ಚೆನ್ನೈ : ಡಿಎಂಡಿಕೆ ಸ್ಥಾಪಕ ವಿಜಯಕಾಂತ್ ಅವರನ್ನು ಬುಧವಾರ ಇಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಕ್ಷ ತಿಳಿಸಿದೆ. ಎಂಡಿಕೆ ಪ್ರಕಾರ, ವಿಜಯಕಾಂತ್ ಅವರು ನಾರ್ಮಲ್ ಹೆಲ್ತ್ ಚೆಕ್ ಅಪ್ಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಜಯಕಾಂತ್ ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಆರೋಗ್ಯ ತಪಾಸಣೆ ಬಳಿಕ ಒಂದು ಅಥವಾ ಎರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ಆಸ್ಪತ್ರೆ ತಿಳಿಸಿದೆ ಎಂದು ಡಿಎಂಡಿಕೆ ಮಾಹಿತಿ ನೀಡಿದೆ.