ETV Bharat / bharat

7 ತಿಂಗಳ ಗರ್ಭಿಣಿಗೆ ಶಸ್ತ್ರಚಿಕಿತ್ಸೆ: ಭ್ರೂಣ ಬೆಳೆದಿಲ್ಲವೆಂದು ಗೊತ್ತಾಗಿ ಮತ್ತೆ ಗರ್ಭದಲ್ಲಿಟ್ಟ ವೈದ್ಯ! - ಗರ್ಭದಲ್ಲಿ ಭ್ರೂಣ ಇರಿಸಿದ ವೈದ್ಯ

ಹೆರಿಗೆ ಮಾಡಿಸಲೆಂದು ಗರ್ಭಿಣಿಗೆ ಆಪರೇಷನ್​ ಮಾಡಿದಾಗ ಭ್ರೂಣ ಬೆಳೆದಿಲ್ಲ ಎಂದು ತಿಳಿದು ಆ ಮತ್ತೆ ಆಕೆಯ ಗರ್ಭದಲ್ಲೇ ಇರಿಸಿರುವ ಘಟನೆ ಅಸ್ಸೋಂನಲ್ಲಿ ಬೆಳಕಿಗೆ ಬಂದಿದೆ.

doctor-replanted-a-seven-month-old-baby-in-mothers-womb-after-a-surgery
ಏಳು ತಿಂಗಳ ಗರ್ಭಿಣಿಗೆ ಆಪರೇಷನ್​: ಭ್ರೂಣ ಬೆಳೆದಿಲ್ಲ ಎಂದು ಗೊತ್ತಾಗಿ ಮತ್ತೆ ಗರ್ಭದಲ್ಲಿಟ್ಟ ವೈದ್ಯ
author img

By

Published : Aug 31, 2022, 10:06 PM IST

ಕರೀಂಗಂಜ್ (ಅಸ್ಸೋಂ): ಅಸ್ಸೋಂನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗರ್ಭಿಣಿಗೆ ಶಸ್ತ್ರಚಿಕಿತ್ಸೆ ನಡೆಸಿದಾಗ ಆಕೆಯ ಹೊಟ್ಟೆಯಲ್ಲಿರುವ ಶಿಶುವಿಗೆ ಕೇವಲ 7 ತಿಂಗಳು ಎಂದು ಗೊತ್ತಾಗಿದೆ. ಹೀಗಾಗಿಯೇ ಮತ್ತೆ ಶಿಶುವನ್ನು ಆಕೆಯ ಗರ್ಭದಲ್ಲೇ ವೈದ್ಯರು ಇರಿಸಿದ್ದಾರೆ. ಈ ವಿಷಯ ತಿಳಿದ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಕರೀಂಗಂಜ್​ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ ಡಾ.ಆಶಿಶ್ ಕುಮಾರ್ ಬಿಸ್ವಾಸ್ ಹೊಟ್ಟೆ ನೋವು ಎಂದು ಬಂದ ಗರ್ಭಿಣಿಗೆ 12 ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆಸಿದ್ದರು. ಹೆರಿಗೆ ಮಾಡಿಸಲೆಂದೇ ಆಪರೇಷನ್​ ಮಾಡಿದ್ದರು. ಆದರೆ, ಆಗ ಶಿಶುವಿಗೆ ಇನ್ನೂ ಏಳೇ ತಿಂಗಳಾಗಿದ್ದು, ಭ್ರೂಣ ಬೆಳೆದಿಲ್ಲ ಎಂದು ತಿಳಿದು ಆ ಶಿಶುವನ್ನು ಮತ್ತೆ ಆಕೆಯ ಗರ್ಭದಲ್ಲೇ ಇರಿಸಿದ್ದಾರೆ.

ಅಲ್ಲಿಂದ ಗರ್ಭಿಣಿಯ ಆರೋಗ್ಯ ಹದಗೆಡಲು ಶುರುವಾಗಿದೆ. ಹೀಗಾಗಿ ಬುಧವಾರ ಮತ್ತೆ ಇದೇ ಆಸ್ಪತ್ರೆಗೆ ದಾಖಲಿಸಿದಾಗ ಈ ಹಿಂದೆ ನಡೆದ ಶಸ್ತ್ರಚಿಕಿತ್ಸೆ ಬೆಳಕಿಗೆ ಬಂದಿದೆ. ಆದ್ದರಿಂದ ಕುಟುಂಬಸ್ಥರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಗೆ ಸ್ಥಳೀಯರು ಸಾಥ್​ ನೀಡಿದ್ದು, ಆರೋಪಿ ವೈದ್ಯನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಗರ್ಭಕಂಠದ ಕ್ಯಾನ್ಸರ್: ಭಾರತದ ಮೊದಲ ಲಸಿಕೆ ನಾಳೆ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.