ETV Bharat / bharat

ಉತ್ತರ ಪ್ರದೇಶಕ್ಕೆ ಜಂಬೊ ಆಮ್ಲಜನಕ ಸಿಲಿಂಡರ್‌ ಪೂರೈಸಿದ ಡಿಆರ್‌ಡಿಒ

author img

By

Published : Apr 19, 2021, 4:08 PM IST

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ. ಇದಾದ ನಂತರ ಅಲ್ಲಿನ ಕೊರೊನಾ ನಿಯಂತ್ರಣ ಪರಿಸ್ಥಿತಿ ಕೈ ಮೀರಿ ಹೋಗಿದೆ.

DRDO provides jumbo oxygen cylinders to Uttar Pradesh
ಉತ್ತರ ಪ್ರದೇಶಕ್ಕೆ ಜಂಬೊ ಆಮ್ಲಜನಕ ಸಿಲಿಂಡರ್‌ ಪೂರೈಸಿದ ಡಿಆರ್‌ಡಿಒ

ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿರ್ದೇಶನದಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಉತ್ತರ ಪ್ರದೇಶ ಸರ್ಕಾರಕ್ಕೆ 5,000 ಲೀಟರ್ ಸಾಮರ್ಥ್ಯದ ವೈದ್ಯಕೀಯ ಆಮ್ಲಜನಕವಾದ ಜಂಬೋ ಸಿಲಿಂಡರ್​ಗಳನ್ನು ಸೋಮವಾರ ಪೂರೈಸಿದೆ.

ಹೆಚ್ಚುವರಿ 1,000 ಸಿಲಿಂಡರ್‌ಗಳನ್ನು ಡಿಆರ್‌ಡಿಒ ಕೆಲ ದಿನಗಳ ನಂತರ ಒದಗಿಸಲಿದೆ. ಇನ್ನು ಈ ಆಮ್ಲಜನಕವನ್ನ ಲಖನೌದಲ್ಲಿನ ಕೊರೊನಾ ರೋಗಿಗಳಿಗೆ ಪೂರೈಸಲಾಗುವುದು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ ಹಾಗೆ ಉತ್ತರ ಪ್ರದೇಶದ ಕೊರೊನಾ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ಎಲ್ಲ ಕಾರಣಕ್ಕೆ ಮೇ 15 ರವರೆಗೆ ಎಲ್ಲಾ ಭಾನುವಾರದಂದು ರಾಜ್ಯಾದ್ಯಂತ ಲಾಕ್​ಡೌನ್​ ಮಾಡುವ ಬಗ್ಗೆ ರಾಜ್ಯ ಸರ್ಕಾರ ಶುಕ್ರವಾರ ಪ್ರಕಟಣೆ ಹೊರಡಿಸಿದೆ. ಈ ಹಿನ್ನೆಲೆ ಉತ್ತರ ಪ್ರದೇಶದ ಎಲ್ಲ ಜಿಲ್ಲೆಗಳು ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆ ಲಾಕ್​ ಡೌನ್​ ಇರಲಿವೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಉತ್ತರ ಪ್ರದೇಶದಲ್ಲಿ ಪ್ರಸ್ತುತ ಒಟ್ಟು 1,91,457 ಸಕ್ರಿಯ ಕೊರೊನಾ ಪ್ರಕರಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.