ETV Bharat / bharat

ಮುಂಬೈ ಬಂದರಿಗೆ ಬಂದ ಡ್ರೋನ್​ ದಾಳಿಗೀಡಾದ ಹಡಗು: ಭಾರತೀಯ ನೌಕಾಪಡೆ ಕಾರ್ಯಾಚರಣೆ ಸಕ್ಸಸ್​​! - Mumbai port

ಅರಬ್ಬೀ ಸಮುದ್ರದಲ್ಲಿ ದಾಳಿಗೀಡಾಗಿದ್ದ ಇಸ್ರೇಲ್​ ಸಹಯೋಗದ ಕಚ್ಚಾತೈಲ ಸಾಗಿಸುತ್ತಿದ್ದ ಹಡಗು ಮುಂಬೈ ಬಂದರಿಗೆ ತಲುಪಿದೆ. ಹಾನಿಯಾದ ಭಾಗದ ದುರಸ್ತಿ ನಡೆಯಲಿದೆ.

ಮುಂಬೈ ಬಂದರಿಗೆ ಬಂದ ಡ್ರೋನ್​ ದಾಳಿಗೀಡಾದ ಹಡಗು

author img

By ETV Bharat Karnataka Team

Published : Dec 26, 2023, 11:14 AM IST

ಮುಂಬೈ (ಮಹಾರಾಷ್ಟ್ರ) : ಅರಬ್ಬೀಸಮುದ್ರದಲ್ಲಿ ಡ್ರೋನ್​ ದಾಳಿಗೆ ಒಳಗಾಗಿದ್ದ ಕಚ್ಚಾ ತೈಲವನ್ನು ಹೊತ್ತು ಮಂಗಳೂರು ಬಂದರಿಗೆ ಹೊರಟಿದ್ದ ವಾಣಿಜ್ಯ ಹಡಗು ಎಂವಿ ಕೆಮ್ ಫ್ಲೂಟೊ ಸದ್ಯ ಮುಂಬೈ ಬಂದರನ್ನು ಸುರಕ್ಷಿತವಾಗಿ ಮಂಗಳವಾರ ತಲುಪಿದೆ. ಡ್ರೋನ್​ ದಾಳಿಯಿಂದಾಗಿ ಹಡಗಿನ ಮುಂಭಾಗ ತೀವ್ರವಾಗಿ ಜಖಂಗೊಂಡಿದೆ. ಹಾನಿಗೊಳಗಾದ ಭಾಗಗಳ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ.

  • Images of the damage caused by the suspected drone attack on the merchant ship MV Chem Pluto. An Indian Navy team is assessing the damage caused by the strike and also investigating how the attack was carried out in the Arabian Sea. Indian Navy warships will be further enhancing… pic.twitter.com/F5SW7yrTUK

    — ANI (@ANI) December 25, 2023 " class="align-text-top noRightClick twitterSection" data=" ">

ಸೌದಿ ಅರೇಬಿಯಾದಿಂದ ಹೊರಟಿದ್ದ ಕಚ್ಚಾ ತೈಲದ ಹಡಗಿನ ಮೇಲೆ ಡ್ರೋನ್ ದಾಳಿ ನಡೆಸಿದ್ದು, ಇರಾನ್‌. 2021ರಿಂದ ವಾಣಿಜ್ಯ ಹಡಗುಗಳ ಮೇಲೆ ಇರಾನಿನ 7ನೇ ದಾಳಿ ಇದಾಗಿದೆ ಎಂದು ಅಮೆರಿಕದ ಭದ್ರತಾ ಸಂಸ್ಥೆ ಹೇಳಿದೆ.

ವ್ಯಾಪಾರಿ ಹಡಗು ಡಿಸೆಂಬರ್ 19 ರಂದು ಯುಎಇಯಿಂದ ತನ್ನ ಪ್ರಯಾಣ ಪ್ರಾರಂಭಿಸಿತ್ತು. ಡಿಸೆಂಬರ್ 25 ರಂದು ನವ ಮಂಗಳೂರು ಬಂದರಿಗೆ ತಲುಪಬೇಕಿತ್ತು. ಡಿಸೆಂಬರ್​ 23 ರಂದು ಗುಜರಾತ್‌ನ ವೆರಾವಲ್ ಕರಾವಳಿಯಿಂದ ಸುಮಾರು 200 ನಾಟಿಕಲ್ ಮೈಲುಗಳಷ್ಟು ದೂರದ ಅರಬ್ಬಿ ಸಮುದ್ರದಲ್ಲಿ 20 ಭಾರತೀಯ ಸಿಬ್ಬಂದಿಯಿದ್ದ ಕಚ್ಚಾ ತೈಲದ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿತ್ತು. ಜಪಾನ್‌ ಒಡೆತನದ ಹಡಗು ಇದಾಗಿದ್ದು, ಇಸ್ರೇಲ್​ ಸಹಭಾಗಿತ್ವ ಹೊಂದಿದೆ.

ಭಾರತೀಯ ಕೋಸ್ಟ್ ಗಾರ್ಡ್​ ನೆರವು: ದಾಳಿಯ ಮಾಹಿತಿ ತಿಳಿದ ತಕ್ಷಣ ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್‌ಗೆ ಸಂಕಷ್ಟದಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ಹೋಗುವಂತೆ ಸೂಚಿಸಲಾಗಿತ್ತು. ಅಲ್ಲದೇ ತೊಂದರೆಯಲ್ಲಿರುವ ಹಡಗಿಗೆ ನೆರವು ನೀಡುವಂತೆ ಕೋಸ್ಟ್ ಗಾರ್ಡ್ ನೌಕೆ ಆ ಪ್ರದೇಶದಲ್ಲಿನ ಎಲ್ಲ ಹಡಗುಗಳಿಗೆ ಹೇಳಿತ್ತು. ಅದರಂತೆ ದಾಳಿಗೀಡಾದ ಎಂವಿ ಕೆಮ್ ಫ್ಲೂಟೋ ಹಡಗನ್ನು ಭಾರತೀಯ ಕೋಸ್ಟ್​ ಗಾರ್ಡ್​ ಮುಂಬೈ ಬಂದರಿಗೆ ತಲುಪುವಂತೆ ಮಾಡಿದೆ.

ಪರಿಶೀಲನೆ ಬಳಿಕ ಇದು ಡ್ರೋನ್ ದಾಳಿ ಎಂದು ಭಾರತೀಯ ನೌಕಾಪಡೆ ಖಚಿತಪಡಿಸಿದೆ. ಹೆಚ್ಚಿನ ವಿವರಗಳಿಗಾಗಿ ಫೋರೆನ್ಸಿಕ್ ತನಿಖೆಯ ನಂತರ ದುರಸ್ತಿ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದರು. ಮತ್ತೊಂದೆಡೆ, ಭಾರತೀಯ ನೌಕಾಪಡೆಯು ಅರಬ್ಬೀ ಸಮುದ್ರದಲ್ಲಿ ಹಡಗುಗಳ ಮೇಲಿನ ದಾಳಿಯ ದೃಷ್ಟಿಯಿಂದ ಕಣ್ಗಾವಲುಗಾಗಿ P-8I ಗಸ್ತು ವಿಮಾನ, ಐಎನ್​ಎಸ್​ ಮೊರ್ಮುಗೊ, ಐಎನ್​ಎಸ್​ ಕೊಚ್ಚಿ, ಐಎನ್​ಎಸ್​ ಕೋಲ್ಕತ್ತಾ ಯುದ್ಧನೌಕೆಗಳನ್ನು ನಿಯೋಜಿಸಿದೆ.

ಸರಕು ಹಡಗು ಅಪಹರಣ ವಿಡಿಯೋ ಬಿಡುಗಡೆ: ಈ ಹಿಂದೆ ಇಸ್ರೇಲ್​ನ ಗ್ಯಾಲಕ್ಸಿ ಲೀಡರ್ ಎಂಬ ಸರಕು ಸಾಗಣೆ ಹಡಗನ್ನು ಹೈಜಾಕ್ ಮಾಡಿದ ವಿಡಿಯೋವನ್ನು ಹೌತಿ ಬಂಡುಕೋರರು ಬಿಡುಗಡೆ ಮಾಡಿದ್ದಾರೆ. ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಸರಕು ಹಡಗನ್ನು ಹೆಲಿಕಾಪ್ಟರ್ ಮೂಲಕ ಹಿಂಬಾಲಿಸಿ ಬಂಡುಕೋರರು ವಶಕ್ಕೆ ತೆಗೆದುಕೊಂಡಿದ್ದರು. ಇದರ ದೃಶ್ಯಗಳು ಹಾಲಿವುಡ್ ಸಿನಿಮಾಗಳಲ್ಲಿನ ಸಾಹಸ ದೃಶ್ಯಗಳನ್ನು ಹೋಲುತ್ತವೆ.

ದಂಗೆಕೋರರು ಹೆಲಿಕಾಪ್ಟರ್ ಮೂಲಕ ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಹಡಗಿನ ಡೆಕ್ ಮೇಲೆ ಇಳಿಯುತ್ತಾರೆ. ಬಳಿಕ ಗುಂಡು ಹಾರಿಸುತ್ತಾ ಘೋಷಣೆ ಕೂಗಿ ವ್ಹೀಲ್‌ಹೌಸ್ ಮತ್ತು ನಿಯಂತ್ರಣ ಕೇಂದ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ನಂತರ ಹಡಗನ್ನು ಯೆಮೆನ್‌ನ ಸಲೀಫ್ ಬಂದರಿಗೆ ತಿರುಗಿಸಿದ್ದರು.

ಇದನ್ನೂ ಓದಿ: ಮಂಗಳೂರಿಗೆ ಬರುತ್ತಿದ್ದ ಕಚ್ಚಾತೈಲ ಹಡಗಿನ ಮೇಲೆ ಡ್ರೋನ್​ ದಾಳಿ: ರಕ್ಷಣೆಗೆ ಧಾವಿಸಿದ ಭಾರತೀಯ ನೌಕಾಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.