ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ 159 ಸ್ಥಾನಗಳಲ್ಲಿ ಗೆಲುವು ದಾಖಲಸಿದ್ದು, 10 ವರ್ಷಗಳ ಬಳಿಕ ಸರ್ಕಾರ ರಚನೆ ಮಾಡುತ್ತಿದೆ.
ನಾಳೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಎಂ.ಕೆ ಸ್ಟಾಲಿನ್ ಪದಗ್ರಹಣ ಮಾಡಲಿದ್ದು, ಇವರ ಸಂಪುಟದಲ್ಲಿ 34 ಸಚಿವರು ಇರಲಿದ್ದಾರೆ.
ಇದನ್ನೂ ಓದಿ: ಕೋವಿಡ್ ಪರಿಹಾರ ಕಾರ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ ಬ್ಯುಸಿ
ಬುಧವಾರ ಪಕ್ಷದ ಹಿರಿಯ ನಾಯಕರೊಂದಿಗೆ ರಾಜಭವಕ್ಕೆ ತೆರಳಿ ಗವರ್ನರ್ ಬನ್ವರಿಲಾಲ್ ಪುರೋಹಿತ್ ಅವರನ್ನ ಭೇಟಿ ಮಾಡಿದ್ದ ಸ್ಟಾಲಿನ್, ಸರ್ಕಾರ ರಚನೆ ಮಾಡಲು ಹಕ್ಕು ಮಂಡನೆ ಮಾಡಿದ್ದರು.
ನಾಳೆ ಬೆಳಗ್ಗೆ 9 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ಜರುಗಲಿದೆ. ಇವರೊಂದಿಗೆ 34 ಶಾಸಕರು ಸಚಿವ ಸಂಪುಟ ಸೇರಲಿದ್ದು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸ್ಟಾಲಿನ್ ಸಂಪುಟದಲ್ಲಿ ಗಾಂಧಿ, ನೆಹರು!
ಹೊಸದಾಗಿ ಸರ್ಕಾರ ರಚನೆ ಮಾಡುತ್ತಿರುವ ಸ್ಟಾಲಿನ್ ಸಂಪುಟದಲ್ಲಿ ಹಿರಿಯ ನಾಯಕ ಕೆ.ಎನ್ ನೆಹರು ಹಾಗೂ ಹಾಗೂ ಆರ್. ಗಾಂಧಿ ಸಹ ಇದ್ದು, ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇವರ ಜೊತೆಗೆ ದೊರೈಮುರುಗನ್, ಎಂ ಸುಬ್ರಮಣಿಯನ್ ಕೂಡ ಸಂಪುಟ ಸೇರಿಕೊಳ್ಳಲಿದ್ದಾರೆ.
ಕೆ.ಎನ್ ನೆಹರು ನಗರ ಮತ್ತು ನೀರು ಸರಬರಾಜು ಹಾಗೂ ನಗರಸಭೆ ಆಡಳಿತ ಸಚಿವರಾಗಿ, ಆರ್. ಗಾಂಧಿ ಕೈಮಗ್ಗ ಮತ್ತು ಜವಳಿ, ಖಾದಿ ಮತ್ತು ಗ್ರಾಮದ್ಯೋಗ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.