ETV Bharat / bharat

ಒಂದೇ ದಿನ 16 ಜನರ ಮೇಲೆ ಬೀದಿ ನಾಯಿ ದಾಳಿ: ಭಯ ಭೀತರಾಗಿರುವ ಜನರು - ETV Bharath Kannada news

ಒಂದೇ ದಿನ 16 ಜನರ ಮೇಲೆ ಬೀದಿ ನಾಯಿ ದಾಳಿ - ರಂಗಾರೆಡ್ಡಿ ಜಿಲ್ಲೆಯಲ್ಲಿ 10 ಜನರ ಮೇಲೆ ಒಂದೇ ನಾಯಿ ದಾಳಿ - ಯಾದಾದ್ರಿಯಲ್ಲಿ ಮಹಿಳೆ ಮೇಲೆ 10 ನಾಯಿ ದಾಳಿ - ಹೈದರಾಬಾದ್​ನಲ್ಲಿ 5.5 ಲಕ್ಷ ಬೀದಿ ನಾಯಿಗಳಿರುವ ವರದಿ

Dogs attack
ಬೀದಿ ನಾಯಿ
author img

By

Published : Feb 24, 2023, 1:34 PM IST

ಹೈದರಾಬಾದ್ (ತೆಲಂಗಾಣ): ಬುಧವಾರ ಹೈದರಾಬಾದ್​ನ ಅಂಬರ್​ಪೇಟ್​ ಎಂಬಲ್ಲಿ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿಮಾಡಿ ಕೊಂದು ಹಾಕಿದ ಘಟನೆ ವರದಿ ಆದ ಬೆನ್ನಲ್ಲೇ ಒಂದೇ ದಿನ 16 ಜನರ ಮೇಲೆ ದಾಳಿ ಆಗಿರುವುದು ತಿಳಿದು ಬಂದಿದೆ. ಈ ನಡುವೆ ಹೈದರಾಬಾದ್​​ನಲ್ಲಿ 5.5 ಲಕ್ಷ ಬೀದಿ ನಾಯಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಬರ್​ಪೇಟ್​ನ ಘಟನೆ ಮಾಸುವ ಮೊದಲೇ ಚೈತನ್ಯಪುರಿಯಲ್ಲಿ ನಾಲ್ಕು ವರ್ಷದ ಮತ್ತೊಬ್ಬ ಬಾಲಕನ ಮೇಲೆ ನಾಯಿಗಳು ದಾಳಿ ನಡೆಸಿವೆ. ಪೋಷಕರು ಎಚ್ಚರಿಕೆಯಿಂದ ಮಗು ಬದುಕುಳಿದಿದೆ. ಇತ್ತೀಚೆಗೆ ರಂಗಾರೆಡ್ಡಿ ಜಿಲ್ಲೆಯಲ್ಲಿ 14 ಮಂದಿ, ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ಒಬ್ಬರು, ಖಮ್ಮಂ ಜಿಲ್ಲೆಯಲ್ಲಿ ಬಾಲಕನೊಬ್ಬನ ಮೇಲೆ ನಾಯಿಗಳು ದಾಳಿ ನಡೆಸಿದ್ದವು. ರಂಗಾರೆಡ್ಡಿ ಜಿಲ್ಲೆಯ ಯಾಚರಂ ಗ್ರಾಮದಲ್ಲಿ ಗುರುವಾರ ಹುಚ್ಚು ನಾಯಿಯೊಂದು ಅಟ್ಟಹಾಸ ಮೆರೆದಿದ್ದು. ಇದು ಗ್ರಾಮದ 10 ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಯಾಚಾರಂನ ಗೃಹಿಣಿ ರೇಣುಕಾ(32), ಗಡಲ ನಂದೀಶ್ವರ(28), ರಾಮುಲಮ್ಮ(60), ಕೊಮುರಯ್ಯ(65), ಮಲ್ಕೀಜಗೂಡಿನ ವೆಂಕಟಮ್ಮ(60), ಬೋಡ ವೆಂಕಟಮ್ಮ(55), ನಂದಿವನಪರ್ತಿಯ ಸುಧಾಕರ್(50), ಮೊಂಡಿಗೂರೆಳ್ಳಿಯ ಶ್ಯಾಮಸುಂದರ್(26), ಬೋಡುಪ್ಪಲಿನ ಮಹೇಶ್ (36) ಮತ್ತು ಇಬ್ರಾಹಿಂಪಟ್ಟಣದ ಸಾಯಮ್ಮ (55) ಗಾಯಗೊಂಡವರು. ಬೀದಿಯಲ್ಲಿ ಸಿಕ್ಕವರನ್ನೆಲ್ಲಾ ಕಚ್ಚುತ್ತಾ ಸಾಗಿದ ನಾಯಿ ಸುಮಾರು ಒಂದು ಗಂಟೆಯಲ್ಲಿ ಹತ್ತು ಜನರನ್ನು ಕಚ್ಚಿ ಗಾಯಗೊಳಿಸಿದೆ.

10 ಜನರಿಗೆ ಕಚ್ಚಿದ ಶ್ವಾನವನ್ನು ಹುಚ್ಚು ನಾಯಿ ಎಂದು ಗುರುತಿಸಿದ ಕೆಲ ಯುವಕರು ಹೊಡೆದು ಸಾಯಿಸಿದ್ದಾರೆ. ನಾಯಿ ಕಚ್ಚಿದ ನಾಲ್ವರಿಗೆ ಜ್ವರದ ಲಕ್ಷಣ ಕಂಡು ಬಂದಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಶ್ವಾನ ಕಚ್ಚಿದ ಕೂಡಲೇ 108 ಆಂಬ್ಯುಲೆನ್ಸ್​ಗೆ ಕರೆ ಮಾಡಿ ತಿಳಿಸಿದರೂ ಸುಮಾರು ಒಂದೂವರೆ ಗಂಟೆ ತಡವಾಗಿ ಬಂದಿದೆ ಎಂದು ಸಂತ್ರಸ್ತರು ದೂರಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ಕಂದುಕೂರು ಮಂಡಲ ವ್ಯಾಪ್ತಿಯ ಗ್ರಾಮದಲ್ಲಿ ಗುರುವಾರ ನಾಲ್ಕು ಜನರ ಮೇಲೆ ನಾಯಿಗಳು ದಾಳಿ ನಡೆಸಿವೆ.

ನಾಯಿ ಕಚ್ಚಿದ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಪೈಕಿ ಗುಡೂರಿನ ಒಂದೂವರೆ ವರ್ಷದ ಬಾಲಕ ಶ್ರೀಶಾಂತ್, ರಾಜು (38), ರಾಚುಲೂರಿನ ಚಂದ್ರಕಾಂತ್ ಸೇರಿ ಮತ್ತೊಬ್ಬ ವ್ಯಕ್ತಿ ಇರುವುದು ವೈದ್ಯರಿಂದ ತಿಳಿದು ಬಂದಿದೆ. ಯಾದಾದ್ರಿ ಭುವನಗಿರಿ ಜಿಲ್ಲೆಯ ಅಡ್ಡಗೂಡೂರು ಮಂಡಲದ ಕೋಟಮರ್ತಿ ಗ್ರಾಮದಲ್ಲಿಯೂ ಬೀದಿ ನಾಯಿಗಳು ಅವಾಂತರ ಸೃಷ್ಟಿಸಿವೆ. ಚಿತ್ತಲೂರಿ ಪೂಲಮ್ಮ ಎಂಬ ಮಹಿಳೆ ಮೇಲೆ ಹತ್ತು ನಾಯಿಗಳು ಏಕಕಾಲಕ್ಕೆ ದಾಳಿ ನಡೆಸಿವೆ. ಒಮ್ಮೆಗೆ ಹತ್ತು ನಾಯಿಯ ದಾಳಿಯಿಂದ ಮಹಿಳೆ ಕೆಳಗೆ ಬಿದ್ದಿದ್ದಾಳೆ ಕೂಡಲೇ ಸ್ಥಳೀಯರು ಎಚ್ಚೆತ್ತು ಕಾಪಾಡಿದ್ದಾರೆ. ನಂತರ ಹೈದರಾಬಾದ್​ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಖಮ್ಮಂ ಜಿಲ್ಲೆಯ ಬೋನಕಲ್ಲು ಮಂಡಲದ ರವಿನೂತಲ ಗ್ರಾಮದಲ್ಲಿಯೂ ನಾಯಿಗಳು ಬಾಲಕನ ಮೇಲೆ ದಾಳಿ ನಡೆಸಿವೆ. ಬುಧವಾರ ತಲ್ಲೂರಿ ನವ ಶ್ರೀಸಂದೇಶ ಎಂಬ ಏಳು ವರ್ಷದ ಬಾಲಕ ಶಾಲೆಗೆ ತೆರಳುತ್ತಿದ್ದ ವೇಳೆ ಎರಡು ಬೀದಿ ನಾಯಿಗಳು ದಾಳಿ ನಡೆಸಿವೆ. ಶ್ವಾನಗಳು ಬಾಲಕನ ಮುಖಕ್ಕೆ ಕಚ್ಚಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಹೈದ್ರಾಬಾದ್​ನಲ್ಲಿವೆ 5.5 ಲಕ್ಷ ಬೀದಿ ನಾಯಿಗಳು; ಅಧಿಕಾರಿಗಳ ಮಾಹಿತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.