ETV Bharat / bharat

ತನ್ನದೇ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದ ಚಾಲಕ.. ಭಯ ಬೀಳಿಸುತ್ತಿದೆ ಸಿಸಿಟಿವಿ ದ್ಯಶ್ಯ.. - ಶಾಕ್​ ನೀಡಿದ ತಮಿಳುನಾಡು ಸಿಸಿಟಿವಿ ದೃಶ್ಯಾವಳಿ

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದ ಅಪಘಾತದ ಸಿಸಿಟಿವಿ ದೃಶ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಚಾಲಕನೊಬ್ಬ ತನ್ನದೇ ಲಾರಿಯ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದ ಶಾಕಿಂಗ್​ ಘಟನೆ ಬಯಲಾಗಿದೆ..

his own vehicledd
ಲಾರಿ ಚಕ್ರಕ್ಕೆ ಸಿಲುಕಿ
author img

By

Published : Feb 18, 2022, 3:53 PM IST

Updated : Feb 18, 2022, 4:54 PM IST

ಕೊಯಮತ್ತೂರು(ತಮಿಳುನಾಡು): ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದ ಅಪಘಾತದ ಸಿಸಿಟಿವಿ ದೃಶ್ಯವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಚಾಲಕನೊಬ್ಬ ತನ್ನದೇ ಲಾರಿಯ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದ ಶಾಕಿಂಗ್​ ಘಟನೆ ಬಯಲಾಗಿದೆ.

ಸೇಲಂ ನಿವಾಸಿಯಾದ ಲಾರಿ ಚಾಲಕ ಸುರೇಶ್ ಬಾಬು ಎಂಬಾತ ಮೃತ ದುರ್ದೈವಿ. ನಿನ್ನೆ (ಫೆ.17) ಚಾಲಕ ಸುರೇಶ್​ ಬಾಬು ಸೇಲಂನಿಂದ ಕೊಯಮತ್ತೂರಿಗೆ ಲಾರಿಯಲ್ಲಿ ಸರಕುಗಳನ್ನು ಸಾಗಿಸುತ್ತಿದ್ದರು.

ತನ್ನದೇ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದ ಚಾಲಕ

ಈ ವೇಳೆ, ಕೊಯಮತ್ತೂರು ಸಮೀಪದ ಕರುಮಂಥಂಪಟ್ಟಿ ಎಂಬಲ್ಲಿ ಮೂತ್ರ ವಿಸರ್ಜನೆಗೆಂದು ಲಾರಿ ನಿಲ್ಲಿಸಿದ್ದಾರೆ. ಆದರೆ, ಸುರೇಶ್​ ಬಾಬು ಲಾರಿಯ ಎಂಜಿನ್​ ಆಫ್​ ಮಾಡಿರಲಿಲ್ಲ. ಲಾರಿ ಮುಂದೆ ನಿಂತು ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ, ಲಾರಿ ಇದ್ದಕ್ಕಿದ್ದಂತೆ ಚಲಿಸಲು ಶುರು ಮಾಡಿದೆ.

ಇದನ್ನು ಕಂಡು ಗಾಬರಿಗೊಂಡ ಸುರೇಶ್​ ಲಾರಿಯನ್ನು ತನ್ನ ಕೈಯಿಂದ ನಿಲ್ಲಿಸಲು ಯತ್ನಿಸಿದಾಗ ಲಾರಿ ಆತನ ಮೇಲೆ ಹರಿದಿದ್ದು, ಸ್ಥಳದಲ್ಲೇ ಪ್ರಾಣ ತೆತ್ತಿದ್ದಾನೆ. ಈ ಘಟನೆಯ ಸಿಸಿಟಿವಿ ದೃಶ್ಯವನ್ನ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ.

ಓದಿ: ಶ್ರೀನಗರದಲ್ಲಿ 'ನಿಗೂಢ ಸ್ಫೋಟ'ಕ್ಕೆ ಅಂಗಡಿ ಉಡೀಸ್​.. ಉಗ್ರರಿಂದ ಗ್ರೆನೇಡ್​ ದಾಳಿ ಶಂಕೆ

Last Updated : Feb 18, 2022, 4:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.