ETV Bharat / bharat

30,000 ಅಡಿಗಳ ಮೇಲೆ ತಪಸ್​ ಡ್ರೋನ್ ಹಾರಿಸಲು ಡಿಆರ್​ಡಿಒ ನೂತನ ಪ್ರಯೋಗ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ತಪಸ್​ ಡ್ರೋನ್ ಹಾರಿಸಲು ಸಿದ್ದತೆ ನಡೆದಿದೆ.

author img

By ETV Bharat Karnataka Team

Published : Jan 15, 2024, 10:56 PM IST

ತಪಸ್​ ಡ್ರೋನ್
ತಪಸ್​ ಡ್ರೋನ್

ನವದೆಹಲಿ : ಮಧ್ಯಮ ಎತ್ತರ ಮತ್ತು ದೀರ್ಘ ಸಹಿಷ್ಣುತೆ (ಎಂಎಎಲ್​ಇ) ತಪಸ್​ ಡ್ರೋನ್​ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಡಿಫೆನ್ಸ್​​ ರಿಸರ್ಚ್​​ ಅಂಡ್​​ ಡೆವೆಲಪ್​​​ಮೆಂಟ್​ ಆರ್ಗನೈಜೇಷನ್​- ಡಿಆರ್​ಡಿಒ ತನ್ನ ಯೋಜನೆಯನ್ನು ಮುಂದುವರೆಸುತ್ತಿದೆ. ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ಲ್ಯಾಬೊರೇಟರಿಯಿಂದ ಅಭಿವೃದ್ಧಿಪಡಿಸುತ್ತಿರುವ ತಪಸ್ ಡ್ರೋನ್‌ಗಳನ್ನು 30,000 ಅಡಿಗಳಷ್ಟು ಎತ್ತರದಲ್ಲಿ 24 ಗಂಟೆಗಳ ಕಾಲ ಹಾರಿಸಲು ಪ್ರಯೋಗ ನಡೆಸಲಾಗುತ್ತಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಈ ಕಾರ್ಯಾಚರಣೆಗಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ತಪಸ್ ಡ್ರೋನ್‌ಗಳನ್ನು ಬಳಸಲು ರಕ್ಷಣಾ ಪಡೆ ಆಸಕ್ತಿ ತೋರಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಈ ಪ್ರಯೋಗದಲ್ಲಿ ತೊಡಗಿಸಿಕೊಂಡಿದೆ. ಅತಿ ಎತ್ತರದಲ್ಲಿ ಡ್ರೋನ್​ ಹಾರಿಸುವುದರಿಂದ ಕಣ್ಗಾವಲು ಮತ್ತು ವೀಕ್ಷಣೆಗಾಗಿ ಬಳಸಬಹುದು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

ರಕ್ಷಣಾ ಪಡೆಗಳಿಂದ ಪ್ರಯೋಗ ನಡೆಸಿದಾಗ ಸುಮಾರು 28,000 ಅಡಿ ಎತ್ತರವನ್ನು ಡ್ರೋನ್​ ತಲುಪುವಲ್ಲಿ ಯಶಸ್ವಿಯಾಗಿದ್ದು, 18 ಗಂಟೆಗಳ ಕಾಲ ಈ ಡ್ರೋನ್​ ಯಾವುದೇ ಅಡೆತಡೆ ಇಲ್ಲದೇ ಹಾರಬಲ್ಲದು. ಪ್ರಯೋಗಗಳಲ್ಲಿ ಡ್ರೋನ್ ಅನ್ನು ಅರಬ್ಬಿ ಸಮುದ್ರದ ಮೇಲೆ ಕೂಡ ಭಾರತೀಯ ನೌಕಾಪಡೆಯ ಅಧಿಕಾರಿಗಳು ಸಹ ನಿರ್ವಹಿಸಿದ್ದಾರೆ. ಕರ್ನಾಟಕದ ಚಿತ್ರದುರ್ಗದ ಏರ್‌ಫೀಲ್ಡ್‌ನಿಂದ ಹಾರಿದ ಕೆಲವು ಗಂಟೆಗಳ ನಂತರ ತಪಸ್ ಡ್ರೋನ್ ಟೇಕ್ ಆಫ್ ಆಗಲು ಅಗತ್ಯವಿರುವ ರನ್‌ವೇ ಉದ್ದವು ತುಂಬಾ ಉದ್ದವಾಗಿರಬೇಕಿಲ್ಲ ಮತ್ತು ದ್ವೀಪ ಪ್ರದೇಶದ ಕೆಲವು ಸಣ್ಣ ಏರ್‌ಫೀಲ್ಡ್‌ಗಳಿಂದ ಇದನ್ನು ಬಳಸಬಹುದು ಎಂದು ಮೂಲಗಳು ಸಂಶೋಧನೆ ಸಂಸ್ಥೆಯ ಮೂಲಗಳು ಮಾಹಿತಿ ನೀಡಿವೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ - ಡಿಆರ್​ಡಿಒ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದ ಪ್ರಯೋಗಾಲಯದ ಮೂಲಕ, ಡ್ರೋನ್​ ವಿನ್ಯಾಸಗಳನ್ನು ಸುಧಾರಿಸಲು ಮತ್ತು ಎತ್ತರ, ಸಹಿಷ್ಣುತೆಯ ಸೇವಾ ಅಗತ್ಯತೆಗಳಿಗೆ ಹೆಚ್ಚು ಸೂಕ್ತವಾಗುವಂತೆ ಸಾಮರ್ಥ್ಯ ಹೆಚ್ಚಿಸಲು ಕೆಲಸ ಮಾಡುತ್ತಿದೆ. ಇತ್ತೀಚಿನ ಮೌಲ್ಯಮಾಪನಗಳಲ್ಲಿ ಸಾಮರ್ಥ್ಯವನ್ನು ಪೂರೈಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತನ್ನ ಗುರಿ ಸಾಧಿಸಲು ನಿರಂತರ ಪ್ರಯೋಗದಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. ಡಾ ಸಮೀರ್ ವಿ ಕಾಮತ್ ನೇತೃತ್ವದಲ್ಲಿ ಪ್ರಧಾನ ರಕ್ಷಣಾ ಸಂಶೋಧನಾ ಸಂಸ್ಥೆಯು ಘಾಟಕ್‌ನಂತಹ ಮಾನವರಹಿತ ಯುದ್ಧ ವೈಮಾನಿಕ ವಾಹನಗಳು ಮತ್ತು ಆರ್ಚರ್‌ನಂತಹ ಇತರ ಯೋಜನೆಗಳು ಸೇರಿದಂತೆ ಪ್ರಮುಖ ಡ್ರೋನ್ ಯೋಜನೆಗಳಲ್ಲಿ ಕೆಲಸ ನಿರ್ವಹಿಸುತ್ತಿದೆ.

ಇದನ್ನೂ ಓದಿ : ಎಐ ಚಾಲಿತ ಸುಳ್ಳು ಮಾಹಿತಿ ವಿಶ್ವಕ್ಕೆ ಅತಿದೊಡ್ಡ ಅಪಾಯ: ವಿಶ್ವ ಆರ್ಥಿಕ ವೇದಿಕೆ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.