ETV Bharat / bharat

ಪೂಜೆ ಮಾಡಿ ಹಚ್ಚಿಟ್ಟಿದ್ದ ದೀಪದಿಂದ ಬಸ್​ಗೆ ಬೆಂಕಿ: ಚಾಲಕ, ನಿರ್ವಾಹಕ ಸಜೀವ ದಹನ - ಈಟಿವಿ ಭಾರತ ಕನ್ನಡ

ದೀಪಾವಳಿಯ ರಾತ್ರಿ ರಾಂಚಿಯ ಖಡ್ಗರಾ ಬಸ್ ನಿಲ್ದಾಣದಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಬಸ್​ ಚಾಲಕ ಮತ್ತು ನಿರ್ವಾಹಕ ಸಜೀವ ದಹನವಾಗಿದ್ದಾರೆ.

driver-and-conductor-burnt-alive-in-bus
ಪೂಜೆ ಮಾಡಿ ಹಚ್ಚಿಟ್ಟಿದ್ದ ದೀಪದಿಂದ ಬಸ್​ಗೆ ಬೆಂಕಿ
author img

By

Published : Oct 25, 2022, 9:31 AM IST

Updated : Oct 25, 2022, 9:57 AM IST

ರಾಂಚಿ( ಜಾರ್ಖಂಡ್): ಇಲ್ಲಿನ ಖಡ್ಗರಾ ಬಸ್ ನಿಲ್ದಾಣದಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಚಾಲಕ ಮತ್ತು ಕಂಡಕ್ಟರ್ ಬಸ್​​​ನಲ್ಲಿಯೇ ಸಜೀವ ದಹನವಾಗಿದ್ದಾರೆ. ಬಸ್​​ನೊಳಗೆ ಚಾಲಕ ಮತ್ತು ಸಹಾಯಕ ಮಲಗಿದ್ದು, ದೀಪಾವಳಿ ಪೂಜೆಗೆ ಹಚ್ಚಿದ್ದ ದೀಪದ ಕಾರಣ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆ ಸರಿ ರಾತ್ರಿ ಒಂದು ಗಂಟೆ ಸುಮಾರಿ ಸಂಭವಿಸಿದೆ ಎನ್ನಲಾಗಿದೆ.

ಮಾಹಿತಿ ತಿಳಿದು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ವೇಳೆ, ಬಸ್​​​​ನೊಳಗೆ ಎರಡು ಸುಟ್ಟ ದೇಹಗಳು ಪತ್ತೆಯಾಗಿವೆ. ಸಿಕ್ಕ ಮಾಹಿತಿ ಪ್ರಕಾರ ಖಡ್ಗರಹಾಳ ಬಸ್​ನಲ್ಲಿ ದೀಪ ಹಚ್ಚಿ ಚಾಲಕ ಮದನ್ ಮತ್ತು ಖಲಾಸಿ ಇಬ್ರಾಹಿಂ ಮಲಗಿದ್ದರು. ಈ ವೇಳೆ ಹೇಗೋ ಬಸ್ಸಿಗೆ ದೀಪದಿಂದಲೇ ಬೆಂಕಿ ಹತ್ತಿಕೊಂಡಿದೆ. ಇದರಲ್ಲಿ ಚಾಲಕ ಮತ್ತು ಖಲಾಸಿ ಇಬ್ಬರೂ ಸಜೀವ ದಹನವಾಗಿದ್ದರು.

ಪೂಜೆ ಮಾಡಿ ಹಚ್ಚಿಟ್ಟಿದ್ದ ದೀಪದಿಂದ ಬಸ್​ಗೆ ಬೆಂಕಿ

ಪ್ರತ್ಯೇಕ ಪ್ರಕರಣ : ಮತ್ತೊಂದೆಡೆ, ರಾಂಚಿಯ ಲಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮೊರ್ಹಬಾದಿ ಮೈದಾನದ ಬಳಿ ತಡರಾತ್ರಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಪಟಾಕಿ ಸಿಡಿಸಿದ್ದರಿಂದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಇದನ್ನೂ ಓದಿ : ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ.. ದೀಪಾವಳಿ ಹಬ್ಬದಂದೇ ಪ್ರಾಣಬಿಟ್ಟ ಮೂವರು

Last Updated : Oct 25, 2022, 9:57 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.