ETV Bharat / bharat

ವಲಸೆ ಕಾರ್ಮಿಕರು ಇರುವಲ್ಲಿ ಸಿಸಿಟಿವಿ ಅಳವಡಿಸಲು ಸೂಚನೆ

ವಲಸೆ ಕಾರ್ಮಿಕರು ಕೆಲಸ ಮಾಡುವ ಜಾಗ ಮತ್ತು ರಾತ್ರಿ ಉಳಿದುಕೊಳ್ಳುವ ಜಾಗದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವಂತೆ ಭೂ ಮಾಲೀಕರಿಗೆ ಪೊಲೀಸರು ಆದೇಶಿಸಿದ್ದಾರೆ.

non-local-workers
ವಲಸೆ ಕಾರ್ಮಿಕರಿರುವಲ್ಲಿ ಸಿಸಿಟಿವಿ ಅಳವಡಿಸಿಲು ಸೂಚನೆ
author img

By

Published : Nov 26, 2022, 10:58 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಲಸೆ ಕಾರ್ಮಿಕರ ಮೇಲೆ ಉಗ್ರಗಾಮಿಗಳು ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಲಸಗಾರರು ಅಪಾಯಕಾರಿ ಜಾಗದಲ್ಲಿ ಓಡಾಡ ಬಾರದು. ಹಾಗೇ ವಲಸೆ ಕಾರ್ಮಿಕರು ಇರುವ ಬಾಡಿಗೆ ಮನೆ ಮತ್ತು ಕೆಲಸ ಮಾಡುವ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೂಚಿಸಿದ್ದಾರೆ.

ವಲಸೆ ಕಾರ್ಮಿಕರಿಗೆ ಶ್ರಿನಗರ ಸುರಕ್ಷಿತವಲ್ಲ ಹೀಗಾಗಿ ಸ್ಥಳೀಯರಲ್ಲದವರನ್ನು ಊರು ತೊರೆಯುವಂತೆ ಆದೇಶಿಸಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದ್ದ ಕಾರಣ ಪೊಲೀಸರು ಈ ವಿಚಾರ ಅಲ್ಲಗಳಿದು ಅದು ಸುಳ್ಳು ಮಾಹಿತಿ ಎಂದು ಸ್ಪಷ್ಟ ಪಡಿಸಿದ್ದಾರೆ.

  • This is incorrect, outside labourers are only advised not to roam in night in vulnerable localities & landlords have been advised to install CCTVs, where they work/stay. These are routine measures for security. In any case seasonal labourers every year move with onset of winter. https://t.co/KPyKT6uSUD

    — Srinagar Police (@SrinagarPolice) November 25, 2022 " class="align-text-top noRightClick twitterSection" data=" ">

ಅಲ್ಲದೇ 'ಹೊರಗಿನ ಕಾರ್ಮಿಕರಿಗೆ ಅಪಾಯಕಾರಿ ಪ್ರದೇಶಗಳಲ್ಲಿ ರಾತ್ರಿಯಲ್ಲಿ ತಿರುಗಾಡದಂತೆ ಮಾತ್ರ ಸೂಚಿಸಲಾಗಿದೆ ಮತ್ತು ಭೂಮಾಲೀಕರಿಗೆ ಅವರು ಕೆಲಸ ಮಾಡುವ ಮತ್ತು ಉಳಿಯುವ ಸ್ಥಳದಲ್ಲಿ ಸಿಸಿಟಿವಿಗಳನ್ನು ಅಳವಡಿಸಲು ಸೂಚಿಸಲಾಗಿದೆ' ಎಂದು ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಶ್ರೀನಗರದ ಹೊರತಾಗಿ, ದಕ್ಷಿಣ ಕಾಶ್ಮೀರದ ಅನಂತನಾಗ್, ಶೋಪಿಯಾನ್, ಪುಲ್ವಾಮಾ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ಈ ವಲಸೆ ಕಾರ್ಮಿಕರ ಮೇಲೆ ಹಲವಾರು ದಾಳಿಗಳು ನಡೆದಿವೆ. ಈ ವರ್ಷ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಎಂಟು ಮಂದಿ ಸ್ಥಳೀಯರಲ್ಲದವರು ಸಾವನ್ನಪ್ಪಿದ್ದಾರೆ.

ಸಿಸಿಟಿವಿ ಅಳವಡಿಸುವ ಆದೇಶವನ್ನು ಪಾಲಿಸದಿದ್ದಲ್ಲಿ ಶಿಕ್ಷಾರ್ಹ ಕ್ರಮ ಕೈಗೊಳ್ಳುವುದಾಗಿ ಶ್ರೀನಗರ ಪೊಲೀಸರು ಇದೇ ವೇಳೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ: ಶಂಕಿತ ಡ್ರೋನ್‌ನ್ನು ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.