ETV Bharat / bharat

ಡಿಎಂಕೆ, ಎಐಎಡಿಎಂಕೆ ಪೋಸ್ಟರ್​ನಲ್ಲಿ ಒಂದೇ ಮಹಿಳೆ.. ಯಾರಿವರು, ಯಾಕೆ ಈ ವಿವಾದ? - DMK and AIADMK used same lady's images

ಎಐಎಡಿಎಂಕೆ ಈ ಫೋಟೋವನ್ನು ಈ ಹಿಂದೆ ಸರ್ಕಾರದ ಜಾಹೀರಾತಿಗಾಗಿ ಬಳಸಲಾಗುತ್ತಿತ್ತು ಎಂದು ಹೇಳಿದೆ. ನಂತರ ಈ ಫೋಟೋದ ಬಗ್ಗೆ ಪರಿಶೀಲಿಸಲಾಗಿ ಈ ಫೋಟೋವನ್ನು ಶಟರ್ ಸ್ಟಾಕ್ ಎಂಬ ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ..

DMK and AIADMK used same lady's image for their AD campaign spurred controversy
ಡಿಎಂಕೆ, ಎಐಎಡಿಎಂಕೆ ಪೋಸ್ಟರ್​ನಲ್ಲಿ ಒಂದೇ ಮಹಿಳೆ
author img

By

Published : Mar 21, 2021, 8:09 PM IST

ಚೆನ್ನೈ : ತಮಿಳುನಾಡಿನಲ್ಲಿ ಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳು ಅಧಿಕಾರ ಹಿಡಿಯಲು ಅಬ್ಬರದ ಪ್ರಚಾರಕ್ಕೆ ಮೊರೆ ಹೋಗಿವೆ. ಆದರೆ, ಇವರ ಪ್ರಚಾರದಿಂದ ಜನ ತಬ್ಬಿಬ್ಬಾಗಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್‌ಗಳು, ಫೋಟೋಗಳು, ವಿಡಿಯೋಗಳನ್ನು ಹಾಕುವ ಮೂಲಕ ಪಕ್ಷಗಳು ಪ್ರಚಾರಕ್ಕಿಳಿದಿವೆ. ಎರಡೂ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳೊಂದಿಗೆ ಪರಸ್ಪರ ಆರೋಪ ಮಾಡಿಕೊಂಡು ಬರುತ್ತಿವೆ. ಈ ಬೆನ್ನಲ್ಲೇ ಎರಡೂ ಪಕ್ಷದ ಪೋಸ್ಟರ್‌ಗಳಲ್ಲಿ ಒಂದೇ ಮಹಿಳೆಯ ಫೋಟೋವನ್ನು ಬಳಸಿದ್ದು, ವಿವಾದಕ್ಕೆ ನಾಂದಿ ಹಾಡಿದೆ.

DMK and AIADMK used same lady's image for their AD campaign spurred controversy
ಡಿಎಂಕೆ, ಎಐಎಡಿಎಂಕೆ ಪೋಸ್ಟರ್​ನಲ್ಲಿ ಒಂದೇ ಮಹಿಳೆ

ತಿರುಚಿಯಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಡಿಎಂಕೆ ನಾಯಕ ಸ್ಟಾಲಿನ್ ಕೆಲ ಭರವಸೆಗಳನ್ನು ನೀಡಿದ್ದಾರೆ. ಇದನ್ನೇ ಅನುಸರಿಸಿ, ಡಿಎಂಕೆಯ ಐಟಿ ವಿಭಾಗವು ಚುನಾವಣಾ ಪ್ರಕಟಣೆಯಲ್ಲಿ ಡಿಜಿಟಲ್ ಪೋಸ್ಟರ್‌ನ ತಯಾರು ಮಾಡಿದ್ದು, ಇದರಲ್ಲಿ ಮಹಿಳೆಯ ಚಿತ್ರವೊಂದನ್ನು ಹಾಕಲಾಗಿದೆ.

ಇದಾದ ಕೆಲ ದಿನಗಳಲ್ಲೇ ಎಐಎಡಿಎಂಕೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಆ ಪ್ರಣಾಳಿಕೆ ಪತ್ರದಲ್ಲೂ ಅದೇ ಮಹಿಳೆಯ ಫೋಟೋ ಬಳಸಲಾಗಿದೆ. ಈ ಹಿನ್ನೆಲೆ ಆಡಳಿತ ಪಕ್ಷವು ನಾವು ಪ್ರಚಾರಕ್ಕಾಗಿ ಬಳಸುವ ಮಾದರಿಯ ಫೋಟೋಗಳನ್ನು ನಕಲಿಸಲು ಪ್ರಾರಂಭಿಸಿದೆ ಎಂದು ಡಿಎಂಕೆ ಆರೋಪಿಸಿದೆ.

ಎಐಎಡಿಎಂಕೆ ಈ ಫೋಟೋವನ್ನು ಈ ಹಿಂದೆ ಸರ್ಕಾರದ ಜಾಹೀರಾತಿಗಾಗಿ ಬಳಸಲಾಗುತ್ತಿತ್ತು ಎಂದು ಹೇಳಿದೆ. ನಂತರ ಈ ಫೋಟೋದ ಬಗ್ಗೆ ಪರಿಶೀಲಿಸಲಾಗಿ ಈ ಫೋಟೋವನ್ನು ಶಟರ್ ಸ್ಟಾಕ್ ಎಂಬ ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.