ನವದೆಹಲಿ : 73ನೇ ಗಣರಾಜ್ಯೋತ್ಸವ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಅಂಗವಾಗಿ ದೆಹಲಿಯ ವಿಜಯ್ ಚೌಕ್ನಲ್ಲಿ 'ಬೀಟಿಂಗ್ ದಿ ರಿಟ್ರೀಟ್' ನಡೆಸಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದ ಹಿನ್ನೆಲೆಯಲ್ಲಿ 'ಆಜಾದಿ ಕಾ ಅಮೃತ ಮಹೋತ್ಸವ' ಕಾರ್ಯಕ್ರಮದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಹೊಸದೊಂದು ದಾಖಲೆ ನಿರ್ಮಾಣಗೊಂಡಿದೆ.
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಆಯೋಜನೆಗೊಂಡಿದ್ದ ವಿಶೇಷ ಕಾರ್ಯಕ್ರಮದ ಅಂಗವಾಗಿ 1000 ಡ್ರೋನ್ಗಳಿಂದ ಲೈಟ್ ಶೋ ನಡೆಸಲಾಯಿತು. ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಬೀಟಿಂಗ್ ದಿ ರಿಟ್ರೀಟ್ ಕಾರ್ಯಕ್ರಮದಲ್ಲಿ ಸಾವಿರ ಡ್ರೋನ್ಗಳು ಹಾರಾಟ ಸಡೆಸಿದವು. ಸುಮಾರು 10 ನಿಮಿಷಗಳ ಕಾಲ ನಡೆದ ಡ್ರೋನ್ ಹಾರಾಟ ಸಮಾರಂಭದಲ್ಲಿ ಭಾರತದ ಭಾವುಟ ಮೂಡಿಸಲಾಯಿತಲ್ಲದೇ ವೀರ ಸೈನಿಕರಿಗೆ ವಂದನೆ ಸಲ್ಲಿಸಲಾಯಿತು.
ಇದನ್ನೂ ಓದಿರಿ: ಪರಮಾಣು ನಿಶ್ಯಸ್ತ್ರೀಕರಣಕ್ಕೆ ಭಾರತ ಬದ್ಧ ಎಂಬ ಹೇಳಿಕೆಗೆ ಪಾಕ್ ವಾಗ್ದಾಳಿ..
ಪ್ರಮುಖವಾಗಿ ಮೇಕ್ ಇನ್ ಇಂಡಿಯಾದ ಲೋಗೋ, ಯುದ್ಧ ಸ್ಮಾರಕ, ಆತ್ಮ ನಿರ್ಭರ್ ಭಾರತ ಸೇರಿದಂತೆ ಅನೇಕ ಲಾಂಛನಗಳು ಡ್ರೋನ್ ಲೈಟ್‌ನಲ್ಲಿ ಮೂಡಿ ಬಂದವು. ಆಗಸದಲ್ಲಿ ಸಾವಿರ ಡ್ರೋನ್ಗಳು ಚಿತ್ತಾರ ಸುಮಾರು 10 ನಿಮಿಷಗಳ ಕಾಲ ನಡೆದಿದ್ದು, ಈ ಮೂಲಕ ಸಮಾರೋಪ ಸಮಾರಂಭಕ್ಕೆ ಹೆಚ್ಚಿನ ಮೆರುಗು ತಂದು ಕೊಟ್ಟಿತ್ತು. ಇದೇ ವೇಳೆ ವಿಜಯ್ ಚೌಕ್ನಲ್ಲಿ ವಂದೇ ಮಾತರಂ ಘೋಷಣೆ ಮೊಳಗಿತು. 1000 ಡ್ರೋನ್ಗಳೆಲ್ಲವೂ ದೇಶೀಯವಾಗಿ ಅಭಿವೃದ್ಧಿಯಾಗಿದ್ದು, 10 ನಿಮಿಷಗಳ ಕಾಲ ಕೇಂದ್ರ ಸರ್ಕಾರದ 75 ಸಾಧನೆಗಳನ್ನು ಲೈಟಿಂಗ್ ಮೂಲಕ ಪ್ರದರ್ಶನ ಮಾಡಿದವು.
-
#WATCH | 1000 Made in India drones make different formations as part of the Beating Retreat ceremony at Vijay Chowk, Delhi pic.twitter.com/aSrE5krh0R
— ANI (@ANI) January 29, 2022 " class="align-text-top noRightClick twitterSection" data="
">#WATCH | 1000 Made in India drones make different formations as part of the Beating Retreat ceremony at Vijay Chowk, Delhi pic.twitter.com/aSrE5krh0R
— ANI (@ANI) January 29, 2022#WATCH | 1000 Made in India drones make different formations as part of the Beating Retreat ceremony at Vijay Chowk, Delhi pic.twitter.com/aSrE5krh0R
— ANI (@ANI) January 29, 2022
ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರೋಪ ಸಮಾರಂಭದಲ್ಲಿ ಮೂರು ಸೇನಾ ಪಡೆಗಳ ಮುಖ್ಯಸ್ಥರು, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ