​ ಎಂದು ಗುರುತಿಸಲಾಗಿದೆ. ವೇಗವಾಗಿ ಕಾರು ಓಡಿಸಿರುವ ಚಾಲಕನ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

ದೇವ್​ ಧೇರ್​ ಕಾರಿನ ಬಾನೆಟ್​ ಮೇಲೆ ಇದ್ದ ವ್ಯಕ್ತಿ ಕಾರನ್ನು ನಿಲ್ಲಿಸುವಂತೆ ಕೂಗಾಡುತ್ತಿದ್ದರೂ ವೇಗವಾಗಿ ಕಾರು ಚಲಾಯಿಸಿದ್ದಾನೆ. ಧೇರ್​ ಕಾರನ್ನೇ ಹಿಂಬಾಲಿಸುತ್ತಿದ್ದ ಇನ್ನೊಂದು ಕಾರಿನ ಡ್ರೈವರ್​ ಮೊಬೈಲ್​ ಫೋನ್​ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಕುಡಿದ ಅಮಲಿನಲ್ಲಿ ಕಾರು ಚಾಲಕ 60 ರಿಂದ 70 ಕಿಲೋ ಮೀಟರ್​ ವೇಗದಲ್ಲಿ ಚಲಾಯಿಸುತ್ತಿರುವುದನ್ನು ಜೂಮ್​ ಮಾಡಲಾಗಿದೆ. ವಿಡಿಯೋದಲ್ಲಿ ಕಾರಿನ ಬಾನೆಟ್​ ಮೇಲೆ ಒಬ್ಬ ವ್ಯಕ್ತಿ ಇರುವುದು ಗೋಚರಿಸುತ್ತಿದೆ. ಕಾರನ್ನು ನಿಲ್ಲಿಸಿ ವ್ಯಕ್ತಿಯನ್ನು ಕಾಪಾಡಲು ಹಿಂದಿನಿಂದ ಬೇರೆ ವಾಹಗಳು ಕೂಡ ಹಿಂಬಾಲಿಸುತ್ತಿವೆ. ಆದರೆ ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ಅದೇ ವೇಗದಲ್ಲಿ ಚಲಾಯಿಸಿದ್ದಾನೆ.

ನಡೆದಿದ್ದೇನು? : ಸೂರತ್​ನ ಗೌರವ್​ ಪಥ್​ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಇನ್ನೊಂದು ಕಾರಿನ ಚಾಲಕ ಕಾರಿನಿಂದ ಇಳಿದು, ಕುಡಿದು ಡ್ರೈವ್​ ಮಾಡುತ್ತಿದ್ದ ದೇವ್​ ಧೇರ್​ನನ್ನು ಕಾರಿನಿಂದ ಕೆಳಗಿಳಿಯಲು ಹೇಳಿದ್ದಾನೆ. ಆದರೆ ಕುಡಿದ ಅಮಲಿನಲ್ಲಿದ್ದ ಧೇರ್​ ಮುಂದೆ ನಿಂತಿದ್ದ ಇನ್ನೊಂದು ಕಾರಿನ ಚಾಲಕನ ಮೇಲೆ ಕಾರು ಚಲಾಯಿಸಲು ಬಂದಿದ್ದಾನೆ. ಆಗ ಮತ್ತೊಬ್ಬ ಕಾರು ಚಾಲಕ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಕಾರಿನ ಬಾನೆಟ್​ ಮೇಲೆ ಹಾರಿದ್ದಾನೆ. ಯುವಕ ಬಾನೆಟ್​ ಮೇಲೆ ಇದ್ದರೂ ಅಪಾಯವನ್ನೂ ಲೆಕ್ಕಿಸದೆ ಕುಡಿದ ಅಮಲಿನಲ್ಲಿ ಧೇರ್ ಕಾರು ಚಲಾಯಿಸಿದ್ದಾನೆ.

ಬಾನೆಟ್​ ಮೇಲೆ ಯುವಕ ಸಿಕ್ಕಿ ಹಾಕಿಕೊಂಡಿರುವುದನ್ನು ಗಮನಿಸಿದ ಇತರ ವಾಹನ ಚಾಲಕರು ಕಾರನ್ನು ಫಾಲೋ ಮಾಡಿಕೊಂಡು ಹೋಗಿದ್ದಾರೆ. ಸುಮಾರು ಎರಡರಿಂದ ಮೂರು ಕಿಲೋ ಮೀಟರ್​ವರೆಗೆ ಕಾರು ಸಾಗಿದ ಬಳಿಕ ಕೆಂಪು ಬಣ್ಣದ ಕಾರೊಂದರ ಬಾನೆಟ್​ ಮೇಲೆ ಯುವಕನಿದ್ದ ಕಾರನ್ನು ಓವರ್​ ಟೇಕ್​ ಮಾಡಿ ಅಡ್ಡ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆಗ ಕಾರಿನ ಬಾನೆಟ್​ ಮೇಲಿದ್ದ ವ್ಯಕ್ತಿ ಕೆಳಗಿಳಿದಿದ್ದಾನೆ. ಯುವಕ ಬಾನೆಟ್​ನಿಂದ ಕೆಳಗಿಳಿಯುತ್ತಿದ್ದಂತೆ ಚಾಲಕ ಧೇರ್​ ಕಾರು ರಿವರ್ಸ್​ ಟರ್ನ್​ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.

ನಂತರ ಸಂತ್ರಸ್ತ ಯುವಕ ನೀಡಿದ ದೂರಿನ ಆಧಾರದಲ್ಲಿ ಕಾರು ಚಾಲಕ ದೇವ್ ಧೇರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಕುಡಿದು ಕಾರು ಚಲಾಯಿಸಿ ಅಪಘಾತ ಹಾಗೂ ವ್ಯಕ್ತಿಯ ಜೀವಕ್ಕೆ ಅಪಾಯವನ್ನುಂಟು ಮಾಡಿದ್ದಕ್ಕೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್: ತಂದೆ ಮಗ ಸಾವು, ಅಳಿಯನ ಸ್ಥಿತಿ ಗಂಭೀರ..ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.