ಹೈದರಾಬಾದ್: ಭಾರತದಲ್ಲಿ ಕಳೆದೆರಡು ದಿನಗಳಿಂದ 15 ವರ್ಷ ಮೇಲ್ಪಟ್ಟ ಮಕ್ಕಳಿಗೂ ಕೊವ್ಯಾಕ್ಸಿನ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಂಡಿದೆ. ಈಗಾಗಲೇ ಒಂದು ಕೋಟಿಗೂ ಅಧಿಕ ಮಕ್ಕಳು ಲಸಿಕೆ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಈ ಔಷಧ ತಯಾರಕ ಭಾರತ್ ಬಯೋಟೆಕ್ ಮಹತ್ವದ ಪ್ರಕಟಣೆ ಹೊರಡಿಸಿದೆ.
-
#bharatbiotech #covaxin #covid #covid19vacccine #immunization #vaccination #childrensafety #clinicaltrials #vaccinatedandhappy pic.twitter.com/Pri0u0UlFe
— BharatBiotech (@BharatBiotech) January 5, 2022 " class="align-text-top noRightClick twitterSection" data="
">#bharatbiotech #covaxin #covid #covid19vacccine #immunization #vaccination #childrensafety #clinicaltrials #vaccinatedandhappy pic.twitter.com/Pri0u0UlFe
— BharatBiotech (@BharatBiotech) January 5, 2022#bharatbiotech #covaxin #covid #covid19vacccine #immunization #vaccination #childrensafety #clinicaltrials #vaccinatedandhappy pic.twitter.com/Pri0u0UlFe
— BharatBiotech (@BharatBiotech) January 5, 2022
ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳುತ್ತಿರುವ ಮಕ್ಕಳಿಗೆ ವೈದ್ಯರು ಸೂಚಿಸಿದರೆ ಮಾತ್ರ ಔಷಧೋಪಚಾರ ಮಾಡಿ. ಇಲ್ಲದೇ ಇದ್ದ ಪಕ್ಷದಲ್ಲಿ ನೋವು ನಿವಾರಕ(Painkillers) ಅಥವಾ ಪ್ಯಾರಸೆಟಮಲ್(Paracetamol) ಮಾತ್ರೆಗಳನ್ನು ನೀಡುವ ಅವಶ್ಯಕತೆ ಇಲ್ಲ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
ವ್ಯಾಕ್ಸಿನ್ ಪರೀಕ್ಷೆಯ ವಿವರ:
ಲಸಿಕೆ ಪಡೆದುಕೊಳ್ಳುತ್ತಿರುವ ಮಕ್ಕಳಿಗೆ 500mg ಪ್ಯಾರಸೆಟಮಲ್ ಹಾಗೂ ನೋವು ನಿವಾರಕ ಮಾತ್ರೆ ಶಿಫಾರಸು ಮಾಡಲಾಗುತ್ತಿದ್ದು, ಇದರ ಅಗತ್ಯವಿಲ್ಲ. ಭಾರತ್ ಬಯೋಟೆಕ್ನಿಂದ ಕ್ಲಿನಿಕಲ್ ಟ್ರಯಲ್ಸ್ ನಡೆಸಿದ್ದ ವೇಳೆ 30 ಸಾವಿರ ಮಕ್ಕಳ ಪೈಕಿ ಶೇ. 10ರಿಂದ 20ರಷ್ಟು ಮಕ್ಕಳ ಮೇಲೆ ಮಾತ್ರ ಅಡ್ಡಪರಿಣಾಮ ಕಾಣಿಸಿಕೊಂಡಿದ್ದವು, ಆದರೆ ಈ ಸಮಸ್ಯೆಯ ತೀವ್ರತೆ ತುಂಬಾ ಕಡಿಮೆಯಾಗಿದ್ದು, ಎರಡು- ಮೂರು ದಿನಗಳಲ್ಲಿ ಬಗೆಹರಿಯುತ್ತವೆ. ಇದಕ್ಕಾಗಿ ಯಾವುದೇ ಔಷಧಿಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಪಂಜಾಬ್‌ನಲ್ಲಿ ಪ್ರಧಾನಿಗೆ ಭದ್ರತಾ ಲೋಪ ಕಾಂಗ್ರೆಸ್‌ನ ಯೋಜಿತ ಪಿತೂರಿ: ಪ್ರಹ್ಲಾದ್ ಜೋಶಿ