ETV Bharat / bharat

ಕಾಶ್ಮೀರದಲ್ಲಿ ಡ್ರೋನ್ ಹೊಡೆದುರುಳಿಸಿದ ಪೊಲೀಸರು: ಸ್ಫೋಟಕ ವಸ್ತು ವಶ - ಜಮ್ಮು-ಕಾಶ್ಮೀರದ ಕನಚಕ್ ಪ್ರದೇಶ

ಜಮ್ಮು - ಕಾಶ್ಮೀರದ ಕನಚಕ್ ಪ್ರದೇಶದ ಬಳಿ ಪೊಲೀಸರು ಡ್ರೋನ್ ಒಂದನ್ನು ಹೊಡೆದುರುಳಿಸಿದ್ದು, ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Drone shot down
ಡ್ರೋನ್ ಹೊಡೆದುರುಳಿಸಿದ ಪೊಲೀಸರು
author img

By

Published : Jul 23, 2021, 11:57 AM IST

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕನಚಕ್ ಪ್ರದೇಶದಲ್ಲಿ ಶುಕ್ರವಾರ ಡ್ರೋನ್ ಅನ್ನು ಹೊಡೆದುರುಳಿಸಿ ಅದರಲ್ಲಿದ್ದ ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕನಚಕ್ ಪ್ರದೇಶದಲ್ಲಿ ಡ್ರೋನ್ ಹೊಡೆದುರುಳಿಸಲಾಗಿದೆ. ಜೊತೆಗೆ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡು ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಕಳೆದ ಜುಲೈ 16ರ ಬುಧವಾರ ಸತ್ವಾರಿ ಪ್ರದೇಶದಲ್ಲಿ ಸಂಶಯಾಸ್ಪದ ಡ್ರೋನ್ ಪತ್ತೆಯಾಗಿತ್ತು. ಜಮ್ಮು ಕಾಶ್ಮೀರದ ವಾಯುನೆಲೆಯ ಸುತ್ತಮುತ್ತಲು ಸಂಚರಿಸುತ್ತಿದ್ದ ಡ್ರೋನ್ ಬಗ್ಗೆ ಡ್ರೋನ್ ನಿರ್ಬಂಧಕ ವ್ಯವಸ್ಥೆಯು ರಾಷ್ಟ್ರೀಯ ಭದ್ರತಾ ಪಡೆಗೆ ಮಾಹಿತಿ ನೀಡಿತ್ತು. ಈ ಹಿಂದೆ ಜಮ್ಮು - ಕಾಶ್ಮೀರ ವಾಯುನೆಲೆ ಬಳಿ ನಡೆಸಿದ ಡ್ರೋನ್ ದಾಳಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿಯು ಕಳೆದ ತಿಂಗಳು ಈ ಪ್ರದೇಶದ ಸುತ್ತಮುತ್ತಲಿನಲ್ಲಿ ಡ್ರೋನ್ ಮೇಲೆ ನಿಗಾ ವಹಿಸುವಂತ ಆ್ಯಂಟಿ-ಡ್ರೋನ್ ಸಿಸ್ಟಂ ಅಳವಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.