ಯಾದಾದ್ರಿ ಭುವನಗಿರಿ (ತೆಲಂಗಾಣ): ಜಿಲ್ಲೆಯ ಪಟಂಗಿ ಟೋಲ್ ಪ್ಲಾಝಾದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 25 ಕೆ.ಜಿ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ( ಡಿಆರ್ಐ) ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದೆ.
ಗುವಾಹಟಿಯಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಕಾರಿನಿಂದ ಚಿನ್ನದ ಬಿಸ್ಕೇಟ್ಗನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು 11.63 ಕೋಟಿ ಎಂದು ಅಂದಾಜಿಸಲಾಗಿದೆ.
ಓದಿ :ಶೃಂಗೇರಿ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ.. ಹೆತ್ತಮ್ಮನೇ ಬಾಲಕಿಗೇ ವಿಲನ್ ಆದಳೇ?
ಹಿಯೆರಿಯಸ್, ಸ್ಯೂಸ್, ಮೆಲ್ಟರ್ ಅಸ್ಸಾಯರ್ ಮತ್ತು ವಾಲ್ಕಾಂಬಿ ಸೇರಿದಂತೆ ನಾಲ್ಕು ಕಂಪನಿಗಳ ವಿದೇಶಿ ಗುರುತಿರುವ 1 ಕೆ.ಜಿ ಚಿನ್ನದ ಗಟ್ಟಿ ಸೇರಿದಂತೆ 25ಕೆಜಿ ಚಿನ್ನವನ್ನು ಕಾರಿನ ಡ್ಯಾಶ್ ಬೋರ್ಡ್ನಿಂದ ವಶಪಡಿಸಿಕೊಳ್ಳಲಾಗಿದೆ. ಮುಂಭಾಗದ ಸೀಟಿನ ಬಳಿಯ ಏರ್ ಬ್ಯಾಗನ್ನು ತೆಗೆದು, ಅಲ್ಲಿ ಚಿನ್ನ ಇಟ್ಟು ಯಾರಿಗೂ ಗೊತ್ತಾಗದ ಹಾಗೆ ಫೆವಿಸ್ಟಿಕ್ನಿಂದ ಡ್ಯಾಶ್ ಬೋರ್ಡ್ ಮುಚ್ಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 11.63 ಮೌಲ್ಯದ 25 ಕೆ.ಜಿ ಚಿನ್ನ ಮತ್ತು ಕಳ್ಳಸಾಗಣೆಗೆ ಬಳಸಿದ ಕಾರನ್ನು ವಶಪಡಿಸಿಕೊಂಡು ಕಸ್ಟಮ್ ಕಾಯ್ದೆ 162 ರ ಅಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಡಿಆರ್ಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.