ಬಾಲಸೋರ್ (ಒಡಿಶಾ): ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಒಡಿಶಾ ಕರಾವಳಿಯ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್)ನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವಿಸ್ತೃತ ಶ್ರೇಣಿಯ 'ಪಿನಾಕಾ' ರಾಕೆಟ್‌ನ ಯಶಸ್ವಿ ಪ್ರಯೋಗ ನಡೆಸಿದೆ.
ಒಟ್ಟಾರೆಯಾಗಿ 25 ಸುಧಾರಿತ ಪಿನಾಕಾ ರಾಕೆಟ್‌ಗಳನ್ನು ಗುರುವಾರ ಮತ್ತು ಶುಕ್ರವಾರದಂದು ಪರೀಕ್ಷಿಸಲಾಯಿತು. 122 ಎಂಎಂ ಕ್ಯಾಲಿಬರ್ ರಾಕೆಟ್‌ಗಳನ್ನು ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ (ಎಂಬಿಆರ್ಎಲ್) ಬಳಸಿ ರಾಕೆಟ್‌ಗಳನ್ನು ಉಡಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿನಾಕಾ ರಾಕೆಟ್ ಸಿಸ್ಟಂನ ಸುಧಾರಿತ ಶ್ರೇಣಿಯು ಸದ್ಯಕ್ಕೆ 45 ಕಿಲೋಮೀಟರ್ ದೂರದಲ್ಲಿರುವ ಗುರಿಗಳನ್ನು ನಾಶಪಡಿಸುತ್ತದೆ ಎಂದು ಮೂಲವೊಂದು ತಿಳಿಸಿದೆ. ಪಿನಾಕಾ ರಾಕೆಟ್‌ಗಳ ಗುರಿಗಳನ್ನು ಪರಿಶೀಲಿಸುವ ಸಲುವಾಗಿ ಹಲವು ಸಾಧನಗಳನ್ನು ಬಳಸಿಕೊಳ್ಳಲಾಗಿದೆ.
-
DRDO successfully test fires Enhanced Pinaka Rocket https://t.co/JyTwd25d61 pic.twitter.com/oU4fBgOSsh
— DRDO (@DRDO_India) June 25, 2021 " class="align-text-top noRightClick twitterSection" data="
">DRDO successfully test fires Enhanced Pinaka Rocket https://t.co/JyTwd25d61 pic.twitter.com/oU4fBgOSsh
— DRDO (@DRDO_India) June 25, 2021DRDO successfully test fires Enhanced Pinaka Rocket https://t.co/JyTwd25d61 pic.twitter.com/oU4fBgOSsh
— DRDO (@DRDO_India) June 25, 2021
ನಾಗ್ಪುರದ ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್, ಪುಣೆ ಮೂಲದ ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಎಆರ್‌ಡಿಇ) ಮತ್ತು ಹೈ ಎನರ್ಜಿ ಮಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ (ಎಚ್ಇಎಂಆರ್ಎಲ್) ಜೊತೆ ಜಂಟಿಯಾಗಿ ಡಿಆರ್‌ಡಿಒ ಪಿನಾಕಾ ರಾಕೆಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಇದನ್ನೂ ಓದಿ: International Anti Drug Day : ₹50 ಕೋಟಿ ಮೌಲ್ಯದ ಮಾದಕ ವಸ್ತು ನಾಶಪಡಿಸಲಿರುವ ಕರ್ನಾಟಕ
ಪಿನಾಕಾ ರಾಕೆಟ್‌ಗಳ ಯಶಸ್ವಿ ಪರೀಕ್ಷೆಗಾಗಿ ಡಿಆರ್‌ಡಿಒ ಸಂಸ್ಥೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ. ಡಿಆರ್‌ಡಿಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ರಾಕೆಟ್ ಪ್ರಯೋಗದಲ್ಲಿ ಭಾಗಿಯಾಗಿದ್ದ ತಂಡಗಳು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.