ETV Bharat / bharat

'ದೃಷ್ಟಿ 10 ಸ್ಟಾರ್​​ ಲೈನರ್': ಅದಾನಿ ಡಿಫೆನ್ಸ್ ತಯಾರಿಸಿದ ಮೊದಲ ಸ್ವದೇಶಿ ಯುಎವಿ ನೌಕಾಪಡೆಗೆ ಸೇರ್ಪಡೆ

ಹೈದರಾಬಾದ್‌ನಲ್ಲಿ ಅದಾನಿ ಗ್ರೂಪ್‌ನ ಡಿಫೆನ್ಸ್ ಮತ್ತು ಏರೋಸ್ಪೇಸ್ ವಿಭಾಗ ತಯಾರಿಸಿದ ಮೊದಲ ಸ್ವದೇಶಿ 'ದೃಷ್ಟಿ 10 ಸ್ಟಾರ್​​ ಲೈನರ್' ಯುಎವಿಯನ್ನು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್​. ಹರಿ ಕುಮಾರ್ ಬಿಡುಗಡೆ ಮಾಡಿದರು.

'Drishti 10 Starliner', India's first indigenously manufactured UAV, flagged off by Navy Chief
ಅದಾನಿ ಡಿಫೆನ್ಸ್ ತಯಾರಿಸಿದ ಮೊದಲ ಸ್ವದೇಶಿ ಯುಎವಿ ನೌಕಾಪಡೆಗೆ ಸೇರ್ಪಡೆ
author img

By ETV Bharat Karnataka Team

Published : Jan 10, 2024, 10:45 PM IST

ಹೈದರಾಬಾದ್: ದೇಶದ ನೌಕಾಪಡೆಗೆ ಹೊಸ ಬಲ ಬಂದಿದೆ. ಮೊದಲ ಸ್ವದೇಶಿ ನಿರ್ಮಿತ 'ದೃಷ್ಟಿ 10 ಸ್ಟಾರ್​​ ಲೈನರ್' ಮಾನವರಹಿತ ವೈಮಾನಿಕ ವಾಹನ (ಯುಎವಿ)ಕ್ಕೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್​. ಹರಿ ಕುಮಾರ್ ಬುಧವಾರ ಚಾಲನೆ ನೀಡಿದರು. ಹೈದರಾಬಾದ್‌ನಿಂದ ಗುಜರಾತ್​ನ ಪೋರಬಂದರಿಗೆ ತೆರಳಿದ ನೌಕೆಯು ಸಾಗರ ಕಾರ್ಯಾಚರಣೆಗೆ ಸನ್ನದ್ಧವಾಗಿದೆ.

'ದೃಷ್ಟಿ 10 ಸ್ಟಾರ್​​ ಲೈನರ್' ಒಂದು ಸುಧಾರಿತ ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ (Intelligence, Surveillance and Reconnaissance - ISR) ಮಾನವರಹಿತ ವೈಮಾನಿಕ ಡ್ರೋನ್ ಆಗಿದೆ. 36 ಗಂಟೆಗಳ ಹಾರಾಟ ಮತ್ತು 450 ಕೆಜಿ ಪೇಲೋಡ್ ಸಾಮರ್ಥ್ಯ ಹೊಂದಿದೆ. ಸ್ಟಾನಾಗ್ (STANAG) 4671 ಪ್ರಮಾಣೀಕರಣವನ್ನು ಹೊಂದಿರುವ ಏಕೈಕ ಹವಾಮಾನ ಮಿಲಿಟರಿ ಡ್ರೋನ್ ಇದಾಗಿದೆ. ಇದನ್ನು ಉದ್ಯಮಿ ಗೌತಮ್​ ಅದಾನಿ ಒಡೆತನದ ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್‌ ತಯಾರಿಸಿದೆ.

ಯುಎವಿ ನೌಕಾಪಡೆಗೆ ಸಮರ್ಪಿಸಿದ ಅಡ್ಮಿರಲ್ ಆರ್​. ಹರಿ ಕುಮಾರ್, ನೌಕಾ ಕಾರ್ಯಾಚರಣೆಗಳಲ್ಲಿ ದೃಷ್ಟಿ 10 ಸ್ಟಾರ್​​ ಲೈನರ್ ನಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಇದು ನಿರಂತರವಾಗಿ ಬಲವಾಗುತ್ತಿರುವ ಕಡಲ ಕಣ್ಗಾವಲು ಮತ್ತು ವಿಚಕ್ಷಣಕ್ಕಾಗಿ ನಮ್ಮ ಸನ್ನದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು. ಇದೇ ವೇಳೆ, ನೌಕಾಪಡೆಯ ಅಗತ್ಯತೆಗಳಿಗೆ ತಮ್ಮ ಕೈಜೋಡಿಸುವಲ್ಲಿ ಅದಾನಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.

ಅದಾನಿ ಎಂಟರ್‌ಪ್ರೈಸಸ್‌ನ ಉಪಾಧ್ಯಕ್ಷ ಜೀತ್ ಅದಾನಿ ಮಾತನಾಡಿ, ಭೂ, ವಾಯು ಮತ್ತು ನೌಕಾ ಗಡಿಗಳಾದ್ಯಂತ ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ ವೇದಿಕೆಗಳು ಅದಾನಿ ಗ್ರೂಪ್​ಗೆ ಪ್ರಮುಖ ಆದ್ಯತೆಯಾಗಿದೆ. ಇದು ಭಾರತೀಯ ಸಶಸ್ತ್ರ ಪಡೆಗಳ ಅಗತ್ಯತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ರಫ್ತುಗಾಗಿ ಜಾಗತಿಕ ಭೂಪಟದಲ್ಲಿ ಭಾರತವನ್ನು ಇರಿಸಲು ಸಹಾಯ ಮಾಡುತ್ತದೆ. ಭಾರತೀಯ ನೌಕಾಪಡೆ ಮತ್ತು ಅದರ ಅವಶ್ಯಕತೆಗಳು ಪೂರೈಸುವ ಸೇವೆ ಸಲ್ಲಿಸಲು ನಾವು ಹೆಮ್ಮೆಪಡುತ್ತೇವೆ ಎಂದು ತಿಳಿಸಿದರು.

ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್‌ನ ಉತ್ಪನ್ನವಾದ ಈ ಅತ್ಯಾಧುನಿಕ ಯುಎವಿ, ರಕ್ಷಣೆ ಕ್ಷೇತ್ರಯಲ್ಲಿ ಭಾರತದ ಸ್ವಾವಲಂಬನೆಯನ್ನು ಬಲಪಡಿಸುತ್ತದೆ. ಈಗಾಗಲೇ ಸಣ್ಣ ಶಸ್ತ್ರಾಸ್ತ್ರಗಳು, ಮಾನವ ರಹಿತ ವೈಮಾನಿಕ ವಾಹನಗಳು, ರಾಡಾರ್‌ಗಳು, ರಕ್ಷಣಾ ಎಲೆಕ್ಟ್ರಾನಿಕ್ಸ್, ಏವಿಯಾನಿಕ್ಸ್, ಯುದ್ಧತಂತ್ರದ ಸಂವಹನ ವ್ಯವಸ್ಥೆಗಳು ಮತ್ತು ಎಲೆಕ್ಟ್ರೋ-ಆಪ್ಟಿಕಲ್ ಸಿಸ್ಟಮ್‌ಗಳು ಸೇರಿದಂತೆ ವಿವಿಧ ಡೊಮೇನ್‌ಗಳಲ್ಲಿ ಪರಿಣತಿಯನ್ನು ಪ್ರದರ್ಶಿಸಿವೆ. ಈ ಮೂಲಕ ಸೇನೆ ಮತ್ತು ಇತರ ಅರೆಸೇನಾ ಪಡೆಗಳ ಅಗತ್ಯಗಳಿಗೆ ಪೂರೈಸುತ್ತದೆ.

ಅದಾನಿ ಗ್ರೂಪ್‌ನ ಡಿಫೆನ್ಸ್ ಮತ್ತು ಏರೋಸ್ಪೇಸ್ ವಿಭಾಗವು ಭಾರತದ ಮೊದಲ ಮಾನವರಹಿತ ವೈಮಾನಿಕ ವಾಹನಗಳ ಉತ್ಪಾದನಾ ಸೌಲಭ್ಯ ಮತ್ತು ಮೊದಲ ಖಾಸಗಿ ವಲಯದ ಸಣ್ಣ ಶಸ್ತ್ರಾಸ್ತ್ರ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸುವಲ್ಲಿ ಮುಂದಾಳತ್ವ ವಹಿಸಿದೆ. ಪ್ರಸ್ತುತ, ಭಾರತದ ಚೊಚ್ಚಲ ಸಮಗ್ರ ವಿಮಾನ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ (MRO) ಸೌಲಭ್ಯವನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ.

ಇದನ್ನೂ ಓದಿ: ಗುಜರಾತ್​ನಲ್ಲಿ ಸೆಮಿಕಂಡಕ್ಟರ್ ಚಿಪ್ ಘಟಕ ಆರಂಭಿಸಲಿದೆ ಟಾಟಾ ಗ್ರೂಪ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.