ETV Bharat / bharat

ಆಸ್ಪತ್ರೆಯೊಳಗೆ ನುಗ್ಗಿ ರೋಗಿಯ ಗಾಯ ನೆಕ್ಕಿದ ನಾಯಿ! 6 ಆರೋಗ್ಯ ಸಿಬ್ಬಂದಿ ವಜಾ - street dog

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ತುರ್ತು ಘಟಕಾ ನಿಗಮಕ್ಕೆ ದಾಖಲಿಸಲಾಗಿತ್ತು. ಈ ನಡುವೆ ಅದರೊಳಗೆ ನುಗ್ಗಿದ ನಾಯಿಯೊಂದು ರೋಗಿಯ ರಕ್ತವನ್ನು ನೆಕ್ಕಿದೆ. ಈ ವೀಡಿಯೋ ವೈರಲ್ ಆಗಿದೆ.

street dog
ಬೀದಿ ನಾಯಿ
author img

By

Published : Nov 4, 2022, 12:11 PM IST

ಕುಶಿನಗರ (ಉತ್ತರಪ್ರದೇಶ): ಕುಶಿನಗರ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದೊಳಗೆ ಬೀದಿ ನಾಯಿಯೊಂದು ನುಗ್ಗಿದೆ. ಈ ಸಂದರ್ಭದಲ್ಲಿ ಅದು ಗಾಯಗೊಂಡ ವ್ಯಕ್ತಿಯ ರಕ್ತವನ್ನು ನೆಕ್ಕುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಆರು ಮಂದಿ ಆರೋಗ್ಯ ಕಾರ್ಯಕರ್ತರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಎಸ್.ರಾಜ್ ಲಿಂಗಂ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಘಟನೆಯನ್ನು ಪರಿಶೀಲಿಸಲು ಎಡಿಎಂ ಶ್ರೇಣಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ರಾಜ್ಯದ ಆರೋಗ್ಯ ಸಚಿವ, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಈ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿದ್ದಾರೆ.

ಜಿಲ್ಲಾ ವ್ಯಾಪ್ತಿಯಲ್ಲಿ ನವೆಂಬರ್ 1 ರಂದು ರಸ್ತೆ ಅಪಘಾತ ನಡೆದಿತ್ತು. 25 ವರ್ಷದ ಬಿಟ್ಟು ಎಂಬ ವ್ಯಕ್ತಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಯ ತುರ್ತು ಚಿಕಿತ್ಸಾ ನಿಗಮಕ್ಕೆ ದಾಖಲಿಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್, "ಘಟನೆಯು ಜಿಲ್ಲೆಯ ಪ್ರತಿಷ್ಠೆಗೆ ಕಳಂಕ ತಂದಿದೆ. ಆರು ಆರೋಗ್ಯ ಕಾರ್ಯಕರ್ತರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಕರ್ತವ್ಯದಲ್ಲಿದ್ದ ಸಿಬ್ಬಂದಿಯು ಇತರ ರೋಗಿಗಳೊಂದಿಗೆ ಮಾತನಾಡುತ್ತಿದ್ದರು. ಈ ಮಧ್ಯೆ ಗಾಯಗೊಂಡ ವ್ಯಕ್ತಿಯು ಹಾಸಿಗೆಯಿಂದ ಕೆಳಗೆ ಬಿದ್ದಿದ್ದಾನೆ. ಬೀದಿ ನಾಯಿಯೊಂದು ಆಸ್ಪತ್ರೆಯ ತುರ್ತು ಘಟಕದೊಳಗೆ ನುಸುಳಿದೆ. ಯಾರೋ ಈ ಘಟನೆಯನ್ನು ವೀಡಿಯೋ ಮಾಡಿದ್ದಾರೆ" ಎಂದು ತಿಳಿಸಿದರು.

ಇದನ್ನೂ ಓದಿ: ಒಡಿಶಾ: ಪ್ರೀತಿಯ ಸಾಕು ನಾಯಿಗೆ ಕಣ್ಣೀರಿನ ವಿದಾಯ ಹೇಳಿದ ಕುಟುಂಬ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.