ಪುಣೆ(ಮಹಾರಾಷ್ಟ್ರ): ಡ್ರೈವರ್ ಇಲ್ಲದೇ ಬೈಕ್ವೊಂದು ರಸ್ತೆಯಲ್ಲಿ ಕೆಲ ಮೀಟರ್ ದೂರ ಚಲಿಸಿರುವ ಘಟನೆ ಪುಣೆ-ನಾಶಿಕ್ ರಾಷ್ಟ್ರೀಯ ಹೆದ್ದಾರಿಯ ನಾರಾಯಣಗಾಂವ್ನಲ್ಲಿ ನಡೆದಿದೆ. ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೈಕ್ ನೋಡಿರುವ ಅನೇಕರು ದಿಢೀರ್ ಆಶ್ಚರ್ಯಕ್ಕೊಳಗಾಗಿದ್ದಾರೆ. ಸುಮಾರು 300 ಮೀಟರ್ ದೂರು ಚಲಿಸಿರುವ ಬೈಕ್ ತದನಂತರ ಕೆಳಗೆ ಬಿದ್ದಿದೆ. ರಾಯಲ್ ಎನ್ಫೀಲ್ಡ್ ಬೈಕ್ ಇದಾಗಿದ್ದು, ಸವಾರನಿಲ್ಲದೇ ಇದು ಚಲಿಸಿರುವುದು ಮಾತ್ರ ಅನೇಕರಿಗೆ ಆಶ್ಚರ್ಯ ಹುಟ್ಟಿಸಿದೆ.
ಆಗಸ್ಟ್ 9ರಂದು ಸಂಜೆ 6:30ಕ್ಕೆ ಈ ಘಟನೆ ನಡೆದಿದ್ದು, ಸ್ಥಳೀಯ ಪೆಟ್ರೋಲ್ ಪಂಪ್ನಲ್ಲಿ ಘಟನೆಯ ದೃಶ್ಯಾವಳಿ ಸೆರೆಯಾಗಿದೆ.
ಇದನ್ನೂ ಓದಿರಿ: ನೀರಜ್ ಸಾಧನೆಯ ನೆನಪಿಗೆ ಆಗಸ್ಟ್ 7ರಂದು ಜಾವಲಿನ್ ಥ್ರೋ ದಿನಾಚರಣೆಗೆ AFI ನಿರ್ಧಾರ