ಚೆನ್ನೈ / ಪಾಟ್ನಾ : ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ವದಂತಿ ಸಂಬಂಧ ಡಿಎಂಕೆ ಸಂಸದ ಟಿಆರ್ ಬಾಲು ಅವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಪಾಟ್ನಾಗೆ ಆಗಮಿಸಿದ ಟಿಆರ್ ಬಾಲು ಇಂದು ಸಿಎಂ ನಿವಾಸದಲ್ಲಿ ನಿತೀಶ್ ಅವರನ್ನು ಭೇಟಿಯಾದರು. ಇದೇ ವೇಳೆ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪತ್ರವನ್ನೂ ಹಸ್ತಾಂತರಿಸಿದರು.
ಇದನ್ನೂ ಓದಿ: ಉತ್ತರ ಭಾರತೀಯ ವಲಸೆ ಕಾರ್ಮಿಕರು ಭಯಪಡಬೇಕಿಲ್ಲ: ತಮಿಳುನಾಡು ರಾಜ್ಯಪಾಲರ ಭರವಸೆ
ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ವದಂತಿ ಪ್ರಕರಣವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಧಾನಸೌಧದಲ್ಲೂ ಈ ವಿಷಯವನ್ನು ಪ್ರತಿಪಕ್ಷ ಬಿಜೆಪಿ ಪ್ರಸ್ತಾಪಿಸಿ ಗದ್ದಲ ಉಂಟು ಮಾಡಿತ್ತು. ಹೀಗಾಗಿಯೇ ವಸ್ತು ಸ್ಥಿತಿಯನ್ನು ಅರಿಯಲು ತಮಿಳುನಾಡು ಮತ್ತು ಬಿಹಾರ ಸರ್ಕಾರಗಳ ನಡುವೆ ಉನ್ನತ ಮಟ್ಟದ ಮಾತುಕತೆ ನಡೆಸುತ್ತಿದೆ. ಇದರ ಭಾಗವಾಗಿ ತಮಿಳುನಾಡಿನಿಂದ ಕೇಂದ್ರದ ಮಾಜಿ ಸಚಿವರಾದ ಟಿಆರ್ ಬಾಲು ಬಿಹಾರಕ್ಕೆ ಆಗಮಿಸಿ, ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಸುರಕ್ಷತೆಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆಯೂ ಸಿಎಂ ನಿತೀಶ್ಗೆ ಮಾಹಿತಿ ನೀಡಿದ್ದಾರೆ.
-
காவல்கிணறு பகுதியில் கையுறை தயாரிப்பு நிறுவனத்தில் பணிபுரியும் வடமாநிலத் தொழிலாளர்களுடன் உரையாடினேன்.
— M.K.Stalin (@mkstalin) March 7, 2023 " class="align-text-top noRightClick twitterSection" data="
அவர்களிடம் சகோதரவுணர்வும் தமிழ்நாட்டில் பணிபுரிகிறோம் என்ற பாதுகாப்புணர்வுமே மேலோங்கியுள்ளது.
இதுதான் தமிழ்நாடு!
உழைப்பவர்க்கு என்றும் உறுதுணையாக இருப்பதே நம் பண்பாடு! pic.twitter.com/JryQknuSJR
">காவல்கிணறு பகுதியில் கையுறை தயாரிப்பு நிறுவனத்தில் பணிபுரியும் வடமாநிலத் தொழிலாளர்களுடன் உரையாடினேன்.
— M.K.Stalin (@mkstalin) March 7, 2023
அவர்களிடம் சகோதரவுணர்வும் தமிழ்நாட்டில் பணிபுரிகிறோம் என்ற பாதுகாப்புணர்வுமே மேலோங்கியுள்ளது.
இதுதான் தமிழ்நாடு!
உழைப்பவர்க்கு என்றும் உறுதுணையாக இருப்பதே நம் பண்பாடு! pic.twitter.com/JryQknuSJRகாவல்கிணறு பகுதியில் கையுறை தயாரிப்பு நிறுவனத்தில் பணிபுரியும் வடமாநிலத் தொழிலாளர்களுடன் உரையாடினேன்.
— M.K.Stalin (@mkstalin) March 7, 2023
அவர்களிடம் சகோதரவுணர்வும் தமிழ்நாட்டில் பணிபுரிகிறோம் என்ற பாதுகாப்புணர்வுமே மேலோங்கியுள்ளது.
இதுதான் தமிழ்நாடு!
உழைப்பவர்க்கு என்றும் உறுதுணையாக இருப்பதே நம் பண்பாடு! pic.twitter.com/JryQknuSJR
ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತುಕತೆ: ಇದರೊಂದಿಗೆ ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆಯೂ ಮಾತುಕತೆ ನಡೆಸಲಾಗುತ್ತಿದೆ. ಈ ವಿಷಯವನ್ನೂ ಟಿಆರ್ ಬಾಲು, ನಿತೀಶ್ ಕುಮಾರ್ ಅವರೊಂದಿಗೆ ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜೊತೆಗೆ ನಿತೀಶ್ ಭೇಟಿಯಾದ ನಂತರ ಅವರು ಆರ್ಜೆಡಿ ವರಿಷ್ಠರ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಹಿರಿಯ ರಾಜಕಾರಣಿ ಲಾಲು ಪ್ರಸಾದ್ ಪತ್ನಿ, ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನೂ ಭೇಟಿಯಾಗಿ ಟಿಆರ್ ಬಾಲು ಚರ್ಚಿಸಿದ್ದಾರೆ. ಆದರೆ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ದೆಹಲಿಯಲ್ಲಿ ತಂಗಿರುವ ಕಾರಣ ಇವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ.
ಬಿಹಾರ ಕಾರ್ಮಿಕರ ಭೇಟಿಯಾದ ಸಿಎಂ ಸ್ಟಾಲಿನ್: ಮತ್ತೊಂದೆಡೆ, ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿರುವ ಬಿಹಾರದಿಂದ ಬಂದಿರುವ ವಲಸೆ ಕಾರ್ಮಿಕರನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಇಂದು ಖುದ್ದು ಭೇಟಿ ಮಾಡಿ ಮಾತುಕತೆ ನಡೆಸಿ, ರಕ್ಷಣೆಯ ಅಭಯ ನೀಡಿದರು. ಜೊತೆಗೆ ತಮಿಳುನಾಡಿನಲ್ಲಿರುವ ಅತಿಥಿ, ವಲಸೆ ಕಾರ್ಮಿಕರ ಸಮೀಕ್ಷೆ ನಡೆಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ. ಸದ್ಯದ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು ಆರು ಲಕ್ಷ ವಲಸೆ ಕಾರ್ಮಿಕರು ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆಯಾ ಜಿಲ್ಲಾಡಳಿತಗಳು ತಮ್ಮ ವ್ಯಾಪ್ತಿಯಲ್ಲಿರುವ ವಲಸೆ ಕಾರ್ಮಿಕರ ನಿಖರವಾದ ಮಾಹಿತಿ ಸಂಗ್ರಹಿಸಲು ಮತ್ತು ಕೆಲಸದ ಪರಿಸ್ಥಿತಿಗಳ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ವರದಿಯಾಗಿದೆ.
ತಮಿಳುನಾಡಿನಲ್ಲಿ ನಾಲ್ವರು ಸದಸ್ಯರ ತಂಡ ತನಿಖೆ: ಬಿಹಾರದ ಕಾರ್ಮಿಕರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ವದಂತಿ ವಿಷಯವಾಗಿ ತನಿಖೆ ಬಗ್ಗೆ ಬಿಹಾರದಿಂದ ಹಿರಿಯ ಅಧಿಕಾರಿಗಳ ತಂಡ ಈಗಾಗಲೇ ತಮಿಳುನಾಡಿಗೆ ಭೇಟಿ ನೀಡಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಾಲಮುರುಗನ್ ನೇತೃತ್ವದಲ್ಲಿ ನಾಲ್ವರ ತಂಡ ತಮಿಳುನಾಡಿಗೆ ತೆರಳಿ ಅಲ್ಲಿನ ಪರಿಸ್ಥಿತಿಯ ಅವಲೋಕನ ಮಾಡುತ್ತಿದೆ.
ಇದನ್ನೂ ಓದಿ: ಪ್ರಚೋದನಾಕಾರಿ ಟ್ವೀಟ್ ಆರೋಪದಡಿ ಅಣ್ಣಾಮಲೈ ವಿರುದ್ಧ ಕೇಸ್ : ತಾಕತ್ತಿದ್ದರೆ ಬಂಧಿಸಿ ಎಂದು ಸರ್ಕಾರಕ್ಕೆ ಸವಾಲ್
ಅಲ್ಲದೇ, ಚೆನ್ನೈನಲ್ಲಿರುವ ರಾಜ್ಯ ಸಚಿವಾಲಯದಲ್ಲಿ ತಮಿಳುನಾಡು ಮುಖ್ಯ ಕಾರ್ಯದರ್ಶಿ ಇರೈ ಅನ್ಬು ಅವರೊಂದಿಗೆ ಬಿಹಾರದ ಅಧಿಕಾರಿಗಳ ತಂಡವು ಸಭೆ ನಡೆಸಿದೆ. ಜೊತೆಗೆ ಬಿಹಾರದಿಂದ ವಲಸೆ ಕಾರ್ಮಿಕರೊಂದಿಗೆ ಬಿಹಾರದ ಸರ್ಕಾರಿ ಅಧಿಕಾರಿಗಳಾದ ಬಾಲಮುರುಗನ್ ಮತ್ತು ಸಂತೋಷ್ ಕುಮಾರ್ ಸಂವಾದ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಾಲಮುರುಗನ್, ಕಾರ್ಮಿಕರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ವದಂತಿಯು ವಲಸಿಗ ಕಾರ್ಮಿಕರಲ್ಲಿ ಸ್ವಲ್ಪ ಗಾಬರಿಯನ್ನು ಉಂಟುಮಾಡಿದೆ ಎಂದು ತಿಳಿಸಿದ್ದಾರೆ.
ಆದರೆ, ಈ ವದಂತಿ ಹರಡಿದ ಅಂದಿನಿಂದಲೂ ಕಾರ್ಮಿಕರಿಗೆ ನಿಖರ ಸಂದೇಶವನ್ನು ನೀಡಲಾಗುತ್ತಿದೆ. ತಮಿಳುನಾಡು ಪೊಲೀಸರು ಮತ್ತು ಇತರ ಮೂಲಗಳಿಂದ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂಬುವುದು ಸುಳ್ಳು ಸುದ್ದಿ ಅಂತಾ ಸ್ಪಷ್ಟವಾಗಿದೆ. ಇದೀಗ ಇಲ್ಲಿನ ಕಾರ್ಮಿಕರ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಬಿಹಾರದ ಅಧಿಕಾರಿ ಬಾಲಮುರುಗನ್ ಚೆನ್ನೈನಲ್ಲಿ ಹೇಳಿದ್ದಾರೆ. ಈ ಹಿಂದೆ ತಮಿಳುನಾಡು ಸಿಎಂ ಸ್ಟಾಲಿನ್ ಅವರು ಬಿಹಾರ ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ, ಬಿಹಾರದ ಜನತೆಗೆ ಸಂಪೂರ್ಣ ರಕ್ಷಣೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು.
ಇದನ್ನೂ ಓದಿ: ಸುಳ್ಳು ಸುದ್ದಿ ಹಬ್ಬಿಸಿದವರು ದೇಶ ವಿರೋಧಿಗಳು ಎಂದ ಸ್ಟಾಲಿನ್: ಪತ್ರಿಕೆ ಸಂಪಾದಕ ಸೇರಿ ಮೂವರ ವಿರುದ್ಧ ಕೇಸ್