ETV Bharat / bharat

'ಶಿಸ್ತು ಎಂಬುದು ಸಶಸ್ತ್ರ ಪಡೆಗಳ ವಿಶಿಷ್ಟ ಲಕ್ಷಣ': ಸುಪ್ರೀಂ ಕೋರ್ಟ್ - ನವದೆಹಲಿ

'Discipline is hallmark of Armed Forces'-ನೋಟಿಸ್ ಇಲ್ಲದೇ ಹೆಚ್ಚುವರಿ ರಜೆ ತೆಗೆದುಕೊಂಡಿದ್ದಕ್ಕಾಗಿ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ ಚಾಲಕನನ್ನು ಸೇನಾ ಸೇವೆಯಿಂದ ವಜಾಗೊಳಿಸಿರುವುದನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Supreme Court
ಸುಪ್ರೀಂ ಕೋರ್ಟ್
author img

By

Published : Jul 29, 2023, 7:48 PM IST

ನವದೆಹಲಿ: ಶಿಸ್ತುಬದ್ಧವಾಗಿರುವುದು ಸಶಸ್ತ್ರ ಪಡೆಗಳ ಸೇವೆಯ ಆಂತರಿಕ ಭಾಗವಾಗಿದೆ ಮತ್ತು ಈ ನಿಟ್ಟಿನಲ್ಲಿ ಯಾವುದೇ ಅವಕಾಶ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ರಾಜೇಶ್ ಬಿಂದಾಲ್ ಅವರ ಪೀಠವು ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರ ಸಂಪೂರ್ಣ ಅಶಿಸ್ತು ಸಹಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ನೋಟಿಸ್ ಇಲ್ಲದೇ ಹೆಚ್ಚುವರಿ ರಜೆ ತೆಗೆದುಕೊಂಡಿದ್ದಕ್ಕಾಗಿ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ ಚಾಲಕನನ್ನು(ಮದನ್ ಪ್ರಸಾದ್) ಸೇನಾ ಸೇವೆಯಿಂದ ವಜಾಗೊಳಿಸಿರುವುದನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

'ಶಿಸ್ತು ಎಂಬುದು ಸಶಸ್ತ್ರ ಪಡೆಗಳ ವಿಶಿಷ್ಟ ಲಕ್ಷಣ': ಚಾಲಕ, ಮಾಜಿ ಸಿಪಾಯಿ ಮದನ್ ಪ್ರಸಾದ್ ಒಬ್ಬ ಸಾಮಾನ್ಯ ಅಪರಾಧಿ ಎಂದು ತೋರುತ್ತಿದೆ ಮತ್ತು ಅವರು ತನ್ನ ರಜೆಯ ಕ್ಷಮೆಯನ್ನು ಕೋರಿ ಬಹಳ ಸಮಯದಿಂದ ಹೊರಗುಳಿದಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. "ಶಸ್ತ್ರ ಪಡೆಗಳ ಸದಸ್ಯರಾಗಿದ್ದ ಮೇಲ್ಮನವಿದಾರರ ಕಡೆಯಿಂದ ಅಂತಹ ಸಂಪೂರ್ಣ ಅಶಿಸ್ತು ಕ್ಷಮಿಸಲು ಸಾಧ್ಯವಿಲ್ಲ. ಅವರು 108 ದಿನಗಳ ಸುದೀರ್ಘ ಅವಧಿಗೆ ರಜೆಯ ಅನುಪಸ್ಥಿತಿಯ ಕ್ಷಮೆಯನ್ನು ಕೋರಿದ್ದಾರೆ. ಆದರೆ, ಇದನ್ನು ಅಂಗೀಕರಿಸಿದ್ದರೆ, ಸೇವೆಯಲ್ಲಿರುವ ಇತರರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಶಿಸ್ತು ಎಂಬುದು ಸಶಸ್ತ್ರ ಪಡೆಗಳ ಸೂಚ್ಯ ಲಕ್ಷಣವಾಗಿದೆ ಮತ್ತು ಸೇವೆಯ ಮಾತುಕತೆಗೆ ಸೀಮಿತವಾಗುವುದಿಲ್ಲ ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ, ಚಾಲಕನನ್ನು ಸೇವೆಯಿಂದ ವಜಾಗೊಳಿಸಿ ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಲಖನೌ ಪ್ರಾದೇಶಿಕ ಪೀಠ ಫೆಬ್ರವರಿ 2015ರಲ್ಲಿ ನೀಡಿದ್ದ ಆದೇಶವನ್ನು ಪೀಠವು ಎತ್ತಿಹಿಡಿದಿದೆ.

ಸಕಾರಣವಿಲ್ಲದೇ ನೀಡಲಾದ ರಜೆಯನ್ನು ಮೀರಿದ ಕಾರಣಕ್ಕಾಗಿ ಚಾಲಕನನ್ನು ಸೇವೆಯಿಂದ ವಜಾಗೊಳಿಸಿದ ವಿಚಾರಣಾ ನ್ಯಾಯಾಲಯದ ಎರಡು ಆದೇಶಗಳಲ್ಲಿ ಮಧ್ಯಪ್ರವೇಶಿಸಲು ನ್ಯಾಯಮಂಡಳಿ ನಿರಾಕರಿಸಿದೆ. ಸೇನಾ ಕಾಯಿದೆಯ ಸೆಕ್ಷನ್​​ 39ಬಿ ಅಡಿ ಅವರ ಮೇಲೆ ಆರೋಪ ಹೊರಿಸಲಾಗಿತ್ತು. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಯಲ್ಲಿ ಚಾಲಕರ ಪರ ವಕೀಲರು ಶಿಕ್ಷೆಯು ಅಪರಾಧಕ್ಕೆ ಅಸಮಾನವಾಗಿದೆ ಎಂದು ವಾದಿಸಿದರು. ಆದರೆ ಪ್ರತಿವಾದಿ ಅಧಿಕಾರಿಗಳ ಪರ ವಕೀಲರು, ಚಾಲಕ ತಪ್ಪೊಪ್ಪಿಕೊಂಡ ಘೋಷಿತ ಅಪರಾಧಿ ಎಂದು ಪ್ರತಿವಾದಿಸಿದರು.

ಪ್ರಕರಣದ ಹಿನ್ನೆಲೆ: 1998ರಲ್ಲಿ, ಪ್ರಸಾದ್ ಅವರಿಗೆ ಆರಂಭದಲ್ಲಿ 39 ದಿನಗಳ ರಜೆಯನ್ನು ನವೆಂಬರ್ 8, 1998 ರಿಂದ ಡಿಸೆಂಬರ್ 16, 1998 ರವರೆಗೆ ನೀಡಲಾಗಿತ್ತು. ಅನುಕಂಪದ ಆಧಾರದ ಮೇಲೆ ರಜೆಯನ್ನು ವಿಸ್ತರಿಸಲು ಅವರ ಮನವಿಯನ್ನು ಅಧಿಕಾರಿಗಳು ಅನುಮತಿಸಿದ್ದರು. ಬಳಿಕ ಅವರಿ 30 ದಿನಗಳವರೆಗೆ ಮುಂಗಡ ವಾರ್ಷಿಕ ರಜೆಯನ್ನು ನೀಡಲಾಯಿತು(1998ರ ಡಿಸೆಂಬರ್ 17 ರಿಂದ 1999ರ ಜನವರಿ 15). ಆದರೆ 1999ರಲ್ಲಿ ಅವರು ಮತ್ತೆ ಕರ್ತವ್ಯಕ್ಕೆ ಸೇರಲು ವಿಫಲರಾದರು. ಪತ್ನಿ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ತಾನು ನೋಡಿಕೊಳ್ಳುತ್ತಿರುವುದಾಗಿ ಹೇಳಿದ್ದರು.

ಅಸ್ವಸ್ಥ ಹೆಂಡತಿ ಆರೈಕೆ ಮಾಡಲು ತಾನು ಸೇವೆಗೆ ಗೈರುಹಾಜರಾಗಿದ್ದೆ ಎಂಬ ತನ್ನ ಹೇಳಿಕೆಯನ್ನು ಸಮರ್ಥಿಸಲು ಅವರು(ಮದನ್ ಪ್ರಸಾದ್) ಯಾವುದೇ ದಾಖಲೆಯನ್ನು ನೀಡಿಲ್ಲ ಎಂದು ಉನ್ನತ ನ್ಯಾಯಾಲಯವು ಆರಂಭದಲ್ಲಿ ಗಮನಿಸಿದೆ. ಬದಲಿಗೆ 1999ರಲ್ಲಿ ನ್ಯಾಯಾಲಯದ ವಿಚಾರಣೆಯ ಮುಂದೆ ಸಲ್ಲಿಕೆ ಮಾಡುವಾಗ ಅವರು ಅಸಮಂಜಸ ಹೇಳಿಕೆ ನೀಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೇ ಸೇನಾ ಕಾಯಿದೆ ಅಡಿಯಲ್ಲಿ ನೀಡಲಾದ ಶಿಕ್ಷೆಗಿಂತ ಗಂಭೀರವಾದ ಶಿಕ್ಷೆಯಲ್ಲ ಎಂದು ಕೋರ್ಟ್ ಹೇಳಿದೆ. ಕೋರ್ಟ್ ಮಾರ್ಷಲ್​ನಿಂದ ಶಿಕ್ಷೆಯ ಮೇಲೆ ಸೇವೆಯಿಂದ ವಜಾಗೊಳಿಸುವ ಹಾಗೂ ಶಿಕ್ಷೆಯನ್ನು 14 ವರ್ಷಗಳ ಕೆಳಗಿನ ಯಾವುದೇ ಅವಧಿಯ ಜೈಲು ಶಿಕ್ಷೆಗೆ ಹೋಲಿಸಿದರೆ ಕಡಿಮೆ ಶಿಕ್ಷೆಯಾಗಿ ಪರಿಗಣಿಸಲಾಗಿದೆ. ಸೆಕ್ಷನ್ 120ರ ಉಪ- ವಿಭಾಗ (4) ಸ್ಪಷ್ಟವಾಗಿ ಹೇಳುತ್ತದೆ ಕಾಯಿದೆಯಡಿ ಪರಿಗಣಿಸಿದಂತೆ ಸಮ್ಮರಿ ಕೋರ್ಟ್ ಮಾರ್ಷಲ್(SCM)ಯಾವುದೇ ಶಿಕ್ಷೆಯನ್ನು ನೀಡಬಹುದು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಮೇಲ್ಮನವಿ ವಜಾ: ಉಲ್ಲಂಘನೆಯ ಸ್ವರೂಪದ ಆಧಾರದ ಮೇಲೆ ಅಪರಾಧಗಳಿಗೆ ಶಿಕ್ಷೆಯನ್ನು ವಿಧಿಸಲು ಬಂದಾಗ ಸಮ್ಮರಿ ಕೋರ್ಟ್ ಮಾರ್ಷಲ್ ಸಾಕಷ್ಟು ವಿವೇಚನೆಯೊಂದಿಗೆ ಅಧಿಕಾರವನ್ನು ಹೊಂದಿದೆ ಎಂದು ಉನ್ನತ ನ್ಯಾಯಾಲಯವು ಒತ್ತಿ ಹೇಳಿದೆ. ಹಾಗಾಗಿ ಅವರಿಗೆ ವಿಧಿಸಿರುವ ಶಿಕ್ಷೆ ಅಸಮಾನವಾಗಿದೆ ಎಂಬ ಮದನ್​ ಪ್ರಸಾದ್​ ಅವರ ವಾದವನ್ನು ಕೋರ್ಟ್ ತಳ್ಳಿ ಹಾಕಿದೆ. ಹೀಗಾಗಿ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ. ಅಲ್ಲದೇ ಮಾಜಿ ಸಿಪಾಯಿ ಯಾವುದೇ ವಿನಾಯಿತಿಗೆ ಅರ್ಹನಲ್ಲ ಎಂದು ಪೀಠ ಹೇಳಿದೆ.

ಅಪೀಲುಧಾರನು ತನ್ನ ಸೇವೆಯ ಸಮಯದಲ್ಲಿ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ದಂಡ ವಿಧಿಸುವುದರಿಂದ ಹಿಡಿದು ಕಠಿಣ ಕಾರಾಗೃಹದವರೆಗೆ ಹಲವಾರು ಶಿಕ್ಷೆಗಳನ್ನು ನೀಡಿದ್ದರೂ, ಅವನು ತನ್ನ ತಪ್ಪನ್ನು ಸರಿಪಡಿಸಲಿಲ್ಲ. ಈ ಪ್ರಕರಣದಲ್ಲಿ 6ಬಾರಿ ನಿಯಮ ಉಲ್ಲಂಘನೆಯಾಗಿದೆ. ಆದ್ದರಿಂದ ಅವರಿಗೆ ನೀಡಲಾದ ಶಿಕ್ಷೆಗಿಂತ ಕಡಿಮೆ ಶಿಕ್ಷೆಯನ್ನು ವಿಧಿಸುವ ಮೂಲಕ ಅವರು ಯಾವುದೇ ವಿನಾಯತಿಗೆ ಅರ್ಹರಲ್ಲ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಹೇಳಿದೆ. ಮಾಜಿ ಸಿಪಾಯಿ ಮದನ್ ಪ್ರಸಾದ್ ಪರ ವಕೀಲ ಶಿವಕಾಂತ್ ಪಾಂಡೆ ವಾದ ಮಂಡಿಸಿದರು. ಹಿರಿಯ ವಕೀಲ ಆರ್ ಬಾಲಸುಬ್ರಮಣಿಯನ್ ಅವರು ಕೇಂದ್ರ ಸರ್ಕಾರ ಮತ್ತು ಸೇನೆಯನ್ನು ಪ್ರತಿನಿಧಿಸಿದ್ದರು.

ಸುಮಾರು 25 ವರ್ಷಗಳ ಕಾಲ ಮಾಜಿ ಸಿಪಾಯಿ ಮದನ್ ಪ್ರಸಾದ್ ಅವರನ್ನು ಸೇವೆಯಿಂದ ವಜಾಗೊಳಿಸುವುದರ ವಿರುದ್ಧ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು. ಸಮ್ಮರಿ ಕೋರ್ಟ್ ಮಾರ್ಷಲ್ (SCM) ಸೇವೆಯಿಂದ ವಜಾಗೊಳಿಸುವ ಶಿಕ್ಷೆಯನ್ನು ನೀಡಲಾಗುವುದಿಲ್ಲ ಮತ್ತು ಗರಿಷ್ಠ ಶಿಕ್ಷೆಯು ಒಂದು ವರ್ಷದ ಅವಧಿಯವರೆಗೆ ಜೈಲು ಶಿಕ್ಷೆಯನ್ನು ನೀಡಬಹುದಾಗಿತ್ತು ಎಂದು ಪ್ರಸಾದ್ ಸಮರ್ಥಿಸಿಕೊಂಡಿದ್ದರು. ಆದಾಗ್ಯೂ, ಸುಪ್ರೀಂ ಕೋರ್ಟ್ ಶುಕ್ರವಾರ ಅವರು "ಸಾಮಾನ್ಯ ಅಪರಾಧಿ" ಎಂಬ ಸೇನೆಯ ವಾದವನ್ನು ಅಂಗೀಕರಿಸಿದೆ ಮತ್ತು "ಶಿಸ್ತು ಸಶಸ್ತ್ರ ಪಡೆಗಳ ಸೂಚ್ಯ ಲಕ್ಷಣವಾಗಿದೆ" ಎಂದು ಪುನರುಚ್ಚರಿಸಿದೆ.

ಇದನ್ನೂ ಓದಿ: ಇಡಿ ನಿರ್ದೇಶಕ ಮಿಶ್ರಾ ಸೇವಾವಧಿ ವಿಸ್ತರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.