ಗುರುಗ್ರಾಮ್(ಹರಿಯಾಣ): ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಗುರುಗ್ರಾಮದಲ್ಲಿ ಕೋವಿಡ್ನಿಂದ ಮೃತಪಡುತ್ತಿರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ಶವಸಂಸ್ಕಾರ ಘಟಕದಲ್ಲಿ ಮೃತದೇಹಗಳನ್ನು ಅಂತ್ಯಕ್ರಿಯೆ ಮಾಡಲು ಸ್ಥಳದ ಕೊರತೆ ಉಂಟಾಗುತ್ತಿದೆ.
ನಗರದ ಪ್ರತಿ ಚಿತಾಗಾರಗಳು ಪೂರ್ತಿಯಾಗಿದ್ದು, ಸ್ಥಳ ಸಿಗದೇ ಶವ ಸಂಸ್ಕಾರವನ್ನು ಕಾರ್ ಪಾರ್ಕಿಂಗ್ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.
ಕೊರೊನಾದಿಂದ ಸಾವನ್ನಪ್ಪಿದವರ ಶವ ಸಂಸ್ಕಾರ ನಡೆಸಲು ಘಟಕದಲ್ಲಿ ಸ್ಥಳಾವಕಾಶದ ಕೊರತೆಯಿದೆ. ಹೀಗಾಗಿ ಕಾರ್ ಪಾರ್ಕಿಂಗ್ನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ ಎಂದು ಶವಾಗಾರ ಘಟಕದ ಸಿಬ್ಬಂದಿ ಹೇಳುತ್ತಾರೆ.
ಶವಾಗಾರ ಘಟಕದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರಿಗೆ ಮೋಕ್ಷ ಒದಗಿಸಲು ಸಂಬಂಧ ಕುಟುಂಬಸ್ಥರು ಕಾಯುತ್ತಿದ್ದಾರೆ. ರಾತ್ರಿಯಾದ್ರೂ ಶವಾಗಾರ ಘಟಕದ ಮುಂದೆ ಆ್ಯಂಬುಲೆನ್ಸ್ಗಳು ಸಾಲುಗಟ್ಟಿ ನಿಲ್ಲುತ್ತಿವೆ ಎಂಬುದು ಕೆಲಸಗಾರರ ಮಾತಾಗಿದೆ.