ಕೋಲ್ಕತ್ತಾ: ಇಲ್ಲಿನ ಪೊಲೀಸ್ ಎಸ್‌ಟಿಎಫ್ ತಂಡ 30 ಕೋಟಿ ರೂಪಾಯಿ ಮೌಲ್ಯದ 3,600 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದೆ. ಡ್ರಗ್ಸ್ ಸಂಗ್ರಹಿಸಿದ್ದ ಗೋದಾಮಿಗೆ ದಾಳಿ ಮಾಡಿದ ತಂಡ ಅಕ್ರಮ ಮಾದಕ ವಸ್ತುವನ್ನು ಸಂಗ್ರಹಿಸಿದ್ದ ಸುಲ್ತಾನ್ ಅಹ್ಮದ್, ಎಂಡಿ ಕಲೀಂ ಮತ್ತು ಫಿರೋಜ್ ಆಲಂರನ್ನು ಬಂಧಿಸಿದೆ. ಮಾದಕ ವಸ್ತುವನ್ನು ಪಾಪ್ಪಿ ಸ್ಟ್ರಾ(Poppy Straw) ಎಂದು ಗುರುತಿಸಲಾಗಿದೆ.
ಈ ಡ್ರಗ್ಸ್ ಜಾಲದ ಮೂಲ ಜಾರ್ಖಂಡ್ ಎಂದು ತಿಳಿದು ಬಂದಿದೆ. ತಿಂಗಳ ಆರಂಭದಲ್ಲಿ ಜಾರ್ಖಂಡ್ ಮೂಲದ ನೌಸಾದ್ ಅನ್ಸಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತನಿಂದ 531 ಕೆಜಿ ಪಾಪ್ಪಿ ಸ್ಟ್ರಾ(Poppy Straw) ವನ್ನು ವಶಪಡಿಸಿಕೊಳ್ಳಲಾಗಿತ್ತು. ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಶುಕ್ರವಾರ ರಾತ್ರಿ ಕಾರ್ಯಾಚರಣೆ ನಡೆಸಿ ಭಾರಿ ಪ್ರಮಾಣದ ಡ್ರಗ್ಸ್ನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಪ್ರೀತಿ ನಿರಾಕರಿಸಿದ ಯುವತಿಯ ಕತ್ತು ಸೀಳಿ ಕೊಂದ ಪಾಗಲ್ಪ್ರೇಮಿ!