ETV Bharat / bharat

ದೇಶವ್ಯಾಪಿ ಶಾಲೆಗಳ ಆರಂಭ ಯಾವಾಗ? ನೀತಿ ಆಯೋಗದ ವಿ.ಕೆ ಪಾಲ್‌ ಹೇಳಿದ್ದಿಷ್ಟು..

author img

By

Published : Jun 20, 2021, 10:49 AM IST

ಶಾಲೆಗಳು ಪುನಾರಂಭಿಸಬೇಕಾದರೆ ಮಕ್ಕಳು, ಶಿಕ್ಷಕರು ಹಾಗೂ ಅವರಿಗೆ ವ್ಯಾಕ್ಸಿನೇಷನ್​​, ಕೋವಿಡ್​ ಮೂರನೇ ಅಲೆ, ರೂಪಾಂತರಿ ವೈರಸ್​ ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಡಾ.ವಿಕೆ ಪಾಲ್‌ ಸಲಹೆ ನೀಡಿದ್ದಾರೆ.

schools reopen in India
ಶಾಲೆಗಳ ಪುನಾರಂಭ

ನವದೆಹಲಿ: 2020ರಲ್ಲಿ ದೇಶಕ್ಕೆ ಕೋವಿಡ್​ ಲಗ್ಗೆ ಇಟ್ಟ ಕಾರಣ ಮಾರ್ಚ್​ ಅಂತ್ಯದಲ್ಲಿ ಮುಚ್ಚಿದ್ದ ಶಾಲೆಗಳು ಈವರೆಗೂ ತೆರೆದಿಲ್ಲ. ಈ ವರ್ಷ ಆರಂಭದಲ್ಲಿ ಸೋಂಕಿನ ಪ್ರಮಾಣ ತಗ್ಗಿತು ಎಂದು ಶಾಲೆಗಳು ಪುನಾರಂಭಿಸುವತ್ತ ಶಿಕ್ಷಣ ಇಲಾಖೆ ಚಿತ್ತ ಹರಿಸುತ್ತಿರುವಾಗಲೇ ಎರಡನೇ ಅಲೆ ಉಲ್ಬಣವಾಯಿತು. ಅಲ್ಲದೇ ಮೂರನೇ ಅಲೆ ಸಮೀಪದಲ್ಲಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದು, ಶಾಲೆಗಳನ್ನು ಮತ್ತೆ ತೆರೆಯುವ ಕುರಿತು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ ಪಾಲ್‌ ಪ್ರತಿಕ್ರಿಯೆ ನೀಡಿದೆ.

Dr. VK Paul
ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿಕೆ ಪಾಲ್‌

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಲ್​​, ಶಾಲೆ ಪುನಾರಂಭಿಸಬೇಕಾದರೆ ನಾವು ಕೆಲವು ವಿಷಯಗಳ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಶಾಲೆಗಳಲ್ಲಿ ಮಕ್ಕಳು, ಶಿಕ್ಷಕರು, ಸಹಾಯಕರು ಇರುತ್ತಾರೆ. ದೈಹಿಕ ಅಂತರ ಹೆಚ್ಚು ಕಾಯ್ದುಕೊಳ್ಳಲು ಆಗುವುದಿಲ್ಲ. ಅವರೆಲ್ಲರನ್ನೂ ನಾವು ಗಮದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಎಲ್ಲಾ ಶಿಕ್ಷಕರಿಗೆ ಕೋವಿಡ್​ ಲಸಿಕೆ ಸಿಕ್ಕಿದೆಯೇ ಎಂಬುದರ ಬಗ್ಗೆ ದೃಢಪಡಿಸಿಕೊಳ್ಳಬೇಕು. ಮಕ್ಕಳಿಗೆ ಲಸಿಕೆ ಲಭ್ಯವಾದರೆ ಮೊದಲು ಅವರಿಗೆ ವ್ಯಾಕ್ಸಿನ್​ ಹಾಕುವ ಕೆಲಸ ಮಾಡಬೇಕು ಎಂದರು.

ರೂಪಾಂತರಿ ವೈರಸ್​ ಮಕ್ಕಳಿಗೆ ಅಂಟುವ ಸಾಧ್ಯತೆ

ಅಧ್ಯಯನವೊಂದನ್ನು ಉಲ್ಲೇಖಿಸಿದ ಪಾಲ್​, ಎರಡನೇ ಅಲೆಯ ಭೀಕರತೆಗೆ ಒಳಗಾದ ನಗರಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರ ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸೆರೊಪಾಸಿಟಿವಿಟಿ ದರದಲ್ಲಿ ಹೆಚ್ಚು ಅಂತವಿರಲಿಲ್ಲ. ಆದರೆ ಸೋಂಕು ತಗುಲಿದ ಮಕ್ಕಳ ಸ್ಥತಿ ಗಂಭೀರವಾಗಿರಲಿಲ್ಲ, ಸೌಮ್ಯ ಲಕ್ಷಣಗಳಿದ್ದವು. ಕೋವಿಡ್​ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುವುದಿಲ್ಲ, ಆದರೂ ಕೆಲವೊಂದು ಕೇಸ್​ಗಳು ಗಂಭೀರವಾಗಿರಬಹುದು. ವೈರಸ್​​ ರೂಪಾಂತರ ಹೊಂದುತ್ತಿರುತ್ತದೆ. ರೂಪಾಂತರಿ ಕೊರೊನಾ ಮಕ್ಕಳಿಗೆ ಅಂಟುವ ಸಾಧ್ಯತೆಯಿದ್ದು, ಇದಕ್ಕಾಗಿ ನಾವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಕ್ಕಳ ಮೇಲೆ ಕೊರೊನಾ 3ನೇ ಅಲೆ ಪ್ರಭಾವ ಬೀರಲಿದೆಯಾ..? ವೈದ್ಯರ ಅಭಿಪ್ರಾಯ ಏನು?

ನಾವು ಮತ್ತೊಂದು ವಿಷಯವನ್ನು ಗಮನಿಸಬೇಕು. ಕೆಲ ದೇಶಗಳಲ್ಲಿ ಕೊರೊನಾ ತಗ್ಗಿತೆಂದು ಶಾಲೆಗಳನ್ನ ತೆರೆಯಲಾಯಿತು. ಆದರೆ ಮತ್ತೆ ಕೋವಿಡ್​ ಉಲ್ಬಣಗೊಂಡಿತು. ಇಂತಹ ಪರಿಸ್ಥತಿಗೆ ನಮ್ಮ ಮಕ್ಕಳನ್ನ ಹಾಗೂ ಶಿಕ್ಷಕರನ್ನ ನಾವು ನೂಕಲು ಬಯಸುವುದಿಲ್ಲ. ಅವರ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪಾಲ್​ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.