ETV Bharat / bharat

ಮಗು ನೋಡಲು ಬಯಸುವ ವಿಚ್ಛೇದಿತ ಪತಿಗೆ ಆತಿಥ್ಯ ನೀಡುವ ಅವಶ್ಯಕತೆ ಇಲ್ಲ: ಹೈಕೋರ್ಟ್​ ಮಹತ್ವದ ತೀರ್ಪು

ಮಗು ನೋಡಲು ಬರುವ ಮಾಜಿ ಪತಿಗೆ ಆತಿಥ್ಯ ನೀಡಬೇಕು ಎಂಬ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್‌ನ ದ್ವಿಸದಸ್ಯ ಪೀಠ ರದ್ದುಗೊಳಿಸಿದೆ.

Divorced husband not required to entertain by wife  Madras High Court  Madras High Court order  ವಿಚ್ಛೇದಿತ ಪತಿಗೆ ಆತಿಥ್ಯ ನೀಡುವ ಅವಶ್ಯಕತೆ ಇಲ್ಲ  ಹೈಕೋರ್ಟ್​ನಿಂದ ಮಹತ್ವದ ತೀರ್ಪು  ಮಾಜಿ ಪತಿಗೆ ಆತಿಥ್ಯ ನೀಡಬೇಕೆಂಬ ಏಕಸದಸ್ಯ ಪೀಠದ ಆದೇಶ  ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್‌  ವಿಚ್ಛೇದಿತ ಪತಿಗೆ ಉಪಹಾರ ನೀಡುವ ಮೂಲಕ ಆತಿಥ್ಯ  ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಪೀಠ
http://10.10.50.90:6060/reg-lowres/26-September-2022/e8a726e9abf434e027302a7189287441_2609a_1664193205_521.jpg
author img

By

Published : Sep 30, 2022, 12:03 PM IST

ಚೆನ್ನೈ, ತಮಿಳುನಾಡು: ವಿಚ್ಛೇದಿತ ಪತಿಗೆ ಉಪಹಾರ ನೀಡುವ ಮೂಲಕ ಆತಿಥ್ಯ ತೋರಬೇಕು ಎಂಬ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್ ದ್ವಿ ಸದಸ್ಯ ಪೀಠ ರದ್ದುಗೊಳಿಸಿದೆ. ಕಕ್ಷಿದಾರರು ಪರಸ್ಪರ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ನ್ಯಾಯಾಧೀಶರು ಪ್ರಭಾವಿತರಾಗಿದ್ದಾರೆ ಎಂದು ಪೀಠ ಹೇಳಿದೆ.

ವಿಚ್ಛೇದಿತ ಪತ್ನಿಯಿಂದ ಹುಟ್ಟಿದ ಮಗುವನ್ನು ಭೇಟಿ ಮಾಡುವಂತೆ ಪತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾಯಾಧೀಶ ಕೃಷ್ಣನ್ ರಾಮಸಾಮಿ ವಿಚಾರಣೆ ನಡೆಸಿದರು. ಈ ಪ್ರಕರಣದಲ್ಲಿ ಪತಿ - ಪತ್ನಿ ಮಗುವಿನೊಂದಿಗೆ ಊಟ ಮಾಡಬೇಕು ಮತ್ತು ಪತ್ನಿ ಮಾಜಿ ಪತಿಯನ್ನು ಅತಿಥಿಯಂತೆ ಕಾಣಬೇಕು. ಚಹಾ, ಉಪಹಾರ ಮತ್ತು ಊಟ ನೀಡಬೇಕು ಎಂದು ಅವರು ಆದೇಶಿಸಿದರು. ಈ ಆದೇಶದ ವಿರುದ್ಧ ಮಹಿಳೆ ಸಲ್ಲಿಸಿದ್ದ ಮೇಲ್ಮನವಿಯು ನ್ಯಾಯಮೂರ್ತಿಗಳಾದ ಪರೇಶ್ ಉಪಾಧ್ಯಾಯ ಮತ್ತು ಭರತ ಚಕ್ರವರ್ತಿ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತು.

ವಿಚಾರಣೆ ನಡೆಸಿದ ಪೀಠ, ಅವಳು ಗುರುಗ್ರಾಮ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಕೆಲಸದ ವೇಳೆ ಚೆನ್ನೈಗೆ ಬರಲು ಸಾಧ್ಯವಾಗಲಿಲ್ಲ. ಮಗು ನೋಡಲು ಇಚ್ಛಿಸುವ ತನ್ನ ಮಾಜಿ ಪತಿಯೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಏಕ ಪೀಠ ನ್ಯಾಯಾಧೀಶರು ನೀಡಿದ ಆದೇಶದ ವಿರುದ್ಧ ಅರ್ಜಿದಾರರ ಪರ ವಕೀಲರು ವಾದಿಸಿದರು.

ಈ ವಾದವನ್ನು ಒಪ್ಪಿಕೊಂಡ ನ್ಯಾಯಮೂರ್ತಿಗಳು ಮಾಜಿ ಪತಿ ಮಗುವನ್ನು ನೋಡಲು ಬಂದಾಗ ಅವರಿಗೆ ಚಹಾ, ಉಪಹಾರ ಮತ್ತು ಊಟ ನೀಡಿ ಉಪಚರಿಸಬೇಕು ಎಂಬುದೂ ಸೇರಿದಂತೆ ವಿವಿಧ ಆದೇಶಗಳನ್ನು ಹೊರಡಿಸಿ ಏಕ ಪೀಠ ಸದಸ್ಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿದರು. ಮಾಜಿ ಪತಿ ಮಗುವನ್ನು ನೋಡಲು ಬಯಸಿದರೆ ಅವರು ಮುಂಚಿತವಾಗಿ ಮಾಹಿತಿ ನೀಡಿ ಗುರುಗ್ರಾಮಕ್ಕೆ ಹೋಗಬಹುದು ಎಂದು ನ್ಯಾಯಾಧೀಶರು ಆದೇಶಿಸಿದರು.

ಓದಿ: ಎಲ್ಲ ಮಹಿಳೆಯರಿಗೆ ಗರ್ಭಪಾತದ ಹಕ್ಕಿದೆ, ವೈವಾಹಿಕ ಅತ್ಯಾಚಾರವೂ ಅಪರಾಧ: ಸುಪ್ರೀಂ ಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.