ETV Bharat / bharat

ಅಮರನಾಥ ಯಾತ್ರೆಗೂ ಮುನ್ನ ಕಾಶ್ಮೀರದಲ್ಲಿ ದಾಳಿಗೆ ಸಂಚು.. ಶಸ್ತ್ರಾಸ್ತ್ರಗಳೊಂದಿಗೆ ಉಗ್ರ ಅಂದರ್​ - doda police arrested terrorist in jammu kashmir

ಜಮ್ಮು ಕಾಶ್ಮೀರದ, ದೋಡ ಜಿಲ್ಲೆಯ ಹೊರವಲಯದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲು ನಿಯೋಜನೆ ರೂಪಿಸಿಕೊಂಡಿದ್ದ ಭಯೋತ್ಪಾದಕನನ್ನು ದೋಡ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಮದ್ದುಗುಂಡು ಸೇರಿದಂತೆ ಪಿಸ್ತೂಲ್​ಅನ್ನು ವಶಪಡಿಸಿಕೊಂಡಿದ್ದಾರೆ.

terrorist farid
ಜಮ್ಮು ಕಾಶ್ಮೀರದ ದೋಡದಲ್ಲಿ ಶಸ್ತ್ರಾಸ್ತ್ರ ಹೊತ್ತಿದ್ದ ಭಯೋತ್ಪಾದಕನ ಬಂಧನ
author img

By

Published : Jun 27, 2022, 12:20 PM IST

ದೋಡಾ (ಜಮ್ಮು ಕಾಶ್ಮೀರ): ಶಸ್ತ್ರಾಸ್ತ್ರ ಹೊತ್ತಿದ್ದ ಫರೀದ್​ ಅಹ್ಮದ್​ ಎಂಬ ಭಯೋತ್ಪಾದಕನನ್ನು ಜಿಲ್ಲೆಯ ಹೊರವಲಯದಲ್ಲಿ ದೋಡಾ ಪೊಲೀಸರು ಭದ್ರತಾ ಪಡೆಗಳೊಂದಿಗೆ ಬಂಧಿಸಿದ್ದಾರೆ. ಆರೋಪಿ ಕೋಟಿ ದೋಡಾ ನಿವಾಸಿ ಗುಲಾಮ್ ಹಸನ್ ಅವರ ಪುತ್ರ ಎಂದು ತಿಳಿದುಬಂದಿದೆ. ಆರೋಪಿಯಿಂದ 1 ಚೈನೀಸ್ ಪಿಸ್ತೂಲ್, 02 ಮ್ಯಾಗಜೀನ್, 14 ಲೈವ್ ಕಾರ್ಟ್ರಿಡ್ಜ್​ಗಳು ಮತ್ತು ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.

ಅಮರನಾಥ ಯಾತ್ರೆಗೆ ಮುನ್ನ ಹೆಚ್ಚಿನ ಭದ್ರತಾ ಕ್ರಮವಾಗಿ, ಪಿಎಸ್ ದೋಡಾದ ಪೊಲೀಸ್ ಪಡೆ ದೋಡಾ ಟೌನ್‌ನ ಹೊರವಲಯದಲ್ಲಿ ತಪಾಸಣೆ ನಡೆಸಲು ವಾಸ್ತವ್ಯ ಹೂಡಿದ್ದರು. ಈ ವೇಳೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊತ್ತಿದ್ದ ಫರೀದ್​ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ವಿಶೇಷ ತಂಡವನ್ನು ರಚಿಸಿ ತನಿಖೆ ಪ್ರಾರಂಭಿಸಿದಾಗ ಫರೀದ್ ಅಹ್ಮದ್, ಇದೇ ವರ್ಷ ಮಾರ್ಚ್​ನಲ್ಲಿ ಒಬ್ಬ ಶಂಕಿತನಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಡೆದಿದ್ದು, ದೋಡಾದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಲು ಸಂಚು ರೂಪಿಸಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈ ಕುರಿತು ದೋಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಗಾಗಿ ವಿಚಾರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ:ಅಮೆರಿಕದಲ್ಲಿ ಭಾರತೀಯ ಮೂಲದ ಮತ್ತೊಬ್ಬ ಪ್ರಜೆ ಗುಂಡಿಕ್ಕಿ ಕೊಲೆ.. ವಾರದಲ್ಲೇ ಇದು ಎರಡನೇ ಪ್ರಕರಣ!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.