ಗಾಂಧಿನಗರ: ಗುಜರಾತ್ನ ಕಾಂಡ್ಲಾ ಬಂದರಿನಲ್ಲಿ ಇರಾನ್ನಿಂದ ಅಕ್ರಮವಾಗಿ ಆಮದಾದ 1436 ಕೋಟಿ ರೂಪಾಯಿ ಮೌಲ್ಯದ 205.6 ಕೆಜಿ ಹೆರಾಯಿನ್ ಅನ್ನು ಭಯೋತ್ಪಾದನಾ ನಿಗ್ರಹ ದಳ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ.
ಇರಾನ್ನಿಂದ ಜಿಪ್ಸಮ್ ಪೌಡರ್ ಆಮದಾಗುತ್ತಿದ್ದ ಹಡಗಿನಲ್ಲಿ 17 ಕಂಟೇನರ್ಗಳಲ್ಲಿ ಈ ಹೆರಾಯಿನ್ ಅನ್ನು ಅಡಗಿಸಿಡಲಾಗಿತ್ತು. ಹೆರಾಯಿನ್ ಸರಬರಾಜು ಮಾಡಲಾಗುತ್ತಿದೆ ಎಂಬ ಮಾಹಿತಿ ಅರಿತ ಡಿಆರ್ಒ ಅಧಿಕಾರಿಗಳು ದಾಳಿ ನಡೆಸಿ ಭಾರೀ ಪ್ರಮಾಣದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.
ಉತ್ತರಾಖಂಡ ಮೂಲದ ಸಂಸ್ಥೆಯೊಂದು ಈ ಸರಕುಗಳನ್ನು ಆಮದು ಮಾಡಿಕೊಂಡಿದೆ. ಇದು ಇರಾನ್‌ನ ಅಬ್ಬಾಸ್ ಬಂದರಿನಿಂದ ಸರಬರಾಜು ಮಾಡಲಾಗಿದೆ. ದಾಳಿಯ ವೇಳೆ ಮಾದಕವಸ್ತುವನ್ನು ಆಮದು ಮಾಡಿಕೊಂಡ ವ್ಯಕ್ತಿಯು ಸ್ಥಳದಲ್ಲಿರಲಿಲ್ಲ. ತನಿಖೆಯ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ಪಾಟ್ನಾ ಎನ್ಇಟಿ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಅಮೆಜಾನ್ನಿಂದ 1.08 ಕೋಟಿ ರೂ. ಆಫರ್