ETV Bharat / bharat

ಡ್ರಗ್ಸ್ ಪ್ರಕರಣ: ಜಾಮೀನಿಗಾಗಿ ಬಾಂಬೆ ಹೈಕೋರ್ಟ್ ಮೊರೆ ಹೋದ ನಟ ಅರ್ಮಾನ್ ಕೊಹ್ಲಿ - ಅರ್ಮಾನ್ ಕೊಹ್ಲಿ

ಅಕ್ಟೋಬರ್ 14 ರಂದು ವಿಶೇಷ ನ್ಯಾಯಾಲಯವು ಜಾಮೀನು ತಿರಸ್ಕರಿಸಿದ ನಂತರ, ನಟ ಅರ್ಮಾನ್ ಕೊಹ್ಲಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Drugs case: Actor Arman Kohli moves Bombay High Court for bail
ಜಾಮೀನಿಗಾಗಿ ಬಾಂಬೆ ಹೈಕೋರ್ಟ್ ಮೊರೆ ಹೋದ ನಟ ಅರ್ಮಾನ್ ಕೊಹ್ಲಿ
author img

By

Published : Oct 25, 2021, 3:05 PM IST

ಮುಂಬೈ: ಅಕ್ಟೋಬರ್ 14 ರಂದು ವಿಶೇಷ ನ್ಯಾಯಾಲಯವು ಜಾಮೀನು ತಿರಸ್ಕರಿಸಿದ ನಂತರ ನಟ ಅರ್ಮಾನ್ ಕೊಹ್ಲಿ ಮತ್ತೇ ಜಾಮೀನು ಕೋರಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಾಕಷ್ಟು ವಿಚಾರಣೆ ನಡೆಸಿದರೂ ಕೂಡ ಆರೋಪಿತ ಅಪರಾಧದ ಸಂಬಂಧದ ಸುಳಿವು ಪತ್ತೆಯಾಗಿಲ್ಲ ಎಂದು ನಟನ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ನಟನ ಪರ ವಕೀಲರು ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅವರ ಮುಂದೆ ತುರ್ತು ವಿಚಾರಣೆಗಾಗಿ ಮನವಿ ಸಲ್ಲಿಸಿದ್ದಾರೆ. ಇದನ್ನು ಅಕ್ಟೋಬರ್ 26, 2021 ರಂದು ವಿಚಾರಣೆ ನಡೆಸುವ ಸಾಧ್ಯತೆಯಿದೆ.

Drugs case: Actor Arman Kohli moves Bombay High Court for bail
ಜಾಮೀನಿಗಾಗಿ ಬಾಂಬೆ ಹೈಕೋರ್ಟ್ ಮೊರೆ ಹೋದ ನಟ ಅರ್ಮಾನ್ ಕೊಹ್ಲಿ

ಓರ್ವ ವ್ಯಕ್ತಿಯಿಂದ 25 ಗ್ರಾಂ ಮೆಫೆಡ್ರೋನ್ ಅನ್ನು ವಶಪಡಿಸಿಕೊಳ್ಳಲಾಯಿತು ಇದರ ಆಧಾರದ ಮೇಲೆ ಕೊಹ್ಲಿ ಅವರ ನಿವಾಸದ ಮೇಲೆ ದಾಳಿ ನಡೆಸಲಾಯಿತು. ಈ ಸಂಬಂಧ ಜುಲೈನಲ್ಲಿ 1.2 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಯಿತು. ಆಪಾದಿತ ವ್ಯಾಪಾರಿಗಳು ಸೇರಿದಂತೆ ಇತರ ಐದು ಜನರೊಂದಿಗೆ ನಟನನ್ನು ಬಂಧಿಸಲಾಯಿತು. ಕೊಹ್ಲಿ ಅವರ ಫೋನ್‌ನಲ್ಲಿ ಅಂತಾರಾಷ್ಟ್ರೀಯ ಡ್ರಗ್ ಕಾರ್ಟೆಲ್‌ಗೆ ಸಂಬಂಧಿಸಿದ ಛಾಯಾಚಿತ್ರಗಳು ಮತ್ತು ಚಾಟ್‌ಗಳಂತಹ ದೋಷಾರೋಪಣೆಯ ಪುರಾವೆಗಳು ಕಂಡು ಬಂದಿವೆ ಎಂದು ಕೇಂದ್ರೀಯ ಸಂಸ್ಥೆ ಹೇಳಿಕೊಂಡಿದೆ.

ನಟ ಬಿಗ್ ಬಾಸ್, ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಹಾಗೆ ಜಾನಿ ದುಷ್ಮಾನ್ ಮತ್ತು ಪ್ರೇಮ್ ರತನ್ ಧನ್ ಪಾಯೋ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.