ಹೈದರಾಬಾದ್ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇಲ್ಲಿನ ಸರ್ಕಾರ ಅಧೀನದ ಗಾಂಧಿ ಆಸ್ಪತ್ರೆಗೆ 100 ಆಮ್ಲಜನಕ ಸಿಲಿಂಡರ್‌ಗಳನ್ನು ಒದಗಿಸಿದೆ.
ಕೇಂದ್ರ ಗೃಹ ಸಚಿವರಿಗೆ, ಅದೇ ಇಲಾಖೆಯ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಸಣ್ಣ ಕೋರಿಕೆಯ ಮೇರೆಗೆ ಗಾಂಧಿ ಆಸ್ಪತ್ರೆಗೆ 100 ಸಿಲಿಂಡರ್‌ಗಳನ್ನು ಸರಬರಾಜು ಮಾಡಲಾಗಿದೆ.
ಭಾನುವಾರ ಡಿಆರ್‌ಡಿಒ ಮತ್ತು ತೆಲಂಗಾಣದ ವೈದ್ಯಕೀಯ ಮತ್ತು ಆರೋಗ್ಯ ವಿಭಾಗದ ಅಧಿಕಾರಿಗಳ ಸಮ್ಮುಖದಲ್ಲಿ ಸಿಲಿಂಡರ್‌ಗಳನ್ನು ಆಸ್ಪತ್ರೆ ಅಧೀಕ್ಷಕರಿಗೆ ಹಸ್ತಾಂತರಿಸಿದರು.
ತಮ್ಮ ಸಂಸದೀಯ ಕ್ಷೇತ್ರವಾದ ಸಿಕಂದರಾಬಾದ್‌ಗೆ 100 ಆಕ್ಸಿಜನ್ ಸಿಲಿಂಡರ್‌ಗಳನ್ನು ಕಳುಹಿಸಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಡಿಆರ್‌ಡಿಒ ಅವರಿಗೆ ಧನ್ಯವಾದ ಎಂದು ರೆಡ್ಡಿ ಟ್ವೀಟ್ ಮೂಲಕ ತಿಳಿಸಿದರು.
ಮತ್ತೊಂದು ಟ್ವೀಟ್‌ನಲ್ಲಿ, ಅಗತ್ಯವಿರುವ ಕೋವಿಡ್ ರೋಗಿಗಳಿಗೆ ಲಭ್ಯವಾಗುವಂತೆ ತೆಲಂಗಾಣಕ್ಕೆ ರೆಮ್‌ಡೆಸಿವಿರ್ ಹಂಚಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ ಎಂದು ರಾಜ್ಯ ಸಚಿವರು ಹೇಳಿದ್ದಾರೆ.
ಏಪ್ರಿಲ್ 21 ರಿಂದ ಮೇ 9 ರವರೆಗೆ 93,800 ರೆಮ್‌ಡೆಸಿವಿರ್ ಲಸಿಕೆಯ ಬಾಟಲಿಗಳನ್ನು ತೆಲಂಗಾಣಕ್ಕೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.