ಇಂದೋರ್ (ಮಧ್ಯಪ್ರದೇಶ): ಇಂದೋರ್ನಲ್ಲಿ ಡೊಮಿನೋಸ್ ಪಿಜ್ಜಾ ಮಹಿಳಾ ಉದ್ಯೋಗಿ ಮೇಲೆ 4 ಯುವತಿಯರ ಗುಂಪೊಂದು ಅಮಾನುಷವಾಗಿ ಹಲ್ಲೆ ಮಾಡಿದೆ. ವಿಚಿತ್ರ ಅಂದರೆ, ಹಲ್ಲೆ ಮಾಡಿದ ಯುವತಿಯರೇ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕ್ರೌರ್ಯ ಮೆರೆದಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ನಾಲ್ವರು ಯುವತಿಯರು ಮಹಿಳಾ ಉದ್ಯೋಗಿಯನ್ನು ಕೆಟ್ಟ ಪದಗಳಿಂದ ನಿಂದಿಸುತ್ತಾ ಹಲ್ಲೆ ನಡೆಸುತ್ತಿದ್ದಾರೆ. ಕೋಲಿನಿಂದ ಹೊಡೆದು, ಕಾಲಿನಿಂದ ಒದ್ದಿದ್ದಾರೆ. ರಸ್ತೆಯ ಮೇಲೆ ಬಿದ್ದು ಒದ್ದಾಡುತ್ತಿದ್ದರೂ ಬಿಡದ ಯುವತಿಯರು ಹೀನಾಯವಾಗಿ ಥಳಿಸಿದರು.
-
Came across this @dominos @dominos_india
— Deepika Narayan Bhardwaj (@DeepikaBhardwaj) June 13, 2022 " class="align-text-top noRightClick twitterSection" data="
I hope you're providing legal assistance to this girl who's been assaulted on duty. Hope you help her in filing an assault case against these hooligans.
Take action @MPPoliceOnline pic.twitter.com/kVE9O7Sce3
">Came across this @dominos @dominos_india
— Deepika Narayan Bhardwaj (@DeepikaBhardwaj) June 13, 2022
I hope you're providing legal assistance to this girl who's been assaulted on duty. Hope you help her in filing an assault case against these hooligans.
Take action @MPPoliceOnline pic.twitter.com/kVE9O7Sce3Came across this @dominos @dominos_india
— Deepika Narayan Bhardwaj (@DeepikaBhardwaj) June 13, 2022
I hope you're providing legal assistance to this girl who's been assaulted on duty. Hope you help her in filing an assault case against these hooligans.
Take action @MPPoliceOnline pic.twitter.com/kVE9O7Sce3
ಹಲ್ಲೆಯಿಂದ ತಪ್ಪಿಸಿಕೊಳ್ಳಲು ಮಹಿಳಾ ಉದ್ಯೋಗಿ ಪ್ರಯತ್ನಿಸಿದರೂ ಬಿಡದ ಗ್ಯಾಂಗ್ ಆಕೆಯನ್ನು ಕೂದಲು ಹಿಡಿದು ಎಳೆದಾಡಿದರು. ಈ ಸಂದರ್ಭದಲ್ಲಿ ಆಕೆ ನೋವಿನಿಂದ ಕಿರುಚಾಡಿದ್ದಾಳೆ. ಸುತ್ತಲೂ ಜನರು ನೆರೆದಿದ್ದರೂ, ಯಾರೊಬ್ಬರು ಆಕೆಯ ಸಹಾಯಕ್ಕೆ ಧಾವಿಸಲೇ ಇಲ್ಲ. ಬಳಿಕ ಆಕೆ ಹಲ್ಲೆಯಿಂದ ನೋವು ತಾಳದೇ ಇನ್ನೊಂದು ಮನೆಯ ಒಳಗೆ ಓಡಿದ್ದಾಳೆ. ಬಳಿಕ ತಾನು ಪೊಲೀಸರಿಗೆ ದೂರು ನೀಡುವೆ ಎಂದು ಆಕೆ ನೋವಿನಲ್ಲಿ ಹೇಳುತ್ತಿದ್ದರೆ, ಹಲ್ಲೆ ನಡೆಸಿದವರಲ್ಲಿ ಒಬ್ಬಳು ಆಯ್ತು ಕರೆ ಮಾಡು ನೋಡೋಣ' ಎಂದು ಬೆದರಿಸಿದ್ದಾಳೆ.
ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿರುವ ವಿಡಿಯೋ ಕಂಡ ನೆಟಿಜನ್ಸ್ ಹಲ್ಲೆ ನಡೆಸಿದ ಯುವತಿಯ ವಿರುದ್ಧ ಕಿಡಿಕಾರಿದ್ದಾರೆ. ಮಹಿಳಾ ಉದ್ಯೋಗಿಯನ್ನು ಥಳಿಸಿದ ಕಾರಣ ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ: ಹುಬ್ಬಳ್ಳಿ ಮಗು ಕಳ್ಳತನ ಪ್ರಕರಣಕ್ಕೆ ರೋಚಕ ಟ್ವಿಸ್ಟ್; ಕರುಳು ಬಳ್ಳಿಯನ್ನ ಕಿಟಿಕಿಯಿಂದ ಎಸೆದದ್ದು ಹೆತ್ತಮ್ಮನೇ ಅಂತೆ!