ETV Bharat / bharat

ಭಾರಿ ಅಗ್ನಿ ಅವಘಡ: ಸಾಲು ಸಾಲು ಮನೆಗಳು ಸುಟ್ಟು ಭಸ್ಮ - Fire attack in Jammu Kashmir

ಜಮ್ಮು ಮತ್ತು ಕಾಶ್ಮೀರದ ಬನಿಹಾಲ್ ಉಪವಿಭಾಗದಿಂದ 28 ಕಿ.ಮೀ ದೂರದಲ್ಲಿರುವ ಖಾರಿ ಎಂಬ ಜನನಿಬಿಡ ಹಿಜ್ವಾ ಗ್ರಾಮದಲ್ಲಿನ ಒಂದು ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ 11 ಮನೆಗಳಿಗೆ ವ್ಯಾಪಿಸಿದ ಪರಿಣಾಮ 12 ಮನೆಗಳು ಸುಟ್ಟುಕರಕಲಾಗಿವೆ.

ರಾಂಬಾನ್​ನಲ್ಲಿ ಬೆಂಕಿ ಅವಘಡ
ರಾಂಬಾನ್​ನಲ್ಲಿ ಬೆಂಕಿ ಅವಘಡ
author img

By

Published : Jun 29, 2021, 8:31 PM IST

ಬನಿಹಾಲ್ (ಜಮ್ಮು): ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬರೋಬ್ಬರಿ 12 ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಘಟನೆಯಲ್ಲಿ ಸಂಭವಿಸಿರುವ ಅನಾಹುತಗಳ ಬಗ್ಗೆ ವರದಿಯಾಗಿಲ್ಲ.

ಬನಿಹಾಲ್ ಉಪವಿಭಾಗದಿಂದ 28 ಕಿ.ಮೀ ದೂರದಲ್ಲಿರುವ ಖಾರಿ ಎಂಬ ಜನನಿಬಿಡ ಹಿಜ್ವಾ ಗ್ರಾಮದಲ್ಲಿನ ಒಂದು ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ 11 ಮನೆಗಳಿಗೆ ಅಂಟಿಕೊಂಡಿದೆ. ಪರಿಣಾಮ 12 ಮನೆಗಳು ಸುಟ್ಟುಕರಕಲಾಗಿವೆ.

ಈ ವೇಳೆ, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಇನ್ನು ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಇನ್ನು ಘಟನೆಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.