ಅಮೃತಸರ(ಪಂಜಾಬ್): ಭಾರತ-ಪಾಕ್ ಗಡಿಯಲ್ಲಿ ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ಡ್ರೋನ್ ಹಾರಾಟ ಕಾಣಿಸಿಕೊಂಡಿದ್ದು, ಬಿಎಸ್ಎಫ್ನ 73ನೇ ಬೆಟಾಲಿಯನ್ ತಕ್ಷಣ ಕಾರ್ಯಪ್ರವೃತ್ತವಾಗಿ 11 ಸುತ್ತು ಗುಂಡು ಹಾರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅಮೃತಸರದ ಅಜ್ನಾಲಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾರ್ಡರ್ ಚೆಕ್ ಪೋಸ್ಟ್ ಇರುವ ಶಾಹಪುರದಲ್ಲಿ ಡ್ರೋನ್ ಕಾಣಿಸಿಕೊಂಡಿವೆ. ಗಡಿ ಭದ್ರತಾ ಪಡೆ ಗುಂಡು ಹಾರಿಸಿದ ನಂತರ ಡ್ರೋನ್ ಮತ್ತೆ ಪಾಕಿಸ್ತಾನದತ್ತ ತೆರಳಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಾದ ನಂತರ ಗಡಿ ಭದ್ರತಾ ಪಡೆಯ ಸಿಬ್ಬಂದಿ ಮತ್ತು ಭದ್ರತಾ ಏಜೆನ್ಸಿಗಳು ಪಾಕಿಸ್ತಾನದಿಂದ ಬಂದ ಡ್ರೋನ್ ಯಾವುದಾದರೂ ವಸ್ತುವನ್ನು ದೇಶದ ಭೂಪ್ರದೇಶದೊಳಗೆ ಬೀಳಿಸಿ ಹೋಗಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಇತ್ತೀಚೆಗೆ ಗಡಿಯಲ್ಲಿ ಡ್ರೋನ್ಗಳ ಹಾರಾಟ ತೀವ್ರವಾಗುತ್ತಿದ್ದು, ಕೆಲವೊಂದು ಬಾರಿ ಸ್ಮಗ್ಲರ್ಗಳನ್ನ ಈ ಡ್ರೋನ್ಗಳನ್ನು ಮಾದಕ ವಸ್ತು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಗೆ ಬಳಸುತ್ತಾರೆ ಎಂಬ ಮಾಹಿತಿ ಹೊರಬಿದ್ದಿದೆ. ಡ್ರೋನ್ ಕುರಿತ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ರಷ್ಯಾದಿಂದ ಎಸ್-400 ಖರೀದಿ ವಿಚಾರ: ಭಾರತದ ಪರ ನಿಂತ ಅಮೆರಿಕದ ಸೆನೆಟರ್