ಮುಂಬೈ (ಮಹಾರಾಷ್ಟ್ರ): ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಅಥವಾ ಮತ್ತೊಮ್ಮೆ ಲಾಕ್‌ಡೌನ್ ವಿಧಿಸುವ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.
"ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಅಥವಾ ಲಾಕ್‌ಡೌನ್ ವಿಧಿಸಲು ಅನೇಕ ಜನರು ನನಗೆ ಸೂಚಿಸಿದ್ದಾರೆ. ಆದರೆ ರಾತ್ರಿ ಕರ್ಫ್ಯೂ ಅಥವಾ ಇನ್ನೊಂದು ಲಾಕ್‌ಡೌನ್ ವಿಧಿಸಬೇಕೆಂದು ನಾನು ಭಾವಿಸುವುದಿಲ್ಲ" ಎಂದು ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ 62,218 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಜ್ಯವಾಗಿದೆ. ಈವರೆಗೆ 17,81,841 ಸೋಂಕಿನಿಂದ ಚೇತರಿಸಿಕೊಂಡಿದ್ದರೆ, 48,648 ಮಂದಿ ಸಾವನ್ನಪ್ಪಿದ್ದಾರೆ.
ಓದಿ ದೇಶಾದ್ಯಂತ 96 ಲಕ್ಷ ಸೋಂಕಿತರು ಕೊರೊನಾದಿಂದ ಗುಣಮುಖ...
ಕಳೆದ 24 ಗಂಟೆಗಳಲ್ಲಿ 24,337 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,00,55,560 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.