ETV Bharat / bharat

ಬಂಗಾಳದ ಒಳಿತಿಗಾಗಿ ಪ್ರಧಾನಿ ಮೋದಿ ಕಾಲು ಹಿಡಿಯಲೂ ನಾನು ಸಿದ್ಧ: ಮಮತಾ ಬ್ಯಾನರ್ಜಿ

author img

By

Published : May 29, 2021, 5:03 PM IST

ಕೇಂದ್ರ ಮತ್ತು ಮೋದಿಯವರ ಮೇಲಿನ ತಮ್ಮ ವಾಗ್ದಾಳಿಯನ್ನು ತೀಕ್ಷ್ಣಗೊಳಿಸುತ್ತಾ, ಬಂಗಾಳದ ಜನರ ಕಲ್ಯಾಣಕ್ಕಾಗಿ ಪ್ರಧಾನಿ ನನ್ನನ್ನು ತಮ್ಮ ಪಾದಗಳನ್ನು ಮುಟ್ಟುವಂತೆ ಕೇಳಿದರೆ, ನಾನು ಅದನ್ನೂ ಮಾಡಲು ಸಿದ್ಧನಿದ್ದೇನೆ. ಆದರೆ ನನ್ನನ್ನು ಅವಮಾನಿಸಬಾರದು ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದರು.

Mamata
Mamata

ಕೋಲ್ಕತ್ತಾ: ಯಾಸ್ ಚಂಡಮಾರುತದಿಂದ ಸಂಭವಿಸಿದ ಹಾನಿ ಪರಿಶೀಲನೆ ಸಭೆಯು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಸಭೆ ನಡೆದು ಒಂದು ದಿನದ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, 'ಪ್ರಧಾನಿಯವರು ನನ್ನನ್ನು ಅವಮಾನಿಸಿದ್ದಾರೆ ಮತ್ತು ಟ್ವೀಟ್ ಪೋಸ್ಟ್ ಮಾಡುವ ಮೂಲಕ ನನ್ನ ಇಮೇಜ್​ಗೆ ಕಳಂಕ ತಂದಿದ್ದಾರೆ' ಎಂದು ಆರೋಪಿಸಿದ್ದಾರೆ.

ನನ್ನನ್ನು ಈ ರೀತಿ ಅವಮಾನಿಸಬೇಡಿ. ನಮಗೆ ಭರ್ಜರಿ ಗೆಲುವು ಸಿಕ್ಕಿದೆ, ಅದಕ್ಕಾಗಿಯೇ ನೀವು ಈ ರೀತಿ ವರ್ತಿಸುತ್ತಿದ್ದೀರಿ? ನೀವು ಎಲ್ಲವನ್ನೂ ಪ್ರಯತ್ನಿಸಿ ಸೋತಿದ್ದೀರಿ. ನಿತ್ಯ ನಮ್ಮೊಂದಿಗೆ ಯಾಕೆ ಜಗಳವಾಡುತ್ತಿದ್ದೀರಿ ಎಂದು ದೀದಿ ಪ್ರಶ್ನಿಸಿದ್ದಾರೆ.

ತಾನು 'ಅವಮಾನಕ್ಕೊಳಗಾಗಿದ್ದೇನೆ' ಎಂದು ಹೇಳುವ ಬ್ಯಾನರ್ಜಿ, ಪ್ರಧಾನಿ ಮತ್ತು ಸಿಎಂ ನಡುವೆ ನಡೆಯಬೇಕಿದ್ದ ಪರಿಶೀಲನಾ ಸಭೆಗೆ ಬಿಜೆಪಿ ನಾಯಕರು ಮತ್ತು ರಾಜ್ಯಪಾಲರನ್ನು ಏಕೆ ಕರೆಸಲಾಯಿತು ಎಂದು ಪ್ರಶ್ನಿಸಿದರು.

ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೇವಲ ಮೂರು ವಾರಗಳಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮುಖಾಮುಖಿ ಜಗಳ ತಾರಕಕ್ಕೇರಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಪ್ರಧಾನಿ ಮೋದಿ ಅವರು ಕರೆದ ಯಾಸ್ ಚಂಡಮಾರುತದ ಬಗ್ಗೆ ಪರಿಶೀಲನಾ ಸಭೆ ಕೈಬಿಟ್ಟಿದ್ದಾರೆ.

ಕೇಂದ್ರ ಮತ್ತು ಮೋದಿಯವರ ಮೇಲಿನ ತನ್ನ ದಾಳಿಯನ್ನು ತೀಕ್ಷ್ಣಗೊಳಿಸುತ್ತಾ, ಬಂಗಾಳದ ಜನರ ಕಲ್ಯಾಣಕ್ಕಾಗಿ ಪ್ರಧಾನಿ ನನ್ನನ್ನು ತಮ್ಮ ಪಾದಗಳನ್ನು ಮುಟ್ಟುವಂತೆ ಕೇಳಿದರೆ, ನಾನು ಅದನ್ನೂ ಮಾಡಲು ಸಿದ್ಧನಿದ್ದೇನೆ. ಆದರೆ ನನ್ನನ್ನು ಅವಮಾನಿಸಬಾರದು ಎಂದು ಗುಡುಗಿದರು.

ಶುಕ್ರವಾರದ ಘಟನೆಗಳನ್ನು ವಿವರಿಸಿದ ಮಮತಾ, “ನಾವು ತಲುಪಿದಾಗ ಸಭೆ ಪ್ರಾರಂಭವಾಯಿತು. ಅವರು ನಮ್ಮನ್ನು ಕುಳಿತುಕೊಳ್ಳಲು ಕೇಳಿದರು. ವರದಿಯನ್ನು ಸಲ್ಲಿಸಲು ನಮಗೆ ಒಂದು ನಿಮಿಷ ಅವಕಾಶ ನೀಡುವಂತೆ ನಾನು ಅವರನ್ನು ಕೇಳಿದೆ. ಆದರೆ, ಸಭೆ ಒಂದು ಗಂಟೆಯ ನಂತರ ನಡೆಯಲಿದೆ ಎಂದು ಎಸ್‌ಪಿಜಿ ತಿಳಿಸಿದರು. ನಾನು ಕಾನ್ಫರೆನ್ಸ್ ಕೊಠಡಿಯಲ್ಲಿ ಖಾಲಿ ಕುರ್ಚಿಗಳನ್ನು ನೋಡಿದೆ. ಸಭೆ ಸಿಎಂ ಮತ್ತು ಪಿಎಂ ನಡುವೆ ಎಂದು ನನಗೆ ತಿಳಿಸಲಾಯಿತು. ಆದರೆ, ಇತರ ಬಿಜೆಪಿ ನಾಯಕರು ಏಕೆ ಇದ್ದರು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.