ETV Bharat / bharat

ನಾಯಿ ಮರಿಗೆ ನಾಮಕರಣ.. ತೊಟ್ಟಿಲು ತೂಗಿ ಜೋಗುಳ ಹಾಡಿದ ಮಹಿಳೆಯರು - ಈಟಿವಿ ಭಾರತ ಕನ್ನಡ

ಮಹಾರಾಷ್ಟ್ರದ ಬ್ರಹ್ಮಪುರಿ ತಾಲೂಕಿನ ಕಿಣ್ಹಿ ಗ್ರಾಮದಲ್ಲಿ ನಾಯಿ ಮರಿಗೆ ನಾಮಕರಣ ಮಾಡಲಾಗಿದ್ದು, ಇಡೀ ಗ್ರಾಮವೇ ಸಮಾರಂಭದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದೆ

dogs-puppy-naming-ceremony-celebrated-in-chandrapur
ನಾಯಿಮರಿಗೆ ನಾಮಕರಣ..ತೊಟ್ಟಿಲು ತೂಗಿ ಜೋಗುಳ ಹಾಡಿದ ಮಹಿಳೆಯರು
author img

By

Published : Nov 19, 2022, 11:00 PM IST

Updated : Nov 20, 2022, 7:25 PM IST

ಚಂದ್ರಾಪುರ ( ಮಹಾರಾಷ್ಟ್ರ): ಮನೆಯಲ್ಲಿ ಮಗು ಜನಿಸಿದಾಗ ನಾಮಕರಣವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಆದರೆ ನಾಯಿ ಮರಿಗಳ ನಾಮಕರಣವನ್ನು ಎಲ್ಲಿಯಾದರೂ ನೋಡಿದ್ದೀರಾ?.

ಇಲ್ಲಿನ ಬ್ರಹ್ಮಪುರಿ ತಾಲೂಕಿನ ಕಿಣ್ಹಿ ಗ್ರಾಮದಲ್ಲಿ ನಾಯಿ ಮರಿಗೆ ನಾಮಕರಣ ಮಾಡಲಾಗಿದ್ದು, ಇಡೀ ಗ್ರಾಮವೇ ಸಮಾರಂಭದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದೆ. ಈ ನಾಯಿಮರಿಗೆ ದತ್ತಾತ್ರೇಯ ಎಂದು ನಾಮಕರಣ ಮಾಡಲಾಗಿದ್ದು, ಈ ದತ್ತಾತ್ರೇಯನ ಸಂಪೂರ್ಣ ಜವಾಬ್ದಾರಿಯನ್ನು ಅನುಸೂಯಾ ಯಾದವ್ ಸಹಾರೆ ಎಂಬವರು ವಹಿಸಿಕೊಂಡಿದ್ದಾರೆ.

ನಾಯಿ ಮರಿಗೆ ನಾಮಕರಣ.. ತೊಟ್ಟಿಲು ತೂಗಿ ಜೋಗುಳ ಹಾಡಿದ ಮಹಿಳೆಯರು

ಮೂಕ ಪ್ರಾಣಿಗಳಿಗೆ ಮಾತನಾಡಲು ಬರುವುದಿಲ್ಲ ಆದರೆ ಪ್ರೀತಿಯ ಭಾಷೆ ಪ್ರಾಣಿಗಳಿಗೆ ತಿಳಿದಿದೆ. ಬ್ರಹ್ಮಪುರಿ ತಾಲೂಕಿನ ಕಿನ್ಹಿ ಗ್ರಾಮದಲ್ಲಿ ಕಳೆದ ಐದಾರು ವರ್ಷಗಳಿಂದ ಒಂದು ನಾಯಿ ವಾಸಿಸುತ್ತಿತ್ತು. ಈ ನಾಯಿಗೆ ಗ್ರಾಮದವರು ಆಹಾರವನ್ನು ನೀಡುತ್ತಿದ್ದರಿಂದ, ನಾಯಿಯು ಗ್ರಾಮದಲ್ಲೇ ಉಳಿದಿತ್ತು. ಕಳೆದ ಕೆಲ ದಿನಗಳ ಹಿಂದೆ ಈ ನಾಯಿಯು ಹತ್ತು ಮರಿಗಳಿಗೆ ಜನ್ಮ ನೀಡಿತ್ತು. ನಾಯಿಯು ಗ್ರಾಮದ ಜನರ ಪ್ರೀತಿಗೆ ಪಾತ್ರವಾಗಿದ್ದರಿಂದ ಗ್ರಾಮದ ರವೀಂದ್ರ ಪ್ರಧಾನ್‌ ಎಂಬುವರಿಗೆ ಒಂದು ಮರಿಗೆ ನಾಮಕರಣ ಮಾಡುವ ಆಲೋಚನೆ ಹೊಳೆದಿದೆ.

ಆದ್ದರಿಂದ ಇವರು ಇಲ್ಲಿನ ಹನುಮಾನ್ ಮಂದಿರದ ಬಳಿ ನಾಯಿ ಮರಿಯ ನಾಮಕರಣ ಸಮಾರಂಭವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಜೋಗುಳ ಹಾಡಲು ಮಹಿಳೆಯರನ್ನೂ ಆಹ್ವಾನಿಸಲಾಗಿತ್ತು. ಬಳಿಕ ನಾಯಿಮರಿಯನ್ನು ತೊಟ್ಟಿಲಿಗೆ ಹಾಕಿ ಜೋಗುಳ ಹಾಡಲಾಯಿತು. ಈ ಅಪರೂಪದ ನಾಮಕರಣವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಇದನ್ನೂ ಓದಿ : ಮಾಲೀಕರಿಲ್ಲದ ಐದು ಮೇಕೆಗಳನ್ನ ಪತ್ತೆ ಮಾಡಿದ ಗಸ್ತು ಪೊಲೀಸರು

Last Updated : Nov 20, 2022, 7:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.