ಪೂರ್ವ ಚಂಪಾರಣ್( ಬಿಹಾರ): ಜಿಲ್ಲಾ ಕೇಂದ್ರವಾದ ಮೋತಿಹಾರಿ ನಗರದ ಪಕ್ಕದಲ್ಲಿರುವ ಮಜುರಹಾನ್ ಗ್ರಾಮದಲ್ಲಿ ವಿಶಿಷ್ಟ ವಿವಾಹವೊಂದು ನಡೆದಿದೆ. ಗ್ರಾಮದಲ್ಲಿ ಶ್ವಾನ ಜೋಡಿಗೆ ಮದುವೆ ಮಾಡಿಸಲಾಗಿದೆ . ಈ ಮದುವೆ ಸಂಪೂರ್ಣ ಹಿಂದೂ ಸಂಪ್ರದಾಯದಂತೆ ನಡೆದಿರುವುದು ವಿಶೇಷ.
ಶ್ವಾನ ಜೋಡಿಗೆ ಮದುವೆ: ಮದುವೆಯಾದ ನಾಯಿಯ ಹೆಸರು ಕೊಲ್ಹು ಮತ್ತು ಹೆಣ್ಣು ನಾಯಿಯ ಹೆಸರು ವಸಂತಿ. ಕೊಲ್ಹು ಮತ್ತು ವಸಂತಿ ಮಾಲೀಕರಾದ ನರೇಶ್ ಸಾಹ್ನಿ ಮತ್ತು ಪ್ರೇಯಸಿ ಸವಿತಾ ದೇವಿ ಅವರು ಕುಲದೇವತೆಗೆ ಪೂಜೆ ಸಲ್ಲಿಸಿದ ನಂತರ ಸಾಂಪ್ರದಾಯಿಕ ಮಾಂಗ್ಲಿಕ್ ಹಾಡುಗಳೊಂದಿಗೆ ಅರಿಶಿಣ ಸಮಾರಂಭ ನಡೆಯಿತು. ಈ ವೇಳೆ, ಗ್ರಾಮದ ಮಹಿಳೆಯರು ಕುಣಿದು ಕುಪ್ಪಳಿಸಿ ದೇವರಿಗೆ ಪೂಜೆ ಸಲ್ಲಿಸಿದರು.
ಹಿಂದೂ ಸಂಪ್ರದಾಯದಂತೆ ಮದುವೆ: ಗ್ರಾಮದಲ್ಲಿ ಶ್ವಾನ ಜೋಡಿಯ ಮದುವೆ ಸಂಭ್ರಮದಿಂದ ನಡೆಯಿತು. ಈ ಮದುವೆಗೆ ಡಿಜೆ ಸಹ ಏರ್ಪಡಿಸಲಾಗಿದ್ದು, ಜನರು ಡಿಜೆ ಸೌಂಡ್ಗೆ ಕುಣಿದು ಕುಪ್ಪಳಿಸುತ್ತಾ ನಗರದಲ್ಲಿ ಮೆರವಣಿಗೆ ನಡೆಯಿತು. ಬಳಿಕ ಸಂಪೂರ್ಣ ವಿಧಿ ವಿಧಾನಗಳ ಪ್ರಕಾರ ಹಿಂದೂ ಸಂಪ್ರದಾಯದಂತೆ ಪಂಡಿತರು ಸಿಂಧೂರವನ್ನು ದಾನ ಮಾಡುವ ಮೂಲಕ ಶ್ವಾನ ಜೋಡಿಗೆ ಮದುವೆ ಮಾಡಿಸಿದರು.
ಓದಿ: ಹುಲಿಗಳ ಹಿಂಡಿನ ಮಧ್ಯೆ ಶ್ವಾನದ ರಾಜಾರೋಷ ಹೇಗಿದೆ ನೋಡಿ!
ಭರ್ಜರಿ ಭೋಜನ: ಮದುವೆಗೆ ಬಂದ ಜನರ ಭೋಜನ ಕೂಟಕ್ಕೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲು ಅಡುಗೆಯವರನ್ನೂ ನೇಮಕ ಮಾಡಲಾಗಿತ್ತು. ಈ ವಿಶಿಷ್ಟ ಮದುವೆಯ ಬಳಿಕ ರುಚಿಕರ ಖಾದ್ಯಗಳನ್ನು ಸವಿದ ಜನರು ಶ್ವಾನ ಜೋಡಿಗೆ ಆಶೀರ್ವದಿಸಿದರು. ಗ್ರಾಮದ ಸುಮಾರು ನಾನೂರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡು ಈ ವಿಶಿಷ್ಟ ವಿವಾಹಕ್ಕೆ ಸಾಕ್ಷಿಯಾದರು.
ಹರಕೆ ತೀರಿಸಿದ ದಂಪತಿ: ನರೇಶ್ ಸಾಹ್ನಿ ಮತ್ತು ಅವರ ಪತ್ನಿ ಸವಿತಾ ದೇವಿ ಮಜುರಹಾನ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇವರು ಎರಡು ಶ್ವಾನಗಳನ್ನು ಸಾಕುತ್ತಿದ್ದಾರೆ. ಗಂಡು ನಾಯಿಗೆ ಕೊಲ್ಹು ಮತ್ತು ಹೆಣ್ಣು ನಾಯಿಗೆ ವಸಂತಿ ಎಂದು ಹೆಸರಿಟ್ಟಿದ್ದಾರೆ. ಸವಿತಾ ದೇವಿ ತಮ್ಮ ಮಕ್ಕಳಿಗಾಗಿ ಹರಿಕೆ ಹೊತ್ತಿದ್ದರು. ಆ ಹರಕೆ ಪೂರ್ಣಗೊಂಡಿದೆ. ಅದಕ್ಕಾಗಿಯೇ ಅವರ ಕುಟುಂಬದವರು ಕೊಲ್ಹು ಮತ್ತು ವಸಂತಿಯ ವಿವಾಹವನ್ನು ಮಾಡಿದ್ದಾರೆ.
ಎಲ್ಲೆಲ್ಲೂ ಮದುವೆ ಚರ್ಚೆ: ಗ್ರಾಮಸ್ಥರು ಹೇಳುವ ಪ್ರಕಾರ ಇಲ್ಲಿಯವರೆಗೂ ಇಂತಹ ಮದುವೆ ಕಂಡಿಲ್ಲ. ಈ ಮದುವೆಯನ್ನು ಪಂಡಿತರು ಸಂಪೂರ್ಣ ಹಿಂದೂ ಸಂಪ್ರದಾಯದಂತೆ ಮಂತ್ರಪಠಣ ಬೋಧಿಸುವ ಮೂಲಕ ಮದುವೆಯನ್ನು ಮಾಡಿದ್ದಾರೆ ಎಂಬುದು ಗ್ರಾಮಸ್ಥರ ಮಾತಾಗಿದೆ.